- ಸ್ವಂತ ಕಾರ್ಖಾನೆಯಿಂದಲೇ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಕೆ
- - -
ಕನ್ನಡಪ್ರಭ ವಾರ್ತೆ, ದಾವಣಗೆರೆಬಿರು ಬೇಸಿಗೆಯಲ್ಲಿ ತಾಲೂಕಿನ ಕುಕ್ಕವಾಡ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ನೀರಿಲ್ಲದೇ ಒಣಗಿ ನಾಶವಾದ ಕಬ್ಬಿನ ಬೆಳೆಯ ಸಮೀಕ್ಷೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ದಾವಣಗೆರೆ ಸಕ್ಕರೆ ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ ಭರವಸೆ ನೀಡಿದರು.
ಒಣಗಿರುವ ಕಬ್ಬಿನ ಬೆಳೆ ಸಮೀಕ್ಷೆಯನ್ನು ತಮ್ಮ ಕಾರ್ಖಾನೆಯಿಂದ ನಡೆಸಿ, ಸರ್ಕಾರಕ್ಕೆ ಬೆಳೆ ನಾಶವಾದ ವರದಿ ಸಲ್ಲಿಸುತ್ತೇವೆ. ರೈತರ ನಿಯೋಗವು ಒಣಗಿರುವ ಕಬ್ಬಿನ ಬೆಳೆ ಸಮೀಕ್ಷೆ ಸೇರಿದಂತೆ ಬಾಕಿ ಇರುವ ಕಬ್ಬು ಬಿಲ್ ರೈತರಿಗೆ ತಕ್ಷಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೀರಿ. ಇನ್ನು 2-3 ದಿನದಲ್ಲೇ ಕಬ್ಬಿನ ಬಿಲ್ ಹಣವನ್ನೂ ಬಿಡುಗಡೆ ಮಾಡುತ್ತೇವೆಂದು ಭರವಸೆ ನೀಡುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರು.
- - - (* ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು)
ದಾವಣಗೆರೆಯಲ್ಲಿ ರೈತ ಮುಖಂಡರ ನಿಯೋಗದೊಂದಿಗೆ ದಾವಣಗೆರೆ ಶುಗರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಎಸ್.ಎಸ್.ಗಣೇಶ ಸಮಾಲೋಚನೆ ನಡೆಸಿದರು. ಹೂವಿನಮಡು ಶಶಿ, ಓಬಲೇಶ, ರವಿಕುಮಾರ, ಕುಕ್ಕುವಾಡ ಕೆ.ಜಿ.ರವಿಕುಮಾರ, ನಾಗರಸನಹಳ್ಳಿ ಚನ್ನಪ್ಪ ಇತರರು ಇದ್ದರು.