ಶ್ರೀ ಶನೇಶ್ವರಸ್ವಾಮಿ, ಶೀತಲಾಂಭದೇವಿ ದರ್ಶನ ಪಡೆದ ಭಕ್ತರು

KannadaprabhaNewsNetwork |  
Published : Sep 01, 2024, 01:46 AM IST
ಫೋಟೋ 31ಪಿವಿಡಿ3ಕಡೇ ಶ್ರಾವಣಶನಿವಾರದ ಹಿನ್ನಲೆಯಲ್ಲಿ ಲಕ್ಷಾಂತರ ಸಂಖ್ಯೆಯ ಭಕ್ತರು ಪಾವಗಡಕ್ಕೆ ಆಗಮಿಸಿ ಶ್ರೀಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಈ ಪೋಟೋ ಮುಖ್ಯ,ಇರಲಿ ಸರ್‌ ಫೋಟೋ 31ಪಿವಿಡಿ4ಪಾವಗಡ,ಶ್ರಾವಣಮಾಸ ದಿನದ ಹಿನ್ನಲೆಯಲ್ಲಿ ರಾಜ್ಯ ಜೆಡಿಎಸ್‌ ಶಾಸಂಗ ಪಕ್ಷದ ನಾಯಕರಾದ ಸಿ.ಬಿ.ಸುರೇಶ್‌ಬಾಬು ಇತರೆ ಗಣ್ಯರು ಇಲ್ಲಿನ ಶ್ರೀ ಶನೈಚ್ಚರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ ಇದ್ದರು. | Kannada Prabha

ಸಾರಾಂಶ

ಪಾವಗಡ: ಪಟ್ಟಣಕ್ಕೆ ಶ್ರಾವಣ ಶನಿವಾರ ಹಿನ್ನೆಲೆ ಭಕ್ತರು ಆಗಮಿಸಿ ಶ್ರೀ ಶನೇಶ್ವರಸ್ವಾಮಿ ಹಾಗೂ ಜೇಷ್ಠ ಮಾತೆ ಹಾಗೂ ಶೀತಲಾಂಭದೇವಿ ದರ್ಶನ ಪಡೆದರು.

ಪಾವಗಡ: ಪಟ್ಟಣಕ್ಕೆ ಶ್ರಾವಣ ಶನಿವಾರ ಹಿನ್ನೆಲೆ ಭಕ್ತರು ಆಗಮಿಸಿ ಶ್ರೀ ಶನೇಶ್ವರಸ್ವಾಮಿ ಹಾಗೂ ಜೇಷ್ಠ ಮಾತೆ ಹಾಗೂ ಶೀತಲಾಂಭದೇವಿ ದರ್ಶನ ಪಡೆದರು.

ಶ್ರೀ ಶನೈಚ್ಚರಸ್ವಾಮಿ ದೇವಸ್ಥಾನಕ್ಕೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯದ ಗಮನ ಸೆಳೆದಿದ್ದು, ರಾಜ್ಯದ ಬಳ್ಳಾರಿ, ವಿಜಯನಗರ, ದಾವಣಗೆರೆ, ಹರಿಹರ, ಚಿತ್ರದುರ್ಗ, ಬೆಂಗಳೂರು, ತುಮಕೂರು, ಹಾಸನ, ಚಿಕ್ಕಮಗಳೂರು ಮತ್ತು ಆಂಧ್ರದ ಆನಂತಪುರ, ರಾಯದುರ್ಗ, ಕಲ್ಯಾಣದುರ್ಗ, ಪುಟಪರ್ತಿ ಮತ್ತು ಕಡೆಯಿಂದ ಭಕ್ತರು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಚಿಕ್ಕನಾಯಕನಹಳ್ಳಿಯ ಸಿ.ಬಿ.ಸುರೇಶ್‌ಬಾಬು, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ. ಜೆಡಿಎಸ್‌ ಘಟಕದ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಿಗ್ಗೆ 5 ಗಂಟೆಗೆ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ನಾಗರಕಟ್ಟೆಯಿಂದ ಹಾಗೂ ಚಳ್ಳಕೆರೆ ಮಾರ್ಗದ ರಸ್ತೆ ಪಕ್ಷದಲ್ಲಿ ನಿರ್ಮಿಸಿದ್ದ ಬ್ಯಾರಿಕೇಡ್‌ಗಳ ಮೂಲಕ ಸರದಿ ಸಾಲಿನಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜಾ ಕಾರ್ಯಕ್ರಮ ನೆರೆವೇರಿಸಲಾಯಿತು. ರಾತ್ರಿ 8 ಗಂಟೆವರೆಗೂ ದೇವಸ್ಥಾನದಲ್ಲಿ ನಾನಾ ರೀತಿಯ ಪೂಜಾ ಕೆಂಕೈರ್ಯಗಳು ಜರಿಗಿದವು.

ಮುಖಂಡರಾದ ಬಲರಾಮರೆಡ್ಡಿ, ಅಕ್ಕಲಪ್ಪನಾಯ್ಡ್‌, ಪುರಸಭೆಯ ಮಾಜಿ ಸದಸ್ಯರಾದ ಮನುಮಹೇಶ್‌, ಜಿ.ಎ.ವೆಂಕಟೇಶ್‌ ಕಾರ್ಯಕರ್ತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!