ಹುಬ್ಬಳ್ಳಿ:
ಶ್ರೀಸಾಯಿ ಮಂದಿರದಿಂದ ಆರಂಭಗೊಂಡ ರಥೋತ್ಸವದಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗುವ ಮೂಲಕ ಮತ್ತಷ್ಟು ಮೆರಗು ತಂದವು. ಭಕ್ತರು ಶ್ರೀರಾಮ, ಶ್ರೀಸಾಯಿ ಬಾಬಾ ಪರ ಘೋಷಣೆ ಕೂಗಿದರು. ಇದಕ್ಕೂ ಪೂರ್ವದಲ್ಲಿ ಮಂದಿರದಲ್ಲಿ ಸಾಂಘವಾಗಿ ಧಾರ್ಮಿಕ ಕಾರ್ಯಕ್ರಮ ನಡೆದವು. ಬೆಳಗ್ಗೆ ಸಾಯಿಬಾಬಾ ಅವರಿಗೆ ಕಾಕಡಾರತಿ, ಮಂಗಲಸ್ನಾನ, ಅಲಂಕಾರ, ಪೂಜೆ, ಆರತಿ ಮಾಡಲಾಯಿತು. ನಂತರ ಸಚ್ಚರಿತ್ರೆ ಪಾರಾಯಣ ಮಂಗಲವಾಯಿತು. ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ, ವಿಧಿ-ವಿಧಾನ ನೆರವೇರಿದವು. ಬಳಿಕ ಶ್ರೀರಾಮ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಈ ವೇಳೆ ಮಹಿಳೆಯರು, ಮಕ್ಕಳು ಸೇರಿದಂತೆ ಸದ್ಭಕ್ತರು ತೊಟ್ಟಿಲು ತೂಗುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ನಂತರ ಮಂದಿರದಲ್ಲಿ ಶ್ರೀಶಿರಡಿ ಸಾಯಿ ಸದ್ಭಕ್ತ ಮಂಡಳಿಯಿಂದ ಹಮ್ಮಿಕೊಂಡಿದ್ದ ಶ್ರೀರಾಮ ಜನ್ಮೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ಯುವ ಮುಖಂಡ ವಿಶಾಲ ಅಬ್ಬಯ್ಯ ಉದ್ಘಾಟಿಸಿದರು. ಎಂಡಬ್ಲ್ಯೂಬಿ ಗ್ರೂಪ್ ನಿರ್ದೇಶಕ ರಾಕೇಶ ಭಾಪಣಾ, ಶ್ರೀಸಾಯಿ ಪರಿವಾರ ವೃದ್ಧಾಶ್ರಮದ ಸಲಹೆಗಾರ ಸುರೇಶ ಅಗರವಾಲ್ ಮಾತನಾಡಿದರು. ಶ್ರೀರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಬ್ರಜ್ ಮೋಹನ ಭುತಾಡಾ, ಉದ್ಯಮಿ ಆನಂದ ಕಮತಗಿ, ಪಾರ್ವತಿ ಕಮತಗಿ, ಶಿವಯೋಗಿ ಗದಗಿಮಠ, ರೇಖಾ ಲದ್ವಾ, ಮೋಹನ ಗಿರಡ್ಡಿ, ನೀಪಾ ಮೆಹ್ತಾ, ಮಹೇಂದ್ರ ವಿಕಂಷಿಸ್, ಸಂದೀಪ ಬಿಡಸಾರಿಯಾ, ಗಿರೀಶ ಮಾನೆ, ಪ್ರಕಾಶ ಚಳಗೇರಿ, ಪ್ರಿಯಾಂಕಾ ಕಠಾರೆ, ನರಸಿಂಗಸಾ ರತನ, ಗೋವಿಂದ ಕೋಟಕರ, ಪವಿತ್ರಾ ಕಡಪಟ್ಟಿ ಸೇರಿದಂತೆ ಹಲವರಿದ್ದರು.ದೈವಜ್ಞ ಭವನ:
ಇಂದು ರಾಮನವಮಿ