2030ರ ವೇಳೆಗೆ ಮೈಸೂರಿನಲ್ಲಿ 10 ಬಿಲಿಯನ್‌ ಡಾಲರ್‌ ಡಿಜಿಟಲೀಕೃತ ಆರ್ಥಿಕತೆ ಗುರಿ

KannadaprabhaNewsNetwork |  
Published : Jul 04, 2025, 11:46 PM IST
29 | Kannada Prabha

ಸಾರಾಂಶ

2030ರ ವೇಳೆಗೆ ಮೈಸೂರು ವಲಯದಲ್ಲಿ 10 ಸಾವಿರ ಕೋಟಿ ರೂ. ಡಿಜಟಲೀಕೃತ ಆರ್ಥಿಕ ಆದಾಯ, 2800ಕ್ಕೂ ಹೆಚ್ಚು ಸ್ಟಾರ್ಟ್‌ಆಪ್‌ಗಳಿಗೆ ಬೆಂಬಲ

ಕನ್ನಡಪ್ರಭ ವಾರ್ತೆ ಮೈಸೂರು

ಜಾಗತಿಕ ಹೂಡಿಕೆ, ತಂತ್ರಜ್ಞಾನ ಸಾಮರ್ಥ್ಯ, ಸುಸ್ಥಿರ ಹಾಗೂ ಮೂಲ ಪರಿಸರ ವ್ಯವಸ್ಥೆಗಳನ್ನು ಉತ್ತೇಜಿಸಿ 2030ರ ವೇಳೆಗೆ ಮೈಸೂರಿನಲ್ಲಿ 10 ಬಿಲಿಯನ್‌ ಡಾಲರ್‌ ಡಿಜಿಟಲೀಕೃತ ಆರ್ಥಿಕತೆಯ ಗುರಿ ಹೊಂದಲಾಗಿದೆ.

ಮೈಸೂರು ವಲಯದ ಮಿಷನ್‌ ಡಾಕ್ಯುಮೆಂಟ್‌ 2025 ಅನ್ನು ಕೆಡಿಇಎಂ ಬಿಡುಗಡೆಗೊಳಿಸಲಾಯಿತು. ಮೈಸೂರು ಭಾಗದ ಕಾರ್ಯತಂತ್ರ ಕುರಿತ ಮಾರ್ಗಸೂಚಿ ಬಿಡುಗಡೆಗೊಳಿಸಲಾಯಿತು.

ಮೈಸೂರು ಭಾಗದ ಕಾರ್ಯತಂತ್ರ ಕುರಿತ ಮಾರ್ಗಸೂಚಿ ಬಿಡುಗಡೆಗೊಳಿಸಲಾಯಿತು. ಈ ವಲಯದಲ್ಲಿ ತನ್ನ ಆಸ್ತಿತ್ವ ಸ್ಥಾಪಿಸಲು ಬೃಹತ್‌ಕಂಪನಿಗಳನ್ನು ಆಕರ್ಷಿಸುವ ಮತ್ತು ಪ್ರಸ್ತುತ ಕಾರ್ಯಪಡೆಯ 10 ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ.

2030ರ ವೇಳೆಗೆ ಮೈಸೂರು ವಲಯದಲ್ಲಿ 10 ಸಾವಿರ ಕೋಟಿ ರೂ. ಡಿಜಟಲೀಕೃತ ಆರ್ಥಿಕ ಆದಾಯ, 2800ಕ್ಕೂ ಹೆಚ್ಚು ಸ್ಟಾರ್ಟ್‌ಆಪ್‌ಗಳಿಗೆ ಬೆಂಬಲ, 150,000 ಉದ್ಯೋಗ ಹೆಚ್ಚಿಸುವ ಗುರಿ ಇದೆ. ಇಎಂಸಿ 2.0 ಅಡಿಯಲ್ಲಿ ಆಂಕರ್‌ಘಟಕವು ಸಂಭಾವ್ಯವಾಗಿ 1591 ಕೋಟಿ ರೂ. ಹೂಡಿಕೆಯನ್ನು ತರಬಹುದು ಎಂದು ಎಸ್‌.ಟಿ.ಪಿ.ಇ ನ್ಯಾಯಿಕ ನಿರ್ದೇಶಕ ಡಾ. ಸಂಜಯ್‌ತ್ಯಾಗಿ ತಿಳಿಸಿದ್ದಾರೆ.

