ಭಕ್ತ ಇಷ್ಟಾರ್ಥ ನೆರವೇರಿಸುವ ಕಲಿಯುಗದ ಕಾಮದೇನು ಶ್ರೀಗುರುರಾಯ ಆರಾಧನ ಮಹೋತ್ಸವವು ಆ.೨೯ರಂದು ಪೂರ್ವಾರಾಧನೆಯಿಂದ ಆರಂಭಗೊಂಡು ಸೆ.೧ರಂದು ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವವರೆಗೂ ವಿವಿಧ ಭಕ್ತಿಕಾರ್ಯಕ್ರಮಗಳು ನಡೆಯಲಿವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀಗುರು ರಾಘವೇಂದ್ರಸ್ವಾಮಿಗಳ ೩೫೫ನೇ ವರ್ಷದ ಆರಾಧನಾ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ನಡೆಯಲಿದೆ ಎಂದು ಕಾವೇರಿ ನಗರ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕ ಬ್ರಹ್ಮಣ್ಯತೀರ್ಥ ಸ್ವಾಮೀಜಿ ಹೇಳಿದರು.
ನಗರದ ಕಲ್ಲಹಳ್ಳಿಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಕಾವೇರಿ ನಗರ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಮತ್ತು ವ್ಯಾಪರಸ್ಥರು ಆಯೋಜಿಸಿದ್ದ ಆರಾಧನ ಮಹೋತ್ಸವ ಪ್ರಯುಕ್ತ ರಥತೋತ್ಸವ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಕ್ತ ಇಷ್ಟಾರ್ಥ ನೆರವೇರಿಸುವ ಕಲಿಯುಗದ ಕಾಮದೇನು ಶ್ರೀಗುರುರಾಯ ಆರಾಧನ ಮಹೋತ್ಸವವು ಆ.೨೯ರಂದು ಪೂರ್ವಾರಾಧನೆಯಿಂದ ಆರಂಭಗೊಂಡು ಸೆ.೧ರಂದು ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವವರೆಗೂ ವಿವಿಧ ಭಕ್ತಿಕಾರ್ಯಕ್ರಮಗಳು ನಡೆಯಲಿವೆ ಎಂದು ನುಡಿದರು.
ಶ್ರೀಗುರುರಾಯರ ಸನ್ನಿದಾನದಲ್ಲಿ ಪ್ರತಿದಿನ ಸಂಜೆ ವೇಳೆ ಭಕ್ತಿಸುಧೆ, ದಾಸರಕೀರ್ತನೆಗಳು ಹಾಗೂ ಚುಟುಕು ಹಾಸ್ಯದೊಂದಿಗೆ ನೀತಿಕಥೆಗಳನ್ನು ಜಾನಪದ ವಿದ್ವಾನ್ ಶಿವಾರ ಉಮೇಶ್ ನಡೆಸಿಕೊಡಲಿದ್ದಾರೆ, ಸಂಗೀತ ಕಚೇರಿ, ನೃತ್ಯಕಾರ್ಯಕ್ರಮಗಳು ನಡೆಯಲಿವೆ ಎಂದರು.
ನಗರದ ಹೊಸಹಳ್ಳಿ-ಕಾವೇರಿ ನಗರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಸಮುಹ ಪಾಲ್ಗೊಂಡು ರಥೋತ್ಸವದಲ್ಲಿ ಭಾಗಿಯಾಗಬೇಕು ಎಂದು ಕೋರಿದರು.
