ಜಾವೀದ್ ಹುಸೇನ್ ಹವಲ್ದಾರರಿಗೆ ರಾಜ್ಯ ಮಟ್ಟದ ''''ಸಾಹಿತ್ಯ ರತ್ನ'''' ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Jul 13, 2026, 02:00 AM IST
ಗೋಕಾಕ ಪಟ್ಟಣದ ಸಮುದಾಯ ಭವನದಲ್ಲಿ ನಡೆದ 'ಗೋಕಾಕ ಜಾನಪದ ಕಲಾಮೇಳ ಹಾಗೂ ಸಾಧಕರಿಗೆ ಸನ್ಮಾನ' ಸಮಾರಂಭದಲ್ಲಿ ಶಿಕ್ಷಕ ಹಾಗೂ ಸಾಹಿತಿ ಜಾವೀದ್ ಹುಸೇನ್ ಹವಲ್ದಾರ ಅವರಿಗೆ ರಾಜ್ಯ ಮಟ್ಟದ 'ಸಾಹಿತ್ಯ ರತ್ನ' ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

State-level 'Sahitya Ratna' award presented to Havaldar Javed Hussain.

ಕನ್ನಡಪ್ರಭ ವಾರ್ತೆ ಸುರಪುರ

ಶಿಕ್ಷಣ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಮನಾರ್ಹ ಸೇವೆಯನ್ನು ಪರಿಗಣಿಸಿ ತಾಲೂಕಿನ ಶಿಕ್ಷಕ ಹಾಗೂ ಸಾಹಿತಿ ಜಾವೀದ್ ಹುಸೇನ್ ಹವಲ್ದಾರ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ರಾಜ್ಯ ಮಟ್ಟದ ''''ಸಾಹಿತ್ಯ ರತ್ನ'''' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಮಯೂರ ಶಾಲೆ ಸಮೀಪದ ಸಮುದಾಯ ಭವನದಲ್ಲಿ ಶನಿವಾರ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ''''ಗೋಕಾಕ ಜಾನಪದ ಕಲಾಮೇಳ ಹಾಗೂ ಸಾಧಕರಿಗೆ ಸನ್ಮಾನ'''' ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿನ ಸೇವೆ, ಸಾಹಿತ್ಯ ರಚನೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ನೀಡಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಜಾವೀದ್ ಹುಸೇನ್ ಹವಲ್ದಾರ ಅವರನ್ನು ಈ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಅಂಬಾ ದರ್ಶನ ಪೀಠದ ಪೀಠಾಧ್ಯಕ್ಷ ಪೂಜ್ಯ ನಾರಾಯಣ ಶರಣರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿದರು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಾಹಿತಿ ಡಾ. ಉದ್ದಣ್ಣ ಗೌಡ್ರು, ಸಿರಿ ಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ರಜನಿ ಅಶೋಕ ಜೀರಗ್ಯಾಳ, ಡಾ. ಮಂಜುಳಾ ಪಾವಗಡ, ಹಿರಿಯ ಸಾಹಿತಿ ಡಾ. ಸಿದ್ಧಣ್ಣ ಬಾಡಗಿ, ಮಾನವ ಹಕ್ಕುಗಳ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರವೀಣ್ ಹಿರೇಮಠ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಮಹೇಶ್ ಉಣ್ಣೆ, ಪತ್ರಕತ೯, ಚಲನಚಿತ್ರ ನಿರ್ದೇಶಕ ಹಾಗೂ ಬೆಳಗಾವಿ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಾ. ರಾಜು ಮೋರೆ,ವಿಶ್ವದಾಖಲೆ ಸಾಧಕ ಡಾ. ಲಕ್ಷ್ಮಣ ಎಸ್. ಚೌರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ರಾಜ್ಯ ಮಟ್ಟದ ಈ ಗೌರವಕ್ಕೆ ಭಾಜನರಾದ ಜಾವೀದ್ ಹುಸೇನ್ ಹವಲ್ದಾರ ಅವರಿಗೆ ಸುರಪುರದ ಬಲವಂತ ಬಹರಿ ಬಹಾದ್ದೂರ ಸಂಸ್ಥಾನದ ಅರಸ ಡಾ. ರಾಜಾ ಕೃಷ್ಣಪ್ಪನಾಯಕ, ಶೆಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ತಿರುಪತಿ ಎನ್. ಶೆಟ್ಟಿ, ಮುಖ್ಯೋಪಾಧ್ಯಾಯೆ ರಾಜೇಶ್ವರಿ ಟಿ. ಶೆಟ್ಟಿ, ಶಿಕ್ಷಕ ವೃಂದ, ಸಾಹಿತಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಶುಭಾಶಯ ಕೋರಿದರು.

------

ಫೋಟೊ:

ಗೋಕಾಕ ಪಟ್ಟಣದ ಸಮುದಾಯ ಭವನದಲ್ಲಿ ನಡೆದ ''''ಗೋಕಾಕ ಜಾನಪದ ಕಲಾಮೇಳ ಹಾಗೂ ಸಾಧಕರಿಗೆ ಸನ್ಮಾನ'''' ಸಮಾರಂಭದಲ್ಲಿ ಶಿಕ್ಷಕ ಹಾಗೂ ಸಾಹಿತಿ ಜಾವೀದ್ ಹುಸೇನ್ ಹವಲ್ದಾರ ಅವರಿಗೆ ರಾಜ್ಯ ಮಟ್ಟದ ''''ಸಾಹಿತ್ಯ ರತ್ನ'''' ಪ್ರಶಸ್ತಿ ಪ್ರದಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂ.ಆರ್‌.ಮಹೇಶ ಬಿಜೆಪಿ ಸಂಘಟನೆಗೆ ಕೈ ಜೋಡಿಸಿದ್ದು ಶ್ಲಾಘನೀಯ
ಸಚಿವ ಪ್ರಿಯಾಂಕ್ ಖರ್ಗೆ ಅಭಿವೃದ್ಧಿ ಬಗ್ಗೆ ಮಾತನಾಡಲಿ