ಸುಶಿಕ್ಷಿತರಿಂದ ರಾಜ್ಯಸರ್ಕಾರಕ್ಕೆ ಸೋಲಿನ ಶಿಕ್ಷೆ: ಎಂಎಲ್ಸಿ ಎನ್‌.ರವಿಕುಮಾರ್‌

KannadaprabhaNewsNetwork |  
Published : Oct 29, 2026, 01:15 AM IST
ಫೋಟೋ- ರವಿಕುಮಾರ | Kannada Prabha

ಸಾರಾಂಶ

ರಾಜ್ಯದಲ್ಲಿನ ಪದವಿಧರ ಹಾಗೂ ಶಿಕ್ಷಕರ 4 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಈ ಫಲಿತಾಂಶದ ಮೂಲಕ ಸುಶಿಕ್ಷಿತ ಮತದಾರರು ಕರ್ನಾಟಕ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ಫಲಿತಾಂಶ 2028 ರ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಮೇಲ್ಮನೆ ವಿರೋಧ ಪಕ್ಷದ ಮುಖ್ಯ ಸಚೇತಕ, ಎಂಎಲ್‌ಸಿ ಎನ್‌ ರವಿಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿರಾಜ್ಯದಲ್ಲಿನ ಪದವಿಧರ ಹಾಗೂ ಶಿಕ್ಷಕರ 4 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಈ ಫಲಿತಾಂಶದ ಮೂಲಕ ಸುಶಿಕ್ಷಿತ ಮತದಾರರು ಕರ್ನಾಟಕ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ಫಲಿತಾಂಶ 2028 ರ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಮೇಲ್ಮನೆ ವಿರೋಧ ಪಕ್ಷದ ಮುಖ್ಯ ಸಚೇತಕ, ಎಂಎಲ್‌ಸಿ ಎನ್‌ ರವಿಕುಮಾರ್‌ ಹೇಳಿದರು.ಈಶಾನ್ಯ ಶಿಕ್ಷಕ ಮತಕ್ಷೇತ್ರದ ಉಸ್ತುವಾರಿ ರವಿ ಕುಮಾರ್‌ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ನೇಮಕಾತಿಗೆ ಮುಂದಾಗುತ್ತಿಲ್ಲ. ಶಿಕ್ಷಕರ ಸಮಸ್ಯೆ ಪರಿಹಾರ ಮಾಡುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಶಿಕ್ಷಣ, ಪದವಿಧರರ ಕ್ಷೇತ್ರದ ಸಮಸ್ಯೆಗಳ ಗಂಟು ಹಾಗೆ ಉಳಿದಿದೆ ಎಂದು ಟೀಕಿಸಿದರು.ರಾಜ್ಯದಲ್ಲಿ ನೇಮಕಾತಿಗಳೇ ನಡೆಯುತ್ತಿಲ್ಲ. 79 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಇದರಿಂದ ಬೋಧನೆಯೇ ಇಲ್ಲದೇ ಶಿಕ್ಷಣ ವ್ಯವಸ್ಥೆ ಹಾಳಾಗುತ್ತಿದೆ. ನೀವು ನಡೆದಿದ್ದೇ ದಾರಿ, ಆಡಿದ್ದೇ ಆಟ ಅಂದರೆ ನಡೆಯೋದಿಲ್ಲ ಎನ್ನುವುದನ್ನು ಜನ ತೋರಿಸಿಕೊಟ್ಟಿದ್ದಾರೆ. ಸುಶಿಕ್ಷಿತ ಮತದಾರ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾನೆ ಎಂದರು.ನೀವು ಆಡಿದ್ದೇ ಆಟ ಅಂದರೆ ನಾವು ಒಪ್ಪುವುದಿಲ್ಲ ಎಂದು ಮತದಾರ ತೀರ್ಪು ನೀಡಿದ್ದಾರೆ. ರೈತರಿಗೆ 2500 ರು. ಕೊಡ್ತಿನಿ ಎಂದು ಹೇಳಿದಿರಿ. ಅದೂ ಸಹ ಕೊಟ್ಟಿಲ್ಲ. ಈ ಸರ್ಕಾರ ಕೇಂದ್ರದ ಬಗ್ಗೆ ಟೀಕೆ ಟಿಪ್ಪಣೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ತೀರ್ಪಿನ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಅಪ್ಪ ಮಗನಿಗೆ ತಕ್ಕ ಉತ್ತರ ಕೊಟ್ಟಿದ್ದಾರೆಂದು ಹೇಳುವ ಮೂಲಕ ಮಲ್ಲಿಕಾರ್ಜುನ ಖರ್ಗೆ, ಪ್ರೀಯಾಂಕ್ ಖರ್ಗೆ ವಿರುದ್ದ ರವಿಕುಮಾರ ವಾಗ್ದಾಳಿ ನಡೆಸಿದರು.ಇಡೀ ಕರ್ನಾಟಕವೇ ಒಂದಾಗಿ ಈ ನಾಲ್ಕು ಕ್ಷೇತ್ರದಲ್ಲಿ ಗೆಲ್ಲಿಸುವ ಮೂಲಕ ಸರ್ಕಾರದ ವಿರುದ್ದ ಚಾಟಿ ಏಟು ಕೊಟ್ಟಿದೆ. ನಾಲ್ಕಕ್ಕೆ ನಾಲ್ಕೂ ಗೆಲ್ಲಲು ನಮಗೆ ಓಬಿಸಿ, ಎಸ್ಸಿ, ಎಸ್ಟಿ ಮತಗಳು ಸಾಕಷ್ಟು ಬಂದಿವೆ. ಜಾತಿ ಗಣತಿ, ಜನ ಗಣತಿ ಮಾಡಿದರೂ ವರದಿ ಬಹಿರಂಗಪಡಿಸಲಿಲ್ಲ. 53 ಸಾವಿರ ಕೋಟಿ ರು. ಎಸ್.ಸಿ ಎಸ್ಟಿ ಹಣ ದುರುಪಯೋಗ ಮಾಡಿದ್ದಾರೆ. ಇದರ ಪರಿಣಾಮ ಎಸ್ಸಿ, ಎಸ್ಟಿ, ಓಬಿಸಿ ಜನರೂ ಸಹ ಸರ್ಕಾರದ ವಿರುದ್ದ ಸಿಡಿದೆದ್ದಿದ್ದಾರೆ ಎಂದರು.ನೂತನ ಎಂಎಲ್‌ಸಿ ಶಶಿಲ್‌ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ನಗರಾಧ್ಯಕ್ಷ ಚಂದು ಪಾಟೀಲ್‌, ಶಾಸಕ ಅವಿನಾಶ ಪಾಟೀಲ್‌, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್‌, ಅಮರನಾಥ ಪಾಟೀಲ್‌, ಶರಣಪ್ಪ ತಳವಾರ್‌, ಅವ್ವಣ್ಣ ಮ್ಯಾಕೇರಿ ಇತತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್