ಇದೇ ಸಂದರ್ಭದಲ್ಲಿ ಭಕ್ತಾದಿಗಳ ಸಹಯೋಗದಲ್ಲಿ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಮಠದ ಭಕ್ತಾಧಿಕಾಗಳಾದ ಹರ್ಷ ಕನ್ನಲಿ, ಉಮೇಶ್, ಶ್ರೀಧರ್, ಪ್ರಸಾದ್, ಗಿರೀಶ್, ರಾಘು ಮಾರ್ಕೇಟ್, ಎಪಿಎಂಸಿ ತರಕಾರಿ ಮಾರುಕಟ್ಟೆಯ ವ್ಯಾಪಾರಸ್ಥರಿದ್ದರು.ಇಂದು ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರಕನ್ನಡಪ್ರಭ ವಾರ್ತೆ ಮಂಡ್ಯಭಾರತ ಸೇವಾದಳ ಹಾಗೂ ಸೇಂಟ್ ಜಾನ್ ಆಂಬ್ಯುಲೆನ್ಸ್ (ಇಂಡಿಯಾ) ವತಿಯಿಂದ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಗಸ್ಟ್ 27ರಂದು ನಗರದ ಅಶೋಕನಗರದ ಬಾಲಭವನ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಭಾರತ ಸೇವಾದಳದ ಕಾರ್ಯದರ್ಶಿ ಜಿ.ವಿ.ನಾಗರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಉದ್ಘಾಟಿಸಲಿದ್ದಾರೆ. ಸೇವಾದಳ ಅಧ್ಯಕ್ಷ ಬಿ.ಸಿ.ಶಿವಾನಂದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಸ್ವಾತಂತ್ರ್ಯ ಸೇನಾನಿ ಪದ್ಮಭೂಷಣ ಡಾ.ನಾ.ಸು.ಹರ್ಡೀಕರ್ ಪ್ರಶಸ್ತಿಯನ್ನು ಕೆ.ಬಿ.ಚಂದು (ಮದ್ದೂರು), ಕಮಲ್ ಕುಮಾರ್ (ಹಾಸನ), ಡಾ.ನಾಗಲಕ್ಷ್ಮಿ ಚೌಧರಿ (ಬೆಂಗಳೂರು) ಅವರಿಗೆ ಹಾಗೂ ಸಮಾಜ ಸೇವಕ ಡಾ.ವೈ.ಎಸ್.ರಾಮರಾವ್ ಪ್ರಶಸ್ತಿಯನ್ನು ಡಾ.ಪ್ರಕಾಶ್ ಗುಪ್ತ, ಶಿವಶಂಕರ್ (ಬೆಂಗಳೂರು) ಹಾಗೂ ಡಾ.ಎಂ.ಜಿ.ಆರ್.ಅರಸ್ (ಮೈಸೂರು) ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರತಿಭಾ ಪುರಸ್ಕಾರಕ್ಕೆ 925 ಅರ್ಜಿಗಳು ಬಂದಿದ್ದು ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ಶೇ.60 ರಿಂದ 80 ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು. ಪ್ರಶಸ್ತಿ ಪುರಸ್ಕೃತರಿಗೆ 5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಜಿಲ್ಲಾ ಎಸ್ಪಿ ವಿ.ಜೆ.ಶೋಭಾರಾಣಿ, ನಗರಸಭೆ ಆಯುಕ್ತೆ ಪಂಪಾಶ್ರೀ, ವಿಜಯಲಕ್ಷ್ಮಿ ರಘುನಂದನ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಉಪನಿರ್ದೇಶಕಿ ಗೀತಾಲಕ್ಷ್ಮಿ, ಕಲ್ಯಾಣಾಕಾರಿ ಕೋಮಲ್‌ಕುಮಾರ್, ಸಮಾಜ ಸೇವಕ ಯೋಗಾನಂದ, ಮಾಜಿ ಸಭಾಧ್ಯಕ್ಷೆ ಅಂಬುಜಮ್ಮ, ಬಸವರಾಜು, ಬಿ.ಟಿ.ಚಂದ್ರಶೇಖರ್, ಶುಭದಾಯಿನಿ, ವಿನಯಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು ಎಂದರು.
ಸುದ್ಧಿಗೋಷ್ಠಿಯಲ್ಲಿ ಭಾರತ ಸೇವಾ ದಳದ ಖಜಾಂಚಿ ಶಿವಪ್ರಕಾಶ್ ಬಾಬು, ನಿರ್ದೇಶಕ ಜಿ.ವಿ.ಕುಮಾರ್, ಸಿ.ಎಸ್. ಗಣೇಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.