ಕೇಂದ್ರದ ಯೋಜನೆಗಳಿಗೆ ಸ್ಪಂದನೆ ನೀಡದ ರಾಜ್ಯ ಸರ್ಕಾರ: ಪೂಜಾರಿ ದೂರು

KannadaprabhaNewsNetwork |  
Published : Sep 21, 2026, 01:15 AM IST
ಕೋಟಾ | Kannada Prabha

ಸಾರಾಂಶ

ಬಾಳೆಹೊನ್ನೂರುಕೇಂದ್ರ ಸರ್ಕಾರದ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ರಾಜ್ಯ ಸರ್ಕಾರ ಸ್ಪಂದನೆ ನೀಡದೆ ನಿರ್ಲಕ್ಷ್ಯ ತಾಳುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ದೂರಿದರು.

ಬಿರುಗಾಳಿ ಬೀಸಿದರೂ ಬಿಜೆಪಿ ಕಾರಣ ಎನ್ನುವ ಕಾಂಗ್ರೆಸ್

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕೇಂದ್ರ ಸರ್ಕಾರದ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ರಾಜ್ಯ ಸರ್ಕಾರ ಸ್ಪಂದನೆ ನೀಡದೆ ನಿರ್ಲಕ್ಷ್ಯ ತಾಳುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ದೂರಿದರು.

ಕೇಂದ್ರ ಸರ್ಕಾರ ಜನ ಸಾಮಾನ್ಯರ ಉಪಯೋಗಕ್ಕಾಗಿ ಹತ್ತಾರು ಯೋಜನೆ ಜಾರಿಗೊಳಿಸಿದೆ. ಇದರ ಸಮರ್ಪಕ ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರ ಕ್ರಮವಹಿಸದೆ ಜನರಿಗೆ ಅನ್ಯಾಯವೆಸಗುತ್ತಿದೆ ಎಂದು ಪಟ್ಟಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರದ ಆಯುಷ್ಮಾನ್ ಯೋಜನೆ ಬಡಜನರ ಉಪಯೋಗಕ್ಕಾಗಿ ಮಾಡಿದ್ದು ₹5 ಲಕ್ಷದವರೆಗೆ ಆರೋಗ್ಯ ಯೋಜನೆ ನೀಡುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಿಂದ ಮಂಗಳೂರಿನ ವೆನ್ಲಾಕ್ ಹಾಗೂ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಪ್ರತಿನಿತ್ಯ 8-10 ರೋಗಿಗಳು ತನ್ನ ಶಿಫಾರಸ್ಸು ಪಡೆದು ಬೇರೆ ಬೇರೆ ಕಾರಣಗಳಿಗೆ ದಾಖಲಾಗುತ್ತಿದ್ದಾರೆ. ಆದರೆ ರೋಗಿಗಳು ನೇರವಾಗಿ ಹೋದರೆ ಇಲ್ಲಿ ಬೆಡ್ ವ್ಯವಸ್ಥೆ ಇಲ್ಲವೆನ್ನುತ್ತಿದ್ದಾರೆ. ಇದು ಆಯುಷ್ಮಾನ್ ಭಾರತ್ ಯೋಜನೆಯ ಪರೋಕ್ಷ ನಿರಾಕರಣೆ ಕ್ರಮವಾಗಿದೆ. ಈ ಬಗ್ಗೆ ನೇರವಾಗಿ ಆರೋಗ್ಯ ಮಂತ್ರಿಗಳ ಬಳಿ ಮಾತನಾಡಲಾಗಿದೆ.

