- ಹೊನ್ನಾಳಿ ಶಂಕರ ಮಠದಲ್ಲಿ ದಂಪತಿ ಸಮೇತ ಗೋಪೂಜೆ ಸಲ್ಲಿಸಿ ರೇಣುಕಾಚಾರ್ಯ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಗೋವುಗಳನ್ನು ಮಾತೆಯ ರೂಪದಲ್ಲಿ ಪೂಜೆಸುವ ದೇಶವೆಂದರೆ ಅದು ನಮ್ಮ ಭಾರತ. ಗೋಮಾತೆಯ ಪೂಜೆ ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ದೀಪಾವಳಿ ಅಮಾವಾಸ್ಯೆ ಹಿನ್ನೆಲೆ ಸೋಮವಾರ ತುಂಗಾಭದ್ರಾ ನದಿ ದಂಡೆ ಮೇಲಿರುವ ಶಂಕರ ಮಠದಲ್ಲಿ ದಂಪತಿಗಳ ಸಮೇತರಾಗಿ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಂದರ್ಭ ಅವರು ಮಾತನಾಡಿದರು. ಪ್ರತಿ ವರ್ಷದಂತೆ ಇಂದೂ ಭಾರತೀಯ ಗೋರಕ್ಷ ಪರಿಷತ್ ವತಿಯಿಂದ ಗೋಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಗೋಮಾತೆಯನ್ನು ವಸ್ತ್ರ ಮತ್ತು ಹೂವುಗಳಿಂದ ಆಲಂಕರಿಸಿ ಪೂಜೆ ಸಲ್ಲಿಸಿ ಅಕ್ಕಿ, ಬೆಲ್ಲ ನೈವೇದ್ಯ ಸಮರ್ಪಿಸಿದ್ದೇವೆ ಎಂದರು.
ಗೋರಕ್ಷಾ ಪರಿಷತ್‌ನ ಉಮಾಕಾಂತ್ ಜೋಯ್ಸ, ವಾದಿರಾಜ್, ವಕೀಲರಾದ ಶ್ರಿನಿವಾಸ ಮೂರ್ತಿ ಮತ್ತು ಪ್ರಕಾಶ್, ಪುರೋಹಿತರಾದ ಲಕ್ಷ್ಮಣ್ಲ ಜೋಯ್ಸ, ಮಹೇಶ್ ಹುಡೇದ್, ಸತೀಶ್ ಭಾರ್ಗವ್, ಸೇರಿದಂತೆ ಅನೇಕ ಮಹಿಳೆಯವರು ಮಕ್ಕಳು ಇದ್ದರು.
-9ಎಚ್.ಎಲ್.ಐ2: