ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಈಗಾಗಲೇ ದೇವಾಲಯ ಹಾಗೂ ಇತರೆಡೆ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿವೆ. ಜ.25ರ ಮುಂಜಾನೆ ಸೂರ್ಯ ಉದಯಕ್ಕೂ ಮುನ್ನ ದೇಗುಲದಲ್ಲಿನ ಸೂರ್ಯಮಂಡಲ ಹಾಗೂ ಗಜಲಕ್ಷ್ಮೀ ರಥಗಳು ವಿಶೇಷವಾಗಿ ಅಲಂಕೃತಗೊಂಡು ದೇವರ ಅನುಷ್ಠಾನದ ಬಳಿಕ ಪೂಜೆಗೆ ಒಳಪಟ್ಟು ನಂತರ ಪಟ್ಟಣದ ರಾಜ ಬೀದಿಗಳಾದ ಪೂರ್ಣಯ್ಯ ಬೀದಿ, ಉತ್ತರಾಧಿಮಠದ ರಸ್ತೆಯ ಮೂಲಕ ಪಟ್ಟಣದ ಮುಖ್ಯಪೇಟೆ ಬೀದಿಯ ಮಾರ್ಗವಾಗಿ ರಥಗಳು ಮೆರವಣಿಗೆ ರೂಪದಲ್ಲಿ ಸಂಚರಿಸಲಿವೆ. ದೇವಾಲಯದಲ್ಲಿ ಕೆಲವು ಸಿದ್ಧತೆಗಳೊಂದಿಗೆ ರಥದ ಸಿದ್ಧತೆ ಅಲಂಕಾರಗಳು ಸಹ ನಡೆಯುತ್ತಿದೆ ಎಂದರು.
ಅಂದು ಮಧ್ಯಾಹ್ನದ ವೇಳೆಗೆ ವೇದ ಮಂತ್ರ ಪಠಣೆಯೊಂದಿಗೆ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ವಜ್ರ ವೈಡೂರ್ಯ ರತ್ನ ಖಚಿತ ಆಭರಣಗಳಿಂದ ಅಲಂಕೃತಗೊಂಡ ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಶ್ರೀರಂಗನ ಉತ್ಸವ ಮೂರ್ತಿಯನ್ನು ವಿವಿಧ ಬಗೆಯ ಬಣ್ಣದ ಹೂಗಳು ಹಾಗೂ ರೇಷ್ಮೆ ಬಟ್ಟೆಗಳಿಂದ ಸರ್ವಾಲಕೃತ ಬ್ರಹ್ಮರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ದೇವಾಲಯದಲ್ಲಿ ಶ್ರೀರಂಗನಿಗೆ ವಿಶೇಷ ಪೂಜಾ ಅಂಕಾರಗಳ ಬಳಿಕ ಬ್ರಹ್ಮರಥೋತ್ಸವಕ್ಕೆ ಶಾಸಕರು, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು, ಸ್ಥಳೀಯ ತಹಸೀಲ್ದಾರ್ ಹಾಗೂ ದೇವಾಲಯ ಸಮಿತಿ ಅಧ್ಯಕ್ಷರು, ಸದಸ್ಯರು ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಸುತ್ತಲೂ ಒಂದು ಸುತ್ತು ರಥೋತ್ಸವದ ಮೆರವಣಿಗೆ ಮಾಡಲಾಗುತ್ತದೆ ಎಂದರು.ರಾಜ್ಯದ ಮೂಲೆಗಳಿಂದ ಸಾವಿರಾರು ಭಕ್ತರು ಈ ರಥೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಬಂದ ಭಕ್ತರಿಗೆ ಭಕ್ತದಾನಿಗಳು ಅನ್ನ ಸಂತರ್ಪಣೆ ಕೂಡ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.