- ವೈಕುಂಠ ದಕ್ಷಿಣ ದ್ವಾರ ಮೂಲಕ ಸ್ವಾಮಿ ದರ್ಶನ ಪಡೆದ ಭಕ್ತರು - - - ಕನ್ನಡಪ್ರಭ ವಾರ್ತೆ ಹರಿಹರ
ಹರಿಹರೇಶ್ವರ ದೇವಸ್ಥಾನ: ವೈಕುಂಠ ಏಕಾದಶಿಯ ನಿಮಿತ್ತ ಪೂರ್ವದಿಕ್ಕಿನ ಬಾಗಿಲನ್ನು ಮುಚ್ಚಿ ವೈಕುಂಠ ದ್ವಾರ ದಕ್ಷಿಣ ದ್ವಾರದ ಮೂಲಕ ಭಕ್ತರಿಗೆ ಸ್ವಾಮಿ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ಬೆಳಗಿನ ಜಾವ 3.30ರಿಂದಲೇ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು. ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಆಷ್ಟೋತ್ತರ ನಾಮವಳಿ ನಡೆದವು. ವಿವಿಧ ರೀತಿಯ ಹೂವಿನ ಅಲಂಕಾರ ಮಾಡಲಾಯಿತು. 5.30ಕ್ಕೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಭಕ್ತರು ಕೊರೆವ ಚಳಿಯನ್ನೂ ಲೆಕ್ಕಿಸಿದೇ ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ, ಹರಿಹರೇಶ್ವರನ ದಿವ್ಯ ಮೂರ್ತಿಯನ್ನು ಸಾಲುಗಟ್ಟಿ ನಿಂತು ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ದೇವಸ್ಥಾನದ ವತಿಯಿಂದ ಲಾಡು ವಿತರಣೆ ಮಾಡಲಾಯಿತು. ದೇವಸ್ಥಾನ ಆವರಣದಲ್ಲಿ ಶುಕ್ರವಾರ ಸಂಜೆ ವೀಣಾ ವಾದನ ಹಾಗೂ ಮಕ್ಕಳಿಂದ ಭಜನೆ ಕಾರ್ಯಕ್ರಮ ನಡೆದವು.ಸಾಮೂಹಿಕ ದಸರಾ ಉತ್ಸವ ಸಮಿತಿ ಹಾಗೂ ನಾಮದೇವ ಸಿಂಪಿ ಸಮಾಜದ ವತಿಯಿಂದ ನಗರದ ನಡುವಲ ಪೇಟೆ ಬೀದಿಯ ನಾಮದೇವ ವಿಠ್ಠಲ ಮಂದಿರ ದೇವಸ್ಥಾನದಲ್ಲಿ ಬೆಳಗ್ಗೆ ಕಾಕಡಾರತಿ, ಸಂತರಿಂದ ಭಜನೆ, ವಿಠ್ಠಲ ರುಕ್ಮೀಣಿಗೆ ಪಂಚಾಮೃತ ಆಭಿಷೇಕ, ಮಹಾಭಿಷೇಕ, ವಿಷ್ಣು ಸಹಸ್ರನಾಮ ಪಠಣದೊಂದಿಗೆ ತುಳಸಿ ಅರ್ಚನೆ, ಅಷ್ಟಾವದಾನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
- - - -10ಎಚ್‍ಆರ್‍ಆರ್01ಎ-02ಜೆಪಿಜಿ: