ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ರಂಗನಾಥ ನಗರದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ನೀಡಲಾದ ನಿರ್ಗತಿಕರ ವಾತ್ಸಲ್ಯ ಕಿಟ್ ಹಾಗೂ ಮಾಸಾಶನ ವಿತರಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಹಲವು ಜನಪರ ಕಾರ್ಯ ನಡೆಸುತ್ತಿದೆ ಎಂದರು.
ಕ್ಷೇತ್ರದಲ್ಲಿ ಇದೀಗ 31 ಮಂದಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್, ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 1 ಸಾವಿರ ರು. ಜೊತೆಗೆ ಅವರಿಗೆ ಅತ್ಯಗತ್ಯವಾದ ಪರಿಕರ ಆಹಾರ ಪದಾರ್ಥವನ್ನು ಹಲವು ವರ್ಷಗಳಿಂದ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿರ್ಗತಿಕರನ್ನು ಗುರುತಿಸುವ ಕಾರ್ಯ ನಡೆಸುತ್ತಿದೆ ಎಂದರು.ಈ ವೇಳೆ ಕ್ಷೇತ್ರದ ಯೋಜನಾಧಿಕಾರಿ ಗಣಪತಿ ಭಟ್, ಪುರಸಭಾ ಮಾಜಿ ಸದಸ್ಯರಾದ ಎಸ್.ಟಿ.ರಾಜು, ನಳಿನ ಸೇರಿದಂತೆ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರರ ಉಪಸ್ಥಿತಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್‌ನ್ನು ವಿತರಿಸಿದರು.
ಪಾಂಡವಪುರ:
ಮಡಿವಾಳ ಮಾಚೀದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್, ಒಬಿಸಿ ಅಧ್ಯಕ್ಷ ರಾಮಚಂದ್ರು ಚಾಲನೆ ನೀಡಿದರು.
ವಚನ ಸಾಹಿತ್ಯ ಕ್ಷೇತ್ರಕ್ಕೆ ಬಸವಣ್ಣ ಅವರ ಕೊಡುಗೆ ಅಪಾರವಾಗಿದೆ. ಹಾಗಾಗಿ ಮಡಿವಾಳ ಮಾಚೀದೇವರು ಜಯಂತಿಯನ್ನು ಆಚರಿಸುತ್ತಿದ್ದೇವೆ. ಬಿಜೆಪಿ ಕಾರ್ಯಾಚಾಲಯದಲ್ಲಿ ಎಲ್ಲಾ ಶರಣರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಶರಣರನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.