ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಆರೋಪಿಯಾಗಿರುವ ಸಹಾಯಕ ನಿರ್ದೇಶಕ ಮಹಮದ್ ಹುಸೇನ್ ತನ್ನ ಕಚೇರಿಗೆ ಬೀಗ ಜಡಿದುಕೊಂಡು ನಾಪತ್ತೆಯಾಗಿದ್ದಾನೆ. ತಾಲೂಕಿನ ಮಹದೇವಪುರ ಗ್ರಾಮದ ಸರ್ವೇ ನಂ 411ರಲ್ಲಿ 200 ಎಕರೆ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿದ ಆರೋಪ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತಾಲೂಕಿನ ಭೂ ಮಾಪನ ಇಲಾಖೆ 9 ಜನ ಅಧಿಕಾರಿಗಳಿಂದ ಅಕ್ರಮ ನಡೆದಿರುವುದು ಸಾಭೀತಾದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.
ಜೈಲು ಪಾಲಾದ ಅಧಿಕಾರಿಗಳಿಂದಾಗಿ ಸದಾ ಜನರಿಂದ ಗಿಜಿಗುಡುತ್ತಿದ್ದ ಭೂ ಮಾಪನ ಇಲಾಖೆ ಇದೀಗ ಖಾಲಿ ಖಾಲಿಯಾಗಿದೆ. ಅಲ್ಲದೇ, ಜನಸಾಮಾನ್ಯರು ಜಮೀನು ಸಂಬಂಧ ಕೆಲಸ ಕಾರ್ಯಗಳಿಗೆ ವಿಳಂಬವಾಗುತ್ತಿವೆ. ಸದ್ಯ ಡಿ ಗ್ರೂಪ್‌ನ ಬೆಳೆರಣಿಕೆ ಸಿಬ್ಬಂದಿ ಕಚೇರಿಯನ್ನ ಸ್ವಚ್ಛತೆ ಕಾರ್ಯ ನಡೆಸಿ, ಮುಂದೇನಾಗುತ್ತೊ ಎಂಬ ಆತಂಕದಲ್ಲೇ ಕೆಲಸ ಮಾಡುತ್ತಿದ್ದಾರೆ.ವೃತ್ತಿಪರ ಗ್ರಾಮೀಣ ಕುಶಲಕರ್ಮಿಗಳಿಗೆ ಶಾಸಕರಿಂದ ಉಪಕರಣಗಳ ವಿತರಣೆ
ಖಾದಿ ಮತ್ತು ಗ್ರಾಮಾಂತರ ಕೈಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಮಂಡ್ಯ ವತಿಯಿಂದ ಎಲ್ಲಾ ಆರ್ಹ ಫಲಾನುಭವಿಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ ಫಲಾನುಭವಿಗಳ ಪೈಕಿ ಪರಿಶಿಷ್ಟ ಜಾತಿ 16, ಪರಿಶಿಷ್ಟ ಪಂಗಡ 6, ವಿಶೇಷ ಚೇತನರು 3, ಅಲ್ಪಸಂಖ್ಯಾತರು 3, ಸಾಮಾನ್ಯ ವರ್ಗ 38 ಸೇರಿದಂತೆ ಒಟ್ಟು 66 ಮಂದಿ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಶಾಸಕರು ವಿತರಿಸಿದರು.ಹಾಗೆಯೇ ಮರಗೆಲಸ 4, ಗಾರೆಕೆಲಸ 4, ಕ್ಷೌರಿಕ 2 ಹಾಗೂ ಧೋಬಿ 2 ಸೇರಿದಂತೆ ಒಟ್ಟು 12 ಮಂದಿ ಫಲಾನುಭವಿಗಳಿಗೆ ಪವರ್ ಟೂಲ್ಸ್ ಉಪಕರಣಗಳನ್ನು ವಿತರಿಸಲಾಯಿತು.