ಕನ್ನಡಪ್ರಭ ವಾರ್ತೆ ಮಂಡ್ಯ
ನೆಹರು ನಗರದ ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.94 ರಷ್ಟು ಫಲಿತಾಂಶ ಲಭಿಸಿದೆ. ಶಾಲೆಯ ವಿದ್ಯಾರ್ಥಿಗಳಾದ ಎಂ.ಡಿ.ಯುವಿಕಾ (591), ಎಂ.ಪ್ರಾರ್ಥನಾ (591), ಹನ್ಸರಾ ನಾಹಿದ್ (568), ಎಂ.ಎಲ್.ಲೋಕೇಶ್ (542), ಮಹದೇವ ಪ್ರಸಾದ್ (538), ಕೀರ್ತನಾ (535) ಅವರು ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.ಪರೀಕ್ಷೆ ಹಾಜರಾಗಿದ್ದ ವಿದ್ಯಾರ್ಥಿಗಳಲ್ಲಿ ಆರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 45 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಮಾಜ ವಿಜ್ಞಾನ ಮತ್ತು ಹಿಂದಿ ವಿಷಯದಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದು, ಕನ್ನಡ ವಿಷಯದಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.
ಅತಿ ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಎಸ್.ಬಿ.ಇ.ಟಿ. ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಹಾಗೂ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅಭಿನಂದಿಸಿದರು. ಗಣಿತಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದ್ದು, ಗಣಿತ ವಿಷಯದ ಶಿಕ್ಷಕಿ ಆಶಾ ಅವರನ್ನು ಗಣಿತಶಾಸ್ತ್ರ ವಿಷಯದ ಮುಖ್ಯಸ್ಥ ಎಂ.ಅವಿನಾಶ್ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಶೈಕ್ಷಣಿಕ ಪಾಲುದಾರರಾದ ಅವಿನಾಶ್, ರಾಘವೇಂದ್ರ, ಡಾ.ಮೋಹನ್, ಮುಖ್ಯೋಪಾಧ್ಯಾಯ ಮಹದೇವಯ್ಯ ಹಾಗೂ ಸಹ ಶಿಕ್ಷಕರು ಹಾಜರಿದ್ದರು.ಗ್ಲೋಬಲ್ ಶಾಲೆಗೆ ಉತ್ತಮ ಫಲಿತಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ೨೦೨೪-೨೫ ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಮಂಡ್ಯ ನಗರದ ಗ್ಲೋಬಲ್ ಪಬ್ಲಿಕ್ ಶಾಲೆಗೆ ಉತ್ತಮ ಫಲಿತಾಂಶ ಬಂದಿದೆ. ವಿಧ್ಯಾರ್ಥಿಗಳಾದ ಎನ್.ಸಿಂಚನ, ಸಿ.ಹೇಮಂತ್ ಕುಮಾರ್ ಮತ್ತು ಆರ್.ಹಂಸಿಕ ಅವರು ಕ್ರಮವಾಗಿ ೫೬೧, ೫೬೦ ಮತ್ತು ೫೫೬ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಉಳಿದ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯೋಗಾನಂದ, ಕಾರ್ಯದರ್ಶಿ ನರೇಂದ್ರಬಾಬು, ಪ್ರಾಂಶುಪಾಲೆ ನೇತ್ರಾವತಿ, ಶಿಕ್ಷಕ ವರ್ಗ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.