ಕನ್ನಡಪ್ರಭ ವಾರ್ತೆ ಹಾಸನ
ಒಂಬತ್ತು ದಿನಗಳ ಕಾಲ ದೊಡ್ಡಬಳ್ಳಾಪುರದಲ್ಲಿ ನಡೆಯುವ ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ಜಿಲ್ಲೆಯಿಂದ ೨೦ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಶೋಧನೆ ಪರಿಷತ್ತು ಗೌರವಾಧ್ಯಕ್ಷ ಎಂ.ಕೆ. ಕಮಲ್ ಕುಮಾರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕರ್ನಾಟಕ ರಾಜ್ಯ ಸಂಶೋಧನೆ ಪರಿಷತ್ತು, ಇಸ್ರೋ, ಭಾರತ ಸೇವಾದಳ, ಕರ್ನಾಟಕ ಸೈಟ್ಸ್ ಮತ್ತು ಗೈಡ್ಸ್, ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ಸೇರಿದಂತೆ ಅನೇಕ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಪಥಮ ಟೆಲಿಸ್ಕೋಪ್ ತರಬೇತಿ ಶಿಬಿರ ನಡೆಯಲಿದೆ. ಬೆಸೆಂಟ್ ಪಾರ್ಕ್, ಸೈಟ್ಸ್ ಕ್ಯಾಂಪ್, ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ)ದಲ್ಲಿ ಅ.೧ರಿಂದ ಅ.೯ರವರೆಗೆ (೯ ದಿನಗಳ ಕಾಲ) ನಡೆಯುವ ಈ ಶಿಬಿರದಲ್ಲಿ ರಾಜ್ಯದ ೧೫೨ ಮಕ್ಕಳು ಭಾಗವಹಿಸಲಿದ್ದು, ಶಿಬಿರದಲ್ಲಿ ತಯಾರಿಸಲಾದ ಟೆಲಿಸ್ಕೋಪ್ ಮೂಲಕ ವಿಶ್ವ ದಾಖಲೆ ನಿರ್ಮಿಸಲಾಗುತ್ತದೆ. ವಿಶ್ವ ಮಟ್ಟದ ಗೌರವಕ್ಕೆ ಪಾತ್ರವಾಗುವ ಈ ಯೋಜನೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಲಿದೆ. ಈಗಾಗಲೇ ಹಾಸನ ಜಿಲ್ಲೆಯ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ಪ್ರತಿಷ್ಠಿತ ಶಿಬಿರದಲ್ಲಿ ಹಾಸನ ಜಿಲ್ಲೆಯ ೨೦ ವಿದ್ಯಾರ್ಥಿಗಳು ಭಾಗಿಯಾಗುತ್ತಿದ್ದಾರೆ ಎಂದರು.
ಭಾಗಿಯಾಗಲಿರುವ ವಿದ್ಯಾರ್ಥಿಗಳು:ಗಗನ ಬಿ.ಎಲ್ ಎಸ್‌ಎಸ್‌ಎಲ್‌ಸಿ, ಜಿಎಚ್‌ಎಸ್ ಬಾಗೇಶಪುರ, ಅರಸೀಕೆರೆ, ವಿ.ಎಸ್. ಸಿಂಚನ, ಪ್ರಥಮ ಪಿಯುಸಿ, ಜಿಜಿಪಿಯುಸಿ ಬೇಲೂರು, ಮಾನ್ಯ ಎಂ. ಗಂಗಾಧರ್ ದ್ವಿತೀಯ ಪಿಯುಸಿ ಹಾಸನ, ಪುರುಷೋತ್ತಮ್ ಎಂ ಪ್ರಥಮ ಪಿಯುಸಿ, ಜಿಜೆಸಿ ಹಳೆಕೋಟೆ, ಹೊಳೆನರಸೀಪುರ, ಐಶ್ವರ್ಯ ಎ.ಆರ್ ದ್ವಿತೀಯ ಪಿಯುಸಿ, ಜಿಜೆಸಿ ಗೊರೂರು, ಪ್ರೀತಮ್ ಆರ್.ಪಿ ಪ್ರಥಮ ಪಿಯುಸಿ, ಜಿಪಿಯುಸಿ ಹಳೇಬೀಡು, ಬೇಲೂರು, ಲೇಖನ ಎಂ.ಪಿ ೯ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಹೊಸದು, ಚನ್ನರಾಯಪಟ್ಟಣ, ರವಿ ನಂದನ್ ಟಿ.ಎಸ್ ಪ್ರಥಮ ಪಿಯುಸಿ, ಸರ್ಕಾರಿ ಪಿಯು ಕಾಲೇಜು, ಆಲೂರು, ಅರ್ಪಿತ ಎಂ.ವೈ ೯ನೇ ತರಗತಿ, ಜಿಜಿಜಿಸಿ ಪ್ರೌಢಶಾಲೆ, ಅರಕಲಗೂಡು, ಮಿಥುನ್ ಜಿ.ಎಲ್. ಗೌಡ ೮ನೇ ತರಗತಿ, ವಿದ್ಯಾಸೌಧ ಪ್ರೌಢಶಾಲೆ, ಹೊಳೆನರಸೀಪುರ ರಸ್ತೆ, ಹಾಸನ, ಇಬ್ಬನಿ ಬಿ.ಎಂ ಪ್ರಥಮ ಪಿಯುಸಿ, ಮಾಸ್ಟರ್ ಕಾಲೇಜು, ಹಾಸನ, ಲಿಪಿಕಾ ಎಚ್.ಸಿ ದ್ವಿತೀಯ ಪಿಯುಸಿ, ಮಾಸ್ಟರ್ಸ್ ಕಾಲೇಜು, ಹಾಸನ, ಹರಿಪ್ರಸಾದ್ ಕೆ. ದ್ವಿತೀಯ ಪಿಯುಸಿ, ಮಾಸ್ಟರ್ಸ್ ಕಾಲೇಜು, ಹಾಸನ, ಶ್ರೇಯಲಾ ಎಚ್. ಪ್ರಥಮ ಪಿಯುಸಿ, ಮಾಸ್ಟರ್ಸ್ ಕಾಲೇಜು, ಹಾಸನ, ಸಮೃದ್ಧಿ ಎಸ್.ಗೌಡ ೯ನೇ ತರಗತಿ, ಶಾರದಾ ವಿದ್ಯಾನಿಕೇತನ, ತಳಪಾಡಿ, ಮಂಗಳೂರು, ಹಿತ ಎಚ್.ಆರ್ ೮ನೇ ತರಗತಿ, ಸಂತ ಜೋಸೆಫ್ ಶಾಲೆ, ಸಾಲಗಾಮೆ ರಸ್ತೆ, ಹಾಸನ ನೂತನ ಎಚ್.ಸಿ ೧೦ನೇ ತರಗತಿ, ಯುನೈಟೆಡ್ ಶಾಲೆ, ಹಾಸನ, ಅಶ್ವಿನ್ ಕೆ.ವೈ. ೧೦ನೇ ತರಗತಿ, ಪೋದರ್ ಇಂಟರ್‌ನ್ಯಾಷನಲ್ ಶಾಲೆ, ಹಾಸನ, ಶಾಂತಾ ಬಿ ಪ್ರಥಮ ಪಿಯುಸಿ, ಸರ್ ಎಂ.ವಿ ಪಿಯು ಕಾಲೇಜು, ದಾವಣಗೆರೆ (ಕ್ಯಾನ್ಸರ್‌ನ್ನು ಜಯಿಸಿ ಗುಣಮುಖಳಾದ ಸೇವಾದಳ ವಿದ್ಯಾರ್ಥಿನಿ) ಶಿಬಿರದಲ್ಲಿ ಹಾಸನ ಜಿಲ್ಲೆಯ ಮೂವರು ಶಿಕ್ಷಕರು ಸಹ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಂಶೋಧನೆ ಪರಿಷತ್ತು ಜಿಲ್ಲಾಧ್ಯಕ್ಷ ರವಿನಾಕಲಗೂಡು, ಭಾರತ್ ಸೇವಾದಳ ವಲಯ ಸಂಘಟಕಿ ವಿ.ಎಸ್. ರಾಣಿ, ಸಂಪನ್ಮೂಲ ವ್ಯಕ್ತಿ ದೀಪಾ ಮಹೇಶ್, ಶೋಭ, ವಿನೂತ, ರತಿ ಇತರರು ಉಪಸ್ಥಿತರಿದ್ದರು.