ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಬಳಿ ಪರ್ಮಿಟ್ ಇಲ್ಲದೆ ಕಲ್ಲು ಸಾಗಿಸುತ್ತಿದ್ದ ಮೂರು ಟಿಪ್ಪರ್‌ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಶಕ್ಕೆ ಪಡೆದಿದೆ.
ತಾಲೂಕಿನ ಹಿರೀಕಾಟಿ ಗೇಟ್ ಬಳಿ ಲಕ್ಷ್ಮೀ ವೆಂಕಟೇಶ್ವರ ಕ್ರಷರ್ ರಾತ್ರಿ ಕ್ರಷಿಂಗ್ ಮಾಡುತ್ತಿದ್ದು ನಿಲ್ಲಿಸಿ ಎಂದು ಅಧಿಕಾರಿಗಳನ್ನು ಗೋಗರೆದರೂ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಎಂದು ಚಂದ್ರಶೇಖರ್ ದೂರಿದ್ದಾರೆ. ರಾತ್ರಿ 10ರ ಬಳಿಕ ಬೆಳಗ್ಗೆ 6ರ ತನಕ ಕ್ರಷರ್ ಕ್ರಷಿಂಗ್ ಮಾಡಲು ನಿರ್ಭಂಧವಿದೆ. ಲಕ್ಷ್ಮೀ ವೆಂಕಟೇಶ್ವರ ಕ್ರಷರ್ ಮಾಲೀಕರ ಮೇಲೆ ರಾತ್ರಿ ಕ್ರಷರ್ ಓಡುವ ವಿಚಾರಕ್ಕೆ ಎಫ್‌ಐಆರ್ ಕೂಡ ಆಗಿದ್ದರೂ ರಾತ್ರಿ ಕ್ರಷಿಂಗ್ ಮಾಡುತ್ತಿದೆ ಎಂದು ದೂರಿದರು.
ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ಮಲ್ಲೇಶ್‌ಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಶುಕ್ರವಾರ ಮುಂಜಾನೆ ಕರೆ ಸ್ವೀಕರಿಸದೆ ಇದ್ದಾಗ ವಾಯ್ಸ್ ಮೆಸೇಜ್ ಹಾಕಿದ ಬಳಿಕ ಶುಕ್ರವಾರ ಮುಂಜಾನೆ 5.45 ರಲ್ಲಿ ಕ್ರಷರ್ ಕ್ರಷಿಂಗ್ ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.