
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ರಂಭಾಪುರ ಬಡಾವಣೆಯಲ್ಲಿರುವ ಪ್ರತಿಷ್ಠಿತ ಸೇಂಟ್ ಜೋಸೆಫ್ ಸಂಯುಕ್ತ ಪದವಿ ಪೂರ್ವ ಕಾಲೇಜು ರಾಜಸ್ಥಾನದ ಮೋಷನ್ ನೀಟ್ ಹಾಗೂ ಜೆಇಇ ಶಿಕ್ಷಣ ಸಂಸ್ಥೆಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಲುವಾಗಿ ಸಹಯೋಗಗೊಂಡಿರುವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನೀಟ್ ಮತ್ತು ಜೆಇಇ ತರಬೇತಿಯಲ್ಲಿ ರಾಜಸ್ಥಾನದ ಮೋಷನ್ ಶಿಕ್ಷಣ ಸಂಸ್ಥೆಯು ದೇಶದಲ್ಲಿಯೇ ವೈದ್ಯ, ದಂತ ವೈದ್ಯ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರವೇಶಾತಿಗಳನ್ನು ದೊರಕಿಸಿಕೊಡುವುದರಲ್ಲಿ ಮೋಷನ್ ಶಿಕ್ಷಣ ಸಂಸ್ಥೆಯ ದೇಶದಲ್ಲಿಯೇ ನಂಬರ 1 ಸ್ಥಾನದಲ್ಲಿದೆ. ಈ ಸಂಸ್ಥೆ ಉದ್ಧೇಶ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೂಡಾ ವೈದಕೀಯ ಹಾಗೂ ಇಂಜನಿಯರಿಂಗ್ ಸೀಟು ದೊರಕಿಸಿಕೊಡುವ ಉದ್ದೇಶ ಹೊಂದಿದೆ. ವಿಜಯಪುರದಲ್ಲಿ ಸೇಂಟ್ ಜೋಸೆಫ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಜೊತೆಗೆ ಮೋಷನ ಶಿಕ್ಷಣ ಸಂಸ್ಥೆ ಸಹಯೋಗ ಹೊಂದಿದೆ. ಇದು ಸ್ಥಳೀಯವಾಗಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕನಸು ನನಸು ಮಾಡಲು ಸಹಾಯವಾಗುತ್ತದೆ ಎಂದರು.ಸೇಂಟ್ ಜೋಸೆಫ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ನೀಟ್ ಮತ್ತು ಜೆಇಇ ಘಟಕದ ತರಬೇತಿಯ ನಿರ್ದೇಶಕಿ ಸುಸನ್ ಬಾಸ್ಕೋ ಮಾತನಾಡಿ, ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯು ಮೋಷನ್ ಸಂಸ್ಥೆ ಜೊತೆಗೆ ಸಹಯೋಗ ಹೊಂದಿರುವುದು ವೈದ್ಯ ಹಾಗೂ ಇಂಜನಿಯರ್ ಆಗುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಉದ್ದೇಶ ಹೊಂದಿದೆ. ರಾಜಸ್ಥಾನದಲ್ಲಿ ಕೊಡುವ ತರಬೇತಿಯನ್ನು ಸ್ಥಳಿಯವಾಗಿ ಇಲ್ಲಿಯೇ ನಮ್ಮ ಸೇಂಟ್ ಜೋಸೆಫ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದೊರಕಿಸಿಕೊಡುವುದರಿಂದ ಪಾಲಕರಿಗೆ ಸಮಯ ಮತ್ತು ಹಣದ ಉಳಿತಾಯವಾಗುತ್ತದೆ ಎಂದರು.
ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಾಜು ಜೋಸೆಫ್ ಮಾತನಾಡಿ, ದೇಶದಲ್ಲೇ ನೀಟ್ ಮತ್ತು ಜೆಇಇ ತರಬೇತಿಯಲ್ಲಿ ನಂ.1 ಸ್ಥಾನ ಪಡೆದ ರಾಜಸ್ಥಾನದ ಕೋಟಾದ ಪ್ರಸಿದ್ಧ ಮೋಷನ್ ಶಿಕ್ಷಣ ಸಂಸ್ಥೆಯ ಜೊತೆಗೆ ಸೇಂಟ್ ಜೋಸೆಫ್ ಸಂಯುಕ್ತ ಪದವಿ ಪೂರ್ವ ಕಾಲೇಜು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಸಹಯೋಗ ಪಡೆದುಕೊಂಡಿವೆ. ಆದ್ದರಿಂದ ಪಾಲಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.ಸಂಸ್ಥೆ ಉಪಾಧ್ಯಕ್ಷ ಡಾ.ನವೀನ ಆಂಥೋನಿ ಮಾತನಾಡಿ, ನಮ್ಮ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ನಿಗದಿಪಡಿಸಿದ ಪಠ್ಯಪುಸ್ತಕದ ಬೋಧನೆ ಜೊತೆಗೆ ಬೆಳಗಿನ ಅವಧಿಗಳನ್ನು ನಮ್ಮ ಕಾಲೇಜಿನ ಜೊತೆಗೆ ಸಹಯೋಗ ಹೊಂದಿರುವ ಮೋಷನ್ ಶಿಕ್ಷಣ ಸಂಸ್ಥೆಯು ಮಕ್ಕಳನ್ನು ಪ್ರತಿದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ನೀಡುತ್ತಾರೆ. ಇದು ವಿಜಯಪುರ ನಗರದಲ್ಲಿಯೇ ಮೊಷನ್ ಸಂಸ್ಥೆ ಜೊತೆಗೆ ಸಹಯೋಗಹೊಂದಿರುವ ಪ್ರಥಮ ಕಾಲೇಜು ನಮ್ಮ ಸೇಂಟ್ ಜೋಸೆಫ್ ಕಾಲೇಜಾಗಿದೆ ಎಂದರು.
ಸಂಸ್ಥೆ ಮುಖ್ಯಸ್ಥೆ ಅನಾಲೀಸಾ ಬಾಸ್ಕೋ ಮಾತನಾಡಿ, 2025-26ನೇ ಸಾಲಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ಎಸ್ಎಸ್ಎಲ್‌ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಡಿಸೆಂಬರ್ ಮತ್ತು ಜನವರಿ ಈ ಎರಡು ತಿಂಗಳಲ್ಲಿ ಬರುವ ಪ್ರತಿ ಭಾನುವಾರ ಬೆಳಗ್ಗೆ 10:30ರಿಂದ ಸಂಜೆ 04:30 ರವರೆಗೆ ಪ್ರಥಮ ಪಿಯುಸಿ ಪ್ರವೇಶಾತಿ ಮತ್ತು ಶಿಷ್ಯವೇತನ ಪರೀಕ್ಷೆ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ಈ ಶೈಕ್ಷಣಿಕ ಸಾಲಿನಲ್ಲಿ ವಿಜಯಪುರದಲ್ಲಿ ಎಸ್ಎಸ್ಎಲ್‌ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಉಪಪ್ರಾಚಾರ್ಯ ಜಯತೀರ್ಥ ಪಂಢರಿ, ಜೆನಿಶಾ ನಾಯರ್, ಪಾರ್ಸಾ ಇನಾಮದಾರ, ಅನಿಕೇತ ಮೋಹಿತೆ, ಶೃತಿ ರೊಟ್ಟಿ, ಆನಂದ ಬಿರಾದಾರ, ಪುರುಷೋತ್ತಮ.ಪಿ, ರಾಜೇಶ ನುಚ್ಚಿ, ಝಿಯಾ ನಾಯ್ಕೋಡಿ ಇದ್ದರು.