)
ಕನ್ನಡಪ್ರಭವಾರ್ತೆ ಮಂಡ್ಯ
ಬಳಿಕ ಮಾತನಾಡಿದ ಎಂ.ಎಂ.ಫೌಂಡೇಶನ್ ಅಧ್ಯಕ್ಷರಾದ ಮುದ್ದನಘಟ್ಟ ಮಹಾಲಿಂಗೇಗೌಡ, ಕ್ರೀಡಾಕೂಟದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಮತ್ತು ಕ್ರೀಡಾ ಮನೋಭಾವ ಹೊಂದಿರಬೇಕು. ಸೋತರೆ ಎದೆಗುಂದದೆ ಗೆಲ್ಲುವ ಕಡೆ ಮನಸು ಮಾಡಿ ಸಾಧಕರಾಗಿ. ನಿಮ್ಮ ಗ್ರಾಮ ಶಾಲೆ ಜಿಲ್ಲೆಗೆ ಹೆಸರು ತರುವ ಕೆಲಸ ಮಾಡಬೇಕು ಎಂದರು.
ಕ್ರೀಡಾಜ್ಯೋತಿಯನ್ನು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ. ಆರ್. ಶಶಿಧರ ಈಚಗೆರೆ ವಿದ್ಯಾರ್ಥಿಗಳಿಂದ ಸ್ವೀಕರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಧ್ವಜಾರೋಹಣ ಮಾಡಿದರು.ಕ್ರೀಡಾಕೂಟದಲ್ಲಿ ದುದ್ದ ಹೋಬಳಿಯ 13 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಧಿಕಾರಿ ಜಿ.ಆರ್. ಶಿವರಾಮು, ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಬೋರೆಗೌಡ, ಉಪಾಧ್ಯಕ್ಷರಾದ ಜಯಶೀಲಾ, ವೈದ್ಯಾಧಿಕಾರಿ ಸಹನಾ ಡಿ.ಎಸ್., ಕಾರ್ಯದರ್ಶಿ ಕೆ.ಸಿ.ಗೋವಿಂದ, ರಾಜ್ಯ ಪರಿಷತ್ ಸದಸ್ಯ ಎನ್ . ಗೋಪಿನಾಥ್, ಸಂಘದ ಉಪಾಧ್ಯಕ್ಷರಾದ ಯತಿರಾಜು, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರಮೇಶ್ ಪ್ರಭು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎ.ಚಿಕ್ಕೇಗೌಡ, ಶಿಕ್ಷಣ ಸಂಯೋಜಕರಾದ ಡಿ ಕೆ ರಾಮಯ್ಯ, ಎ.ಎನ್. ಚಂದ್ರಪ್ಪ, ಜಿ. ಮಲ್ಲಿಗೆರೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಮುದ್ದಣ್ಣ, ಎಸ್‌ಡಿಎಂಸಿ ಅಧ್ಯಕ್ಷರಾದ ಕುಮಾರ್, ಬಸವರಾಜು, ಶಿವಾನಂದ , ಮಾದೇಶ್, ಶ್ರೀನಿವಾಸ್ ಮುಂತಾದ ಶಿಕ್ಷಕರು ಭಾಗವಹಿಸಿದ್ದರು.