ಕ್ರೀಡಾಭ್ಯಾಸದಿಂದ ಆರೋಗ್ಯ ಲಭಿಸಲಿದೆ

KannadaprabhaNewsNetwork |  
Published : Sep 10, 2025, 01:03 AM IST
9ಎಚ್ಎಸ್ಎನ್12 : ಅರಕಲಗೂಡು ತಾಲೂಕು ಮಲ್ಲಿಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಪಿಯು ಕಾಲೇಜುಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶಾಸಕ ಎ.ಮಂಜು ಅವರು ಮಾತನಾಡಿದರು. | Kannada Prabha

ಸಾರಾಂಶ

ಜ್ಞಾನದಿಂದ ವಿದ್ಯೆ ಲಭಿಸಿದರೇ,ದೈಹಿಕ ಶ್ರಮ ಮತ್ತು ಮಾನಸಿಕ ದೃಢತೆಯಿಂದ ಕ್ರೀಡೆಯಲ್ಲಿ ಸಾಧನೆ ಮಾಡಬಹುದಾಗಿದೆ. ತಾಲೂಕಿನಲ್ಲಿಯೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಉತ್ತಮ ಜೀವನವನ್ನು ಸಹ ಕಟ್ಟಿಕೊಂಡಿದ್ದಾರೆ. ಕೇವಲ ಹವ್ಯಾಸಿಯಾಗಿ ಕ್ರೀಡಯಲ್ಲಿ ತೊಡಗಬಾರದು. ಸಾಧನೆ ಮಾಡುವ ನಿಟ್ಟಿನಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ಮಾಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತು ನೀಡುವಂತೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.

ತಾಲೂಕಿನ ಮಲ್ಲಿಪಟ್ಟಣ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನದಿಂದ ವಿದ್ಯೆ ಲಭಿಸಿದರೇ,ದೈಹಿಕ ಶ್ರಮ ಮತ್ತು ಮಾನಸಿಕ ದೃಢತೆಯಿಂದ ಕ್ರೀಡೆಯಲ್ಲಿ ಸಾಧನೆ ಮಾಡಬಹುದಾಗಿದೆ. ತಾಲೂಕಿನಲ್ಲಿಯೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಉತ್ತಮ ಜೀವನವನ್ನು ಸಹ ಕಟ್ಟಿಕೊಂಡಿದ್ದಾರೆ. ಕೇವಲ ಹವ್ಯಾಸಿಯಾಗಿ ಕ್ರೀಡಯಲ್ಲಿ ತೊಡಗಬಾರದು. ಸಾಧನೆ ಮಾಡುವ ನಿಟ್ಟಿನಲ್ಲಿ ತೊಡಗಿಕೊಳ್ಳಿ ಎಂದು ಸಲಹೆ ಮಾಡಿದರು.

ಶಾಲಾ ಹಂತದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಅವಕಾಶ ವಿದ್ಯಾರ್ಥಿಗಳಿಗೆ ಇದೆ. ಆದರೆ ಪಿಯು ಮತ್ತು ಪದವಿ ಹಂತದ ಶಿಕ್ಷಣದಲ್ಲಿಯೂ ಕೂಡ ಕ್ರೀಡೆಯಲ್ಲಿ ತೊಡಗಿಕೊಳ್ಳುವ ತುಂಬಾ ಅವಕಾಶಗಳು ಇವೆ. ಭಾಗವಹಿಸುವ ವಿದ್ಯಾರ್ಥಿಗಳು ಕಡಿಮೆ.ಪಿಯು ಹಂತದಲ್ಲಿ ಸದಾ ಓದುವ ಒತ್ತಡ ಇರುತ್ತದೆ. ಓದಿನ ಜತೆ ಒಂದು ಗಂಟೆಯಾದರೂ ತಮಗೆ ಇಷ್ಟವಾದ ಕ್ರೀಡಾಚಟುವಟಿಕೆಗಳ ಅಭ್ಯಾಸದಲ್ಲಿ ತೊಡಗಿಕೊಂಡರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಕ್ರೀಡೆಯಲ್ಲಿ ಸಾಧನೆ ಕೂಡ ಮಾಡಬಹುದಾಗಿದೆ. ಕೇವಲ ಒಂದು ದಿನದ ಕ್ರೀಡಾಕೂಟಕ್ಕೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಸೀಮಿತಗೊಳಿಸದೇ ಸದಾ ಮುಂದುವರಿಸಿ, ಸೋಲು, ಗೆಲುವು ಸಹಜವಾಗಿರುತ್ತದೆ. ಆದರೆ ಆರೋಗ್ಯವಂತ ಜೀವನ ನಿಮ್ಮದಾಗಿರುತ್ತದೆ ಎಂದು ಅವರು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ.ವಿಶ್ವನಾಥ್,ಮಾಜಿ ತಾಪಂ ಅಧ್ಯಕ್ಷ ನರಸೇಗೌಡ, ಗ್ರಾಪಂ ಅಧ್ಯಕ್ಷ ಪ್ರಕಾಶ್, ಪ್ರಾಂಶುಪಾಲರಾದ ಚಂದ್ರಕಲಾ, ಅನಂತರಾಮ್, ಫರ್ಜಾನ ಅಂಜು, ಸರ್ವಮಂಗಳ, ಹರೀಶ್, ಗಿರೀಶ್, ಕುಮಾರಯ್ಯ, ಪದ್ಮ, ದೈಹಿಕ ಶಿಕ್ಷಕ ಸಂಜೀವ್‌ ಕುಮಾರ್, ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಭ್ರಮದ ಕ್ರಿಸ್‌ಮಸ್‌ ಆಚರಣೆಗೆ ಕ್ಷಣಗಣನೆ
ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಶ್ರಮಿಸಲಿ: ಮಂಜುನಾಥ ಕಂಬಳಿ