ಜಿಲ್ಲೆಯಾದ್ಯಂತ ಸೋಮವಾರ (ಮಾ.25) ದಿಂದ ಏಪ್ರಿಲ್ 6 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಈ ಬಾರಿ 14014 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
- 25 ರಿಂದ ಏ.6 ರವರೆಗೆ ಪರೀಕ್ಷೆ । 50 ಕೇಂದ್ರಗಳಲ್ಲಿ ಪರೀಕ್ಷೆ । ಈ ಬಾರಿ ಎಲ್ಲಾ ಕೊಠಡಿಗಳಲ್ಲೂ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಾದ್ಯಂತ ಸೋಮವಾರ (ಮಾ.25) ದಿಂದ ಏಪ್ರಿಲ್ 6 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಈ ಬಾರಿ 14014 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ಜಿಲ್ಲೆಯಲ್ಲಿ 50 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಇದೇ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೊಠಡಿ ಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತಮ್ಮ ಕಚೇರಿಯಲ್ಲಿಯೇ ಕುಳಿತು ಅಧಿಕಾರಿಗಳು ಚಲನವಲನ ವನ್ನು ವೀಕ್ಷಿಸಬಹುದು. ಭಾನುವಾರದಂದು ಸಿಸಿ ಟಿವಿಗಳನ್ನು ಪರಿಶೀಲನೆ ನಡೆಸಲಾಯಿತು. ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಳತೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರ ವ್ಯಾಪ್ತಿಯೊಳಗೆ ಇರುವ ಜೆರಾಕ್ಸ್ ಅಂಗಡಿಗಳು ಓಪನ್ ಮಾಡಬಾರದೆಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾದ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯನ್ನು ಶಾಲೆಗಳಲ್ಲಿ ಮಾಡಿಕೊಳ್ಳಲಾಗಿದೆ. ಸಿಬ್ಬಂದಿಗಳ ನೇಮಕ: ಸುಗಮವಾಗಿ ಪರೀಕ್ಷೆಗಳು ನಡೆಸುವ ಉದ್ದೇಶದಿಂದ ಜಿಲ್ಲೆಯಲ್ಲಿ 1303 ಅಧಿಕಾರಿ, ಸಿಬ್ಬಂದಿ ನೇಮಿಸಲಾಗಿದೆ. 650 ಪರೀಕ್ಷಾ ಕೊಠಡಿ ಮೇಲ್ವಿಚಾರಕರು, 50 ಮಂದಿ ಕಸ್ಟೋಡಿಯನ್‌ಗಳು, 51 ಸ್ಥಾನಿಕ ಜಾಗೃತದಳ, 50 ಮುಖ್ಯ ಅಧೀಕ್ಷಕರು, 7 ಮಂದಿ ಉಪ ಮುಖ್ಯ ಮೌಲ್ಯಮಾಪಕರು, 50 ಮೊಬೈಲ್ ಸ್ವಾಧೀನಾಧಿಕಾರಿಗಳು, 8 ಬ್ಲಾಕ್ ನೋಡೆಲ್ ಅಧಿಕಾರಿಗಳು, 3 ಜಿಲ್ಲಾ ಜಾಗೃತ ದಳ ಅಧಿಕಾರಿಗಳ ತಂಡ, 20 ಅಧಿಕಾರಿಗಳ ಡಯಟ್ ತಂಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದ ವಿಚಕ್ಷಣಾ ಜಾಗೃತದಳ, 50 ವಿಷಯ ನಿರ್ವಾಹಕರು, 100 ಡಿ ದರ್ಜೆ ಸಹಾಯಕರು, 21 ಪ್ರಶ್ನೆ ಪತ್ರಿಕೆ ಮಾರ್ಗಾಧಿ ಕಾರಿಗಳ ತಂಡಗಳನ್ನು ರಚಿಸಲಾಗಿದೆ. 125 ಪೊಲೀಸ್ ಸಿಬ್ಬಂದಿ, 50 ಆರೋಗ್ಯ ಸಹಾಯಕರು, 30 ವಾಹನ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.---- ಬಾಕ್ಸ್------ಒಟ್ಟು ಪರೀಕ್ಷಾ ಕೇಂದ್ರಗಳು- 50ರೆಗ್ಯುಲರ್ ವಿದ್ಯಾರ್ಥಿಗಳು- 12,947ಪುನರಾವರ್ತಿತ- 468ಖಾಸಗಿ ವಿದ್ಯಾರ್ಥಿಗಳು- 459ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು- 134ಇತರೆ- 6ಒಟ್ಟು ವಿದ್ಯಾರ್ಥಿಗಳು- 14014--------------------------------------------ಬ್ಲಾಕ್ ಪರೀಕ್ಷೆ ತೆಗೆದುಕೊಂಡವರು---------------------------------------------ಬೀರೂರು 1290--------------------------------------ಕಡೂರು 2608-------------------------------------ತರೀಕೆರೆ 2315-------------------------------------ಚಿಕ್ಕಮಗಳೂರು 3737-------------------------------------ಕೊಪ್ಪ 1020-------------------------------------ಮೂಡಿಗೆರೆ 1437--------------------------------------ಎನ್.ಆರ್.ಪುರ1006-----------------------------------ಶೃಂಗೇರಿ 601---------------------------------- 24 ಕೆಸಿಕೆಎಂ 3ಮೂಡಿಗೆರೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ವೀಕ್ಷಣೆಗಾಗಿ ಬಿಆರ್‌ಸಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.