ಶ್ರೀಸಿದ್ಧಗಂಗಾ ಪ.ಪೂ. ಕಾಲೇಜಿಗೆ ಚಾಂಪಿಯನ್ ಪಟ್ಟ

KannadaprabhaNewsNetwork |  
Published : Nov 24, 2025, 02:00 AM IST
ಕ್ಯಾಪ್ಷನ23ಕೆಡಿವಿಜಿ32 ದಾವಣಗೆರೆಯಲ್ಲಿ ನಡೆದ  ಶೈಕ್ಷಣಿಕ ವರ್ಷದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳನ್ನು ಡಾ.ಡಿ.ಎಸ್.ಜಯಂತ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಾಲಾ ಶಿಕ್ಷಣ ಇಲಾಖೆ ಆದೇಶದಂತೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ದಾವಣಗೆರೆ ಜಿಲ್ಲಾಮಟ್ಟದ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳನ್ನು ಜಿಲ್ಲಾ ಉಪನಿರ್ದೇಶಕರ ಆದೇಶದಂತೆ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಶ್ರೀ ಸಿದ್ಧಗಂಗಾ ಪದವಿಪೂರ್ವ ಕಾಲೇಜು ಸಹಯೋಗದೊಂದಿಗೆ ಶುಕ್ರವಾರ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಿತು.

- ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳು । ಬಹುಮಾನ ವಿತರಣೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಾಲಾ ಶಿಕ್ಷಣ ಇಲಾಖೆ ಆದೇಶದಂತೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ದಾವಣಗೆರೆ ಜಿಲ್ಲಾಮಟ್ಟದ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳನ್ನು ಜಿಲ್ಲಾ ಉಪನಿರ್ದೇಶಕರ ಆದೇಶದಂತೆ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಶ್ರೀ ಸಿದ್ಧಗಂಗಾ ಪದವಿಪೂರ್ವ ಕಾಲೇಜು ಸಹಯೋಗದೊಂದಿಗೆ ಶುಕ್ರವಾರ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಿತು.

ಶ್ರೀ ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ನಿರ್ದೇಶಕ ಡಾ. ಜಿ.ಎಸ್. ಜಯಂತ್ ಸ್ಪರ್ಧೆಗಳನ್ನು ಉದ್ಘಾಟಿಸಿದರು. ಉಪ ನಿರ್ದೇಶಕ ಡಿ.ಪಳನಿವೇಲು, ಪ್ರಾಚಾರ್ಯರ ಸಂಘದ ಅಧ್ಯಕ್ಷ ಎನ್.ಓಹಿಲೇಶ್ವರ, ಕಾರ್ಯದರ್ಶಿ ಜೆ.ಶಿವಪ್ಪ, ಪ್ರಾಚಾರ್ಯರಾದ ಆರ್.ಸುರೇಶ, ವಾಣಿಶ್ರೀ ಇತರರು ಇದ್ದರು. ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಿತು. ಓಹಿಲೇಶ್ವರ, ಡಿ.ಎಸ್. ಹೇಮಂತ್, ಗಾಯಿತ್ರಿ ಚಿಮ್ಮಡ್, ವಾಣಿಶ್ರೀ, ಆರ್.ಸುರೇಶ, ಜೆ.ಶಿವಪ್ಪ, ಜೆ.ವಿ.ಭೀಮ ಕುಮಾರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮ ಸಂಚಾಲಕರಾದ ಡಾ. ಬಿ.ಎನ್. ಧನಂಜಯಪ್ಪ, ಸದಾಶಿವ ಹೊಳ್ಳ, ಎಸ್. ಸಂತೋಷ, ಉಪನ್ಯಾಸಕ ಮತ್ತು ಸಿಬ್ಬಂದಿ ಇದ್ದರು.

ಸ್ಪರ್ಧೆಗಳ ವಿಜೇತರು:

ದಾವಣಗೆರೆ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದ್ವಿತೀಯ ಪಿಯುಸಿ ಹಂತದಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ಎಂ.ವರುಣ, ಜಾನಪದ ನೃತ್ಯ ಸ್ಪರ್ಧೆಯಲ್ಲಿ ಎಂ.ಉಷಾರಾಣಿ ಪ್ರಥಮ ಸ್ಥಾನ ಪಡೆದರು. ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಕೆ.ಎನ್.ಕವನ, ಆಂಗ್ಲ ಮಾಧ್ಯಮ ಪ್ರಬಂಧ ಸ್ಪರ್ಧೆಯಲ್ಲಿ ಡಿ.ಜಿ.ಸಿಂಧು ದ್ವಿತೀಯ ಸ್ಥಾನ, ಆಂಗ್ಲ ಮಾಧ್ಯಮ ಚರ್ಚಾ ಸ್ಪರ್ಧೆಯಲ್ಲಿ ಕೆ.ಎಸ್.ಅನುಷಾ, ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಣವ್ ದಿಗ್ಗಾವಿ, ಬಿ.ಎಂ. ಅನಂತಸೇನ ತೃತೀಯ ಸ್ಥಾನ ಪಡೆದರು.

ಪ್ರಥಮ ಪಿಯುಸಿಯ ಹಂತದಲ್ಲಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮಾನ್ಯಶ್ರೀ ಎಂ.ನಾಡಿಗರ್, ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಶಶಾಂಕ ಈರಪ್ಪ ತೆಪ್ಪದ್, ಕನ್ನಡ ಮಾಧ್ಯಮ ಚರ್ಚಾ ಸ್ಪರ್ಧೆಯಲ್ಲಿ ವೇದ ಪ್ರಕಾಶ್ ಅಜ್ಜಂನವರ್, ಆಂಗ್ಲ ಮಾಧ್ಯಮ ಚರ್ಚಾ ಸ್ಪರ್ಧೆಯಲ್ಲಿ ಎನ್.ಹುಸ್ನ ಪ್ರಥಮ ಸ್ಥಾನ ಪಡೆದರು. ಪ್ರಥಮ ಹಾಗೂ ದ್ವಿತೀಯ ಪಿಯುಸಿ ಹಂತದ 11 ವಿವಿಧ ಸ್ಪರ್ಧೆಗಳಿಗೆ ದಾವಣಗೆರೆ ಜಿಲ್ಲೆಯ 41 ಪದವಿಪೂರ್ವ ಕಾಲೇಜುಗಳಿಂದ ಸುಮಾರು 580 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

- - -

-23ಕೆಡಿವಿಜಿ32:

ದಾವಣಗೆರೆಯಲ್ಲಿ ನಡೆದ ಶೈಕ್ಷಣಿಕ ವರ್ಷದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳನ್ನು ಡಾ. ಡಿ.ಎಸ್. ಜಯಂತ್ ಉದ್ಘಾಟಿಸಿದರು.

PREV

Recommended Stories

ಕಾಡಾನೆಗಳ ದಾಳಿಗೆ ನೆಲಸಮವಾದ ಜೋಳದ ಫಸಲು
ವಿಸಿ ನಾಲಾ ರಸ್ತೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ..!