ಕೇಂದ್ರದ ಮತ್ತೊಂದು ಪ್ರಮುಖ ಯೋಜನೆ ಕುಸುಮ್ ಬಿ ಮತ್ತು ಸಿಗೆ ಕೇಂದ್ರದ ಸಂಪೂರ್ಣ ಸಬ್ಸಿಡಿ ದೊರೆಯಲಿದ್ದು, ಇದಕ್ಕೆ ಕೇಂದ್ರ ಸರ್ಕಾರ ಜಾಗ ಮಾತ್ರ ನೀಡಬೇಕು. ಆದರೆ ರಾಜ್ಯ ಇದಕ್ಕೆ ಎಲ್ಲೂ ಕೂಡ ಜಾಗ ನೀಡದೆ ಯೋಜನೆ ಹಣ ವಾಪಾಸ್ ಹೋಗುತ್ತಿದೆ. ಸಾಮಾನ್ಯ ಬಡವರಿಗೆ ಇಎಸ್‌ಐಗಿಂತ ಒಳ್ಳೆಯ ಆರೋಗ್ಯ ಯೋಜನೆಯಿಲ್ಲ. ಇದಕ್ಕೆ ಕಾರ್ಮಿಕ ಮತ್ತು ಕಾರ್ಯನಿರ್ವಹಿಸುವ ಸಂಸ್ಥೆ ಹೆಚ್ಚಿನ ಹಣ ಭರಿಸುತ್ತದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಬಹಳಷ್ಟು ಆರ್ಥಿಕ ಹೊರೆ ಭರಿಸಬೇಕಿಲ್ಲ. ದುರಂತವೆಂದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಎಸ್‌ಐ ಅನುಷ್ಠಾನಗೊಳಿಸುತ್ತಿಲ್ಲ. ಹತ್ತಾರು ಬಾರಿ ಈ ಬಗ್ಗೆ ಸಭೆ ಕರೆದರೂ ಸ್ಪಂದಿಸುತ್ತಿಲ್ಲ. ಇಎಸ್‌ಐ ಆಸ್ಪತ್ರೆಗೆ ದಾಖಲಾದವರು ಕಡೆಯಲ್ಲಿ ಹಣ ಕಟ್ಟಿ ಡಿಸ್ಚಾರ್ಜ್ ಆಗುವ ಪರಿಸ್ಥಿತಿ ಬಂದಿದೆ.

₹10-15 ಲಕ್ಷ ಹಣ ಶಸ್ತ್ರ ಚಿಕಿತ್ಸೆಗಳಿಗೆ ಹಣ ಪಾವತಿಸುವಂತೆ ಆಗಿದೆ. ಈ ಬಗ್ಗೆ ಕಾರ್ಮಿಕ ಮಂತ್ರಿ ಬಳಿ ಮಾತನಾಡಿದರೆ ಅವರು ಇಎಸ್‌ಐ ಬಿಟ್ಟು ಮೋದಿ ಬಗ್ಗೆ ಮಾತನಾಡುತ್ತಾರೆ. ಗರ್ಭಕಂಠ ಕ್ಯಾನ್ಸರ್‌ಗೆ ಕೇಂದ್ರ ಸರ್ಕಾರ ₹4500 ಕೋಟಿ ಹಣ ಬಿಡುಗಡೆ ಮಾಡಿದೆ. ಆದರೆ ಈ ಯೋಜನೆ ಸಮರ್ಪಕವಾಗಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿಲ್ಲ. ಒಟ್ಟಾರೆ ಕೇಂದ್ರ ಸರ್ಕಾರದ ವಿರುದ್ಧ ದೂರುವುದರಲ್ಲೇ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ದೂರಿದರು.

ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಸಾಕಷ್ಟು ಹಣ ಬರುತ್ತಿದ್ದು, ಅದನ್ನು ಅನುಷ್ಠಾನ ಹೇಗೆ ಮಾಡಬೇಕು ಎನ್ನುವುದು ಬಿಟ್ಟು ಆ ಯೋಜನೆಯ ಟೆಂಡರ್ ಯಾರಿಗೆ ನೀಡಬೇಕು ಎನ್ನುವ ಬಗ್ಗೆ ಮಾತ್ರ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಡಿಕೆಶಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಸಂಘರ್ಷ ಮಾಡುವುದು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ ಎಂದು ದೂರಿದರು.

ಮಾಜಿ ಸಚಿವ ಡಿ.ಎನ್.ಜೀವರಾಜ್, ಕೇಂದ್ರೀ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ, ಬಿಜೆಪಿ ಮುಖಂಡ ರಾದ ದೀಪಕ್ ದೊಡ್ಡಯ್ಯ, ಅರುಣ್‌ಕುಮಾರ್, ನೀಲೇಶ್, ಭಾಸ್ಕರ್ ವೆನಿಲ್ಲಾ, ಪ್ರಭಾಕರ್ ಪ್ರಣಸ್ವಿ, ಕೆ.ಟಿ.ವೆಂಕಟೇಶ್, ಪ್ರೇಮೇಶ್, ಪ್ರದೀಪ್ ಕಿಚ್ಚಬ್ಬಿ ಮತ್ತಿತರರು ಹಾಜರಿದ್ದರು.

