ಕನ್ನಡಪ್ರಭ ವಾರ್ತೆ ಭದ್ರಾವತಿ
ಬೆಳಗಿನ ಜಾವ ವಿವಿಧ ಹೋಮ ನಡೆಸಲಾಗಿದ್ದು, ನಂತರ ಮಲ್ಲೇಶ್ವರ ಸಭಾಭವನ ಪಕ್ಕದ ಶ್ರೀ ಈಶ್ವರ ದೇವಾಲಯದಿಂದ ಅಮ್ಮನವರ ಹಾಗೂ ಮುನೇಶ್ವರ ಸ್ವಾಮಿಯವರ ಗಂಗೆ ಪೂಜೆಗೆ 101 ಗಂಗೆ ತುಂಬಿದ ಕಲಶಗಳನ್ನು ಹೊತ್ತು ತಂದು ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ನಂತರ ಅಭಿಷೇಕ ನಡೆಸಲಾಯಿತು. ನಂತರ ದೇವಾಲಯ ಉದ್ಘಾಟಿಸಿ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.
ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಅರ್ಪಣೆ:ವಿಗ್ರಹ ಪ್ರತಿಷ್ಠಾಪನೆ ನಂತರ ಅಮ್ಮನವರಿಗೆ ಮತ್ತು ಮುನೇಶ್ವರ ಸ್ವಾಮಿಯವರಿಗೆ ಬೃಹತ್ ಹೂವಿನ ಹಾರವನ್ನು ವಾದ್ಯಗಳೊಂದಿಗೆ ಕ್ರೇನ್ ಮೂಲಕ ಮೆರವಣಿಗೆಯಲ್ಲಿ ತಂದು ಅರ್ಪಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನದ ಪ್ರಮುಖರಾದ ಅಧ್ಯಕ್ಷ ವಿಕಾಸ್ ರಾಜ್, ಖಜಾಂಚಿ ಮೋಹನ್ ಕುಮಾರ್, ಕಾರ್ಯದರ್ಶಿ ಆಕಾಶ್, ಸಾಗರ್, ಕೇಶವ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಜನ್ನಾಪುರ, ಗಣೇಶ್ ಕಾಲೋನಿ, ಹಾಲಪ್ಪ ಶೆಡ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.