ರಾಮನಗರ: ವೇಮನರು ವೈರಾಗಿಯಾಗಿ ತಮ್ಮ ಕವಿತೆಗಳನ್ನು ತಾಳೆಗರಿಗಳಲ್ಲಿ ರಚಿಸುತ್ತಿದ್ದರು. ಶ್ರೀ ಮಹಾಯೋಗಿ ವೇಮನ ಅವರು ತೆಲುಗಿನ ಶ್ರೇಷ್ಠ ಕವಿಯಾಗಿದ್ದು, ಅವರು ರಚಿಸಿರುವ ಕವನಗಳಲ್ಲಿ ಸಮಾಜದಲ್ಲಿ ಸಮಾನತೆಯನ್ನು ಮೂಡಿಸಬೇಕು ಎಂದು ವೇಮನ ಸಮುದಾಯದ ಮುಖಂಡರಾದ ಗೋವಿಂದರಾಜು ಹೇಳಿದರು.
ವೇಮನರು ತೆಲುಗು ಸಾಹಿತ್ಯದ ಅಗ್ರಗಣ್ಯರು, ಆಧ್ಯಾತ್ಮಿಕ ಚಿಂತಕರು. ವೇಮನರು ಮೊದಲು ದುಶ್ಚಟಗಳ ದಾಸರಾಗಿದ್ದರು. ಅವರ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ವೇಮನರ ತಪ್ಪುಗಳನ್ನು ತಿದ್ದಿ ಅವರನ್ನು ಮಹಾ ವ್ಯಕ್ತಿಯಾಗಿ ಮಾಡಿದರು. ಅವರು ಬರೆದಂತಹ ಅನೇಕ ಕವಿತೆಗಳನ್ನು ಕೈವಾರದ ತಾತಯ್ಯ ಅವರು ಬೆಳಕಿಗೆ ತಂದರು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಕಾರ್ಯಕ್ರಮ ಉದ್ಘಾಟಿಸಿ, ಶ್ರೀ ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಸಮುದಾಯದ ಮುಖಂಡರಾದ ಚಂದ್ರಶೇಖರ್ ರೆಡ್ಡಿ, ದರ್ಶನ್ ರೆಡ್ಡಿ, ಮನ್ ಶಾನ್ ರೆಡ್ಡಿ, ಸುರೇಂದ್ರ ರೆಡ್ಡಿ, ಸಂದೀಪ್ ರೆಡ್ಡಿ, ಸರ್ವೇಶ್ ರೆಡ್ಡಿ, ವನಮಾಲ ರೆಡ್ಡಿ, ನಿರ್ಮಲ ರೆಡ್ಡಿ, ಶಾರದಾರೆಡ್ಡಿ ಹಾಗೂ ಇತರರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.19ಕೆಆರ್ ಎಂಎನ್ 3.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು.