ಮೂಡನಹಳ್ಳಿಯಲ್ಲಿ ಶ್ರೀ ಸತ್ಯಮ್ಮದೇವಿ ದೇವಾಲಯ ಲೋಕಾರ್ಪಣೆಗೆ ಸಿದ್ಧ

KannadaprabhaNewsNetwork |  
Published : Apr 07, 2026, 01:45 AM IST
6ಎಚ್ಎಸ್ಎನ್5 : ಬಾಗೂರು ಹೋಬಳಿಯ  ಮೂಡನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಸತ್ಯಮ್ಮದೇವಿಯವರ ಲೋಕಾರ್ಪಣೆ ಕಾರ್ಯಕ್ರಮದ  ಕುರಿತು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಣ್ಣ ( ಎಂಬಿ ತಿಮ್ಮೇಗೌಡ ) ಮತ್ತು ಸದಸ್ಯರು  ಮಾಹಿತಿ ನೀಡಿದರು. | Kannada Prabha

ಸಾರಾಂಶ

ಏಪ್ರಿಲ್ 7ರ ಮಂಗಳವಾರದಿoದ ಆರಂಭವಾಗಿ ಅಂದು ಸಂಜೆ 6ಕ್ಕೆ ಗುರುಪ್ರಾರ್ಥನೆ ವೇದ ಘೋಷಕದೊಂದಿಗೆ ಗಣಪತಿ ಪೂಜೆ ಮಹಾಸಂಕಲ್ಪ, ಸ್ವಸ್ತಿ ಪುಣ್ಯಾಹವಾಚನ ದೇವಾನಂದಿ, ರಕ್ಷಾಬಂಧನ, ಪಂಚಗವ್ಯ ವಾಸ್ತು ರಾಕ್ಷೋಘ್ನ ಹೋಮ, ಮಹಾಪೂರ್ಣಾಹುತಿ ಮಂಗಳಾರತಿ ಪ್ರಸಾದಸೇವೆ ಇರುತ್ತದೆ. ಮಾರನೇ ದಿನ ಬುಧವಾರದಂದು ಬಿಂಬಶುದ್ಧಿ ಆಧಿವಾಸ ಪೂಜೆಗಳು ಜಲಧಿವಾಸ ಕ್ಷೀರಾಧಿವಾಸ ಧಾನ್ಯಧಿವಾಸ ಪುಷ್ಪಾಧಿವಾಸ ಫಲಾಧಿವಾಸ ರತ್ನಾಧಿವಾಸ ಚಿತ್ರಪಟಧಿವಾಸ ವಸ್ತ್ರಾಧಿವಾಸ ಶಯ್ಯಾಧಿವಾಸ ನಿದ್ರಾ ಕಳಶ ಪ್ರತಿಷ್ಠಾಪನೆ ಅಷ್ಟಬಂಧನ ಮತ್ತು ಮಹಾಮಂಗಳಾರತಿ ನಡೆದು ಅಂದು ಗ್ರಾಮದ ಬೀದಿಗಳಲ್ಲಿ ಸತ್ಯಮದೇವಿಯವರ ಮೆರವಣಿಗೆಯೂ ಬೆಳ್ಳಿರಥದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬಾಗೂರು

ಹೋಬಳಿಯ ಮೂಡನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಸತ್ಯಮ್ಮದೇವಿಯವರ ದೇವಾಲಯದ ಉದ್ಘಾಟನೆ ಮತ್ತು ಶಿಲಾ ಪ್ರತಿಷ್ಠಾಪನೆ ಹಾಗೂ ಶಿಖರ ಕಳಶ ಸ್ಥಾಪನಾ ಕುಂಭಾಭಿಷೇಕ ಮಹೋತ್ಸವ ಏಪ್ರಿಲ್ 7ರಿಂದ 9ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಶ್ರೀ ಸತ್ಯಮ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಣ್ಣ ( ಎಂ.ಬಿ.ತಿಮ್ಮೇಗೌಡ) ತಿಳಿಸಿದರು.

ಶ್ರೀ ಸತ್ಯಮ್ಮದೇವಿಯವರ ನೂತನ ದೇವಾಲಯ ಲೋಕಾರ್ಪಣೆ ಅಂಗವಾಗಿ ನಡೆಯುವ ಪೂಜಾ ಕಾರ್ಯಕ್ರಮದ ಹಾಗೂ ಸಿದ್ಧತೆಯ ಕುರಿತು ಮಾಹಿತಿ ನೀಡಿದರು.ಗ್ರಾಮದ ಶಕ್ತಿ ದೇವತೆ ಸತ್ಯಮದೇವಿಯವರಿಗೆ ಇದ್ದ ಸಣ್ಣ ಗುಡಿ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರ ತೀರ್ಮಾನದಂತೆ ಎಲ್ಲರ ನೆರವು, ದಾನಿಗಳ ಸಹಕಾರದಿಂದ ನೂತನವಾದ ದೇವಾಲಯ ನಿರ್ಮಾಣಗೊಂಡಿದೆ ದೇವಿಯ ಪ್ರತಿಷ್ಠಾಪನೆ ಸಲುವಾಗಿ 3 ದಿನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಏಪ್ರಿಲ್ 7ರ ಮಂಗಳವಾರದಿoದ ಆರಂಭವಾಗಿ ಅಂದು ಸಂಜೆ 6ಕ್ಕೆ ಗುರುಪ್ರಾರ್ಥನೆ ವೇದ ಘೋಷಕದೊಂದಿಗೆ ಗಣಪತಿ ಪೂಜೆ ಮಹಾಸಂಕಲ್ಪ, ಸ್ವಸ್ತಿ ಪುಣ್ಯಾಹವಾಚನ ದೇವಾನಂದಿ, ರಕ್ಷಾಬಂಧನ, ಪಂಚಗವ್ಯ ವಾಸ್ತು ರಾಕ್ಷೋಘ್ನ ಹೋಮ, ಮಹಾಪೂರ್ಣಾಹುತಿ ಮಂಗಳಾರತಿ ಪ್ರಸಾದಸೇವೆ ಇರುತ್ತದೆ. ಮಾರನೇ ದಿನ ಬುಧವಾರದಂದು ಬಿಂಬಶುದ್ಧಿ ಆಧಿವಾಸ ಪೂಜೆಗಳು ಜಲಧಿವಾಸ ಕ್ಷೀರಾಧಿವಾಸ ಧಾನ್ಯಧಿವಾಸ ಪುಷ್ಪಾಧಿವಾಸ ಫಲಾಧಿವಾಸ ರತ್ನಾಧಿವಾಸ ಚಿತ್ರಪಟಧಿವಾಸ ವಸ್ತ್ರಾಧಿವಾಸ ಶಯ್ಯಾಧಿವಾಸ ನಿದ್ರಾ ಕಳಶ ಪ್ರತಿಷ್ಠಾಪನೆ ಅಷ್ಟಬಂಧನ ಮತ್ತು ಮಹಾಮಂಗಳಾರತಿ ನಡೆದು ಅಂದು ಗ್ರಾಮದ ಬೀದಿಗಳಲ್ಲಿ ಸತ್ಯಮದೇವಿಯವರ ಮೆರವಣಿಗೆಯೂ ಬೆಳ್ಳಿರಥದಲ್ಲಿ ನಡೆಯಲಿದೆ.

ಕೊನೆಯ ದಿನವಾದ ಗುರುವಾರದಂದು ಶ್ರೀ ಸತ್ಯಮ್ಮದೇವಿಯವರ ಪ್ರಾಣಪ್ರತಿಷ್ಠಾಪನೆ ಕಾರ್ಯ ಹಾಗೂ ದುರ್ಗಾ ಹೋಮ, ಪೂರ್ಣಾವತಿ ನಡೆಸಿ ಕುಂಭಕಳಶ ಸ್ಥಾಪನೆ ಮಾಡಿ ಶ್ರೀದೇವಿಯವರಿಗೆ ಫಲಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ನೆರವೇರಿಸಿ ಸರ್ವ ಭಕ್ತಾದಿಗಳಿಗೆ ದರ್ಶನ ಭಾಗ್ಯದ ಅವಕಾಶ ಮಾಡಿಕೊಳ್ಳಲಾಗುತ್ತದೆ ಎಂದ ಅವರು, ಈ ಮೂರು ದಿನಗಳು ಆಗಮಿಸುವ ಸಕಲ ಭಕ್ತವೃಂದಕ್ಕೆ ಅನ್ನದಾನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಮತ್ತು ಕೊಡಗು ಜಿಲ್ಲೆಯ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕತ್ತರಿಘಟ್ಟ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ, ಮಾಜಿಮಂತ್ರಿಗಳಾದ ಎಚ್.ಡಿ.ರೇವಣ್ಣ, ಶಾಸಕರಾದ ಸಿ.ಎನ್. ಬಾಲಕೃಷ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ಎಂಎಲ್‌ಸಿ ಡಾ.ಸೂರಜ್ ರೇವಣ್ಣ, ಮಾಜಿ ಎಂಎಲ್ಸಿ ಎಮ್.ಎ.ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಪುಟ್ಟಸ್ವಾಮಿಗೌಡ, ಗಣ್ಯರಾದ ಭವಾನಿರೇವಣ್ಣನವರು, ಕುಸುಮಬಾಲಕೃಷ್ಣರವರು, ಪರಮ ದೇವರಾಜೇಗೌಡರು, ಎಂ.ಬಿ.ರoಗಶೆಟ್ರು ಸೇರಿ ತಾಲೂಕಿನ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಸಾರ್ವಜನಿಕರು ಸುತ್ತಮುತ್ತಲಿನ ಗ್ರಾಮಸ್ಥರು ಮೂರು ದಿನಗಳು ನಡೆಯುವ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಸತ್ಯಮ್ಮ ದೇವಾಲಯ ಸೇವಾ ಸಮಿತಿಯ ಕಾರ್ಯದರ್ಶಿ ಎಂ.ಎನ್.ಕೃಷ್ಣೇಗೌಡ, ನಿರ್ದೇಶಕರಾದ ಸತ್ಯನಾರಾಯಣ, ಯೋಗೇಶ್ ಸೇರಿ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಜಿ ಶಾಸಕ ಸುರೇಶ್‌ಗೌಡರಿಗೆ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ
ಬೊಮ್ಮೇನಹಳ್ಳಿ ಸುತ್ತಮುತ್ತ ಬೀಡುಬಿಟ್ಟ ಕಾಡಾನೆ ಹಿಂಡು