ಹಿರೇಕೆರೂರು: 2026 ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಆಗಿದ್ದು, ಕೃಷಿ ಚಟುವಟಿಕೆಗಳಿಗೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಕೆ ಆಗುತ್ತಿಲ್ಲ. ಸರಕಾರ ರೈತರಿಗೆ ಎಫ್‌ಐಡಿ ಮೂಲಕ ನೀಡುತ್ತಿರುವ ರಸಗೊಬ್ಬರ ಪದ್ಧತಿ ನಿಲ್ಲಿಸಿ, ಹಳೆಯ ಮಾದರಿಯಲ್ಲಿ ನೀಡಬೇಕು ಎಂದು ಕರ್ನಾಟಕ ರೈತ ಸಂಘದ ಸದಸ್ಯರು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಅಖಿಲ ಕರ್ನಾಟಕ ರೈತ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಿ ತಹಸೀಲ್ದಾರ್ ಎಂ ರೇಣುಕಾ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ, ಹಿರೇಕೆರೂರು ಮತ್ತು ರಟ್ಟಿಹಳ್ಳಿ ಆಧಾರ ಕಾರ್ಡ ಕೇಂದ್ರಗಳು ಇರದೇ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳು ಆಧಾರ ತಿದ್ದುಪಡಿ ಮಾಡಿಸಲು ಅಲೆಯಬೇಕಾಗಿದೆ. ಕರ್ನಾಟಕ, ಒನ್, ಸೇವಾ ಕೇಂದ್ರಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಆದ್ದರಿಂದ ಎರಡೂ ತಾಲೂಕುಗಳಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆಧಾರ ಕಾರ್ಡ್ ಕೇಂದ್ರಗಳನ್ನು ತೆರೆಯಬೇಕು. 2026ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅಕಾಲಿಕ ಮಳೆಯಿಂದಾಗಿ ಅನೇಕ ರೈತರ ತೋಟಗಾರಿಕಾ ಬೆಳೆಗಳಾದ ಕಲ್ಲಂಗಡಿ, ಎಲೆಬಳ್ಳಿ ಹೂವು ವಿವಿಧ ಬೆಳೆಗಳು ಹಾನಿಯಾಗಿವೆ. ಅವರಿಗೆ ಕೂಡಲೆ ಬೆಳೆ ಹಾನಿ ಪರಿಹಾರ ಮಂಜೂರು ಮಾಡಬೇಕು. ರಟ್ಟಿಹಳ್ಳಿ ತಾಲೂಕಿನಲ್ಲಿ ಹರಿದಿರುವ ಕುಮದ್ವತಿ ನದಿಗೆ ತ್ಯಾಜ್ಯ ಸೇರುತ್ತಿದ್ದು ಗ್ರಾಮಗಳ ಚರಂಡಿ, ಗಟಾರಗಳನ್ನು ನೇರವಾಗಿ ನದಿಗೆ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲದೇ ತ್ಯಾಜ್ಯವನ್ನು ನದಿಗೆ ಎಸೆಯುತ್ತಿರುವುದರಿಂದ ನದಿ ಮಲೀನಗೊಂಡಿದೆ. ಪ್ಲಾಸ್ಟಿಕ್ ತ್ಯಾಜ್ಯ ನದಿಗೆ ಸೇರುತ್ತಿದೆ. ಆದ್ದರಿಂದ ಸ್ವಚ್ಛತೆಯ ಬಗ್ಗೆ ಕ್ರಮ ತೆಗೆದುಕೊಂಡು ನದಿಯ ಪಾವಿತ್ರವನ್ನು ಕಾಪಾಡಬೇಕು. ರಟ್ಟಿಹಳ್ಳಿಯಿಂದ ತೋಟಗಂಟೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ನಿರ್ಮಿಸಲಾದ ಸೇತುವೆಗೆ ತಡೆಗೋಡೆ ಇರದೇ ಅಪಾಯ ಎದುರಾಗಿದೆ. ಕೂಡಲೇ ತಡೆ ಗೋಡೆ ನಿರ್ಮಾಣ ಮಾಡಬೇಕು. ವಾಯುವ್ಯ ಸಾರಿಗೆ ಸಂಸ್ಥೆಯ ನೂತನ ಬಸ್ಸು ಮಾರ್ಗ ಪ್ರತಿ ದಿನ ಸಂಜೆ 6:30ಕ್ಕೆ ಬಿಡುವಂತೆ ಹಾವೇರಿಯಿಂದ ಬ್ಯಾಡಗಿ, ರಟ್ಟಿಹಳ್ಳಿ, ಮಾಸೂರು, ಶಿಕಾರಿಪುರ, ಶಿವಮೊಗ್ಗ ಮಾರ್ಗವಾಗಿ ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಹೋಗುವ ರೋಗಿಗಳಿಗೆ ಅನುಕೂಲವಾಗಲು ಈ ಮಾರ್ಗವಾಗಿ ದಿನ ನಿತ್ಯ ಓಡಾಡಲು ಬಸ್ಸು ಪ್ರಾರಂಭಿಸಬೇಕು. ಮತ್ತೆ ಇದೇ ಮಾರ್ಗವಾಗಿ ಹಾವೇರಿ ತಲುಪುವ ವ್ಯವಸ್ಥೆ ಮಾಡಬೇಕು. ಮತ್ತು ರಾಣಿಬೆನ್ನೂರ ಡಿಪೋದಿಂದ ಹಲಗೇರಿ, ಕೋಡ, ಅಬಲೂರು, ಎತ್ತಿನಹಳ್ಳಿ, ಚಿಕ್ಕೇರೂರು, ಆನವಟ್ಟಿಯವರೆಗೆ ನುತನ ಬಸ್ಸು ಸಂಚಾರ ಪ್ರಾರಂಭಿಸಬೇಕು. ಸಾಯಂಕಾಲ 5 ಗಂಟೆಗೆ ರಾಣಿಬೆನ್ನೂರನಿಂದ ಹಾರೋಗೊಪ್ಪ ನೆಸ್ಟಿ, ಹುಲ್ಲತ್ತಿ, ರಟ್ಟಿಹಳ್ಳಿ ಮಾರ್ಗವಾಗಿ ಸತ್ತಗೀಹಳ್ಳಿ, ಶಿರಗಂಬಿ, ಹಿರೇಕೆರೂರಿಗೆ ಬಸ್ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ನೀಡುವ ಮಾಸಾಶನ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಮನಸ್ವಿನಿ, ಮೈತ್ರಿ, ಮುಂತಾದ ಯೋಜನೆಗಳು ಫಲಾನುಭವಿಗಳಿಗೆ ಸಕಾಲಕ್ಕೆ ದೊರೆಯುತ್ತಿಲ್ಲ. ಸಾರ್ವಜನಿಕರಿಗೆ, ವೃದ್ಧರಿಗೆ ಅನಾರೋಗ್ಯಕ್ಕೆ ಈಡಾದ ವ್ಯಕ್ತಿಗಳು ಈ ಯೊಜನೆಯ ಲಾಭವನ್ನು ಪಡೆಯುತ್ತಿದ್ದು ಅವರಿಗೆ ಸಕಾಲಕ್ಕೆ ದೊರೆಯುವಂತೆ ಮಾಡಬೇಕು. ಇದರಿಂದ ಅವರ ಜೀವನಕ್ಕೆ ಅನುಕೂಲವಾಗುತ್ತದೆ.ವಿವಿಧ ಬೇಡಿಕೆಗಳ ಬಗ್ಗೆ 15 ದಿನಗಳೊಳಗಾಗಿ ತಹಸೀಲ್ದಾರ್ ಹಿರೇಕೆರೂರು ಅಧ್ಯಕ್ಷತೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಮತ್ತು ರೈತ ಮುಖಂಡರ ಸಭೆ ಕರೆಯಬೇಕು. ವಿಳಂಬ ಮಾಡಿದರೆ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಎಂದರು.ಈ ವೇಳೆ ರಮೇಶ ಓಬಳೇರ, ಮಲ್ಲಮ್ಮ ಹುಲ್ಲಿನಕೊಪ್ಪ, ಬಸವರಾಜ ಬಡೀನಾಯ್ಕರ್, ನಾಗರತ್ನ ಬಸವರಾಜ ಕೆಳಗಿನಮನಿ, ಶಿವಣ್ಣ ಜವನವರ, ಕೋಡಿಹಳ್ಳಿ, ಪೂಜಾ ಮ್ಯಾಚರ, ಜ್ಯೋತಿ ಯಲವದಹಳ್ಳಿ, ಚಂದ್ರಯ್ಯ ಹಿರೇಮಠ ರವಿ ಮಾಳಗೇರ,ಕಾವ್ಯ ಹುಡೇದ,ಹಾಗೂ ರೈತ ಮುಖಂಡರು ಇದ್ದರು,