(ಬಾಕ್ಸ್)ವಂದೇಮಾತರಂ ಎಂದರೆ ರಾಷ್ಟ್ರ ಭಕ್ತಿಯ ಪ್ರತೀಕ

ವಂದೇ ಮಾತರಂ ಎಂದರೆ ಶಕ್ತಿ, ಸ್ಪೂರ್ತಿ, ರಾಷ್ಟ್ರದ ಭಕ್ತಿಯ ಪ್ರತೀಕ. ಇಂತಹ ವಂದೇ ಮಾತರಂ ಅನ್ನು ಪ್ರಜಾಪ್ರಭುತ್ವದ ಪರಮೋಚ್ಛ ಸದನ ಸಂಸತ್‌ನಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡಲು ಕಾಯ್ದೆ ಮಾಡಿ, ರಾಷ್ಟ್ರಗೀತೆ ಎಂದು ಘೋಷಿಸ ಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಜನರ ಹಿತಕ್ಕಾಗಿ ಕಾಯ್ದೆ ಮಾಡಲು ಅವಕಾಶ ನೀಡಲಾಗಿದೆ. ಕೇಂದ್ರದ ಇಂತಹ ಕಾಯ್ದೆಯ ಘೋಷಣೆ ರಾಜ್ಯ ಸರ್ಕಾರ ಸುತ್ತೋಲೆ ಹಾಕಿ ಎರಡು ಸಾಲುಗಳಲ್ಲಿ ಹಾಡುವಂತೆ ಸೂಚಿಸಲಾಗಿದೆ ಸಂಸದ ಕೋಟ ಶ್ರೀನಿವಾಸಪೂಜಾರಿ ದೂರಿದರು.

ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಯಾವುದೇ ಕಾಯ್ದೆ ಜಾರಿಗೊಳಿಸಿದರೆ ಅದಕ್ಕೆ ರಾಜ್ಯಪಾಲರು ಅಂಕಿತ ಹಾಕುತ್ತಾರೆ. ಅದು ಕಾನೂನಾಗುತ್ತದೆ. ಇಂತಹ ಕಾನೂನಿಗೆ ಗ್ರಾಮ ಪಂಚಾಯತಿಯವರು ಅದು ಬೇಡ ಎಂದು ಸುತ್ತೋಲೆ ಕೊಟ್ಟರೆ ಅದನ್ನು ಪಾಲಿಸಲು ಸಾಧ್ಯವಾಗುತ್ತದೆಯೇ. ಹೀಗಾದರೆ ಸರ್ಕಾರ ನಡೆಸಲು ಸಾಧ್ಯವಾಗುತ್ತದೆಯೇ? ಕೇಂದ್ರ ಸರ್ಕಾರ ಸಂವಿಧಾನ ಬದ್ಧವಾಗಿ ಮಾಡಿರುವ ಕಾಯ್ದೆಯನ್ನು ರಾಜ್ಯ ಸರ್ಕಾರ ಸುತ್ತೋಲೆ ಮೂಲಕ ನಿಯಂತ್ರಿಸುತ್ತದೆ ಎಂದರೆ, ಕೇಂದ್ರ ಸರ್ಕಾರದ ಭಯೋತ್ಪಾದನಾ ನಿಗ್ರಹ ಮಂಡಳಿ ತಂದಿರುವ ಕಾನೂನಿಗೆ ವಿರುದ್ಧವಾಗಿ ಭಯೋತ್ಪಾದಕರನ್ನು ಮುಟ್ಟಬೇಡಿ ಎಂದು ನಾಳೆ ದಿನ ರಾಜ್ಯ ಸರ್ಕಾರ ಆದೇಶಿಸಿದರೆ ಇಲ್ಲಿನ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.೨೦ಬಿಹೆಚ್‌ಆರ್ ೧: ಕೋಟಾ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರಾ ಬಲದಂಡೆ ನಾಲೆಗೆ ನೀರು: ಕುಂದೂರಲ್ಲಿ ರೇಣು ಬಾಗಿನ
ಪಕ್ಷ ಸಂಘಟನೆಗೆ ಎಲ್ಲರೂ ಕೈ ಜೋಡಿಸೋಣ: ಎನ್‌.ಎಸ್‌.ಬೋಸರಾಜು