ಮೈಸೂರು ಬಿಗ್‌ ಟೆಕ್‌ಶೋ 2025ರಲ್ಲಿ 1100ಕ್ಕೂ ಹೆಚ್ಚು ಪ್ರತಿನಿಧಿಗಳು, 80ಕ್ಕೂ ಹೆಚ್ಚು ಬೃಹತ್‌ ಸ್ಟಾರ್ಟ್‌ ಅಪ್‌ಗಳು, 60ಕ್ಕೂ ಹೆಚ್ಚು ನಾವೀನ್ಯತೆ ಬೂತ್‌ ಗಳು, 45ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು, 6 ದೇಶದ ಪಾಲುದಾರರು, 20ಕ್ಕೂ ಹೆಚ್ಚು ಶೈಕ್ಷಣಿಕ ಪಾಲುದಾರರು ಪ್ರಭಾವ ಬೀರಿದ್ದಾರೆ.

ಕಾರ್ಯಕ್ರಮದಲ್ಲಿ ಎಐ- ಆಧಾರಿತ ಸೈಬರ್‌ ಭದ್ರತೆ ಕುರಿತು ವರದಿ ಬಿಡುಗಡೆಗೊಳಿಸಲಾಯಿತು. ಹೊಸದಾಗಿ ಸ್ಥಾಪಿಸಿದ ವಾಯು ಅಸೆಟ್ಸ್‌ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪೂರೈಸುವ ಪಿಸಿಬಿ ಸ್ಥಾವರ ಸ್ಥಾಪಿಸಲು ಈ ಪ್ರದೇಶದಲ್ಲಿ 1250 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿವೆ.

10 ಕಂಪನಿಗಳಿಗೆ ಸನ್ಮಾನ

ಮೈಸೂರು ಬ್ಲೂ 2025 ಉತ್ತಮ 10 ಕಂಪನಿಗಳನ್ನು ಅಭಿನಂದಿಸಲಾಯಿತು. ಮೂರನೇ ಆವೃತ್ತಿಯ ಯಶಸ್ವಿ ನಂತರ, ಈ ವರ್ಷ 40ಕ್ಕೂ ಹೆಚ್ಚು ನವೋದ್ಯಮಗಳು ಪ್ರತಿಷ್ಠಿತ ಮೈಸೂರು ಬ್ಲೂ ಕಾರ್ಯಕ್ರಮಕ್ಕೂ ಅರ್ಜಿ ಸಲ್ಲಿಸಿದವು. ಸ್ವಯಂ ಅನಾಲಿಟಿಕ್ಸ್‌ ಪ್ರೈ. ಲಿ. ಮೆಲಾದತ್‌ಆಟೋ ಕಾಂಪೊನೆಂಟ್ಸ್‌ ಪ್ರೈ.ಲಿ ಮತ್ತು ಆಗ್ರೋಪಾಕ್‌ಪ್ರೈ. ಲಿ. ಕಂಪನಿಗಳು ತೀರ್ಪುಗಾರರಿಂದ ನಿರ್ಣಯಿಸಲ್ಪಟ್ಟ 3 ಅತ್ಯುತ್ತಮ ನಿಧಿ ಸಂಗ್ರಹಿಸಬಹುದಾದ ನವೋದ್ಯಮ ಎಂದು ಪರಿಗಣಿಸಲ್ಪಟ್ಟವು.

ಐಬಿಎಂನ ಗ್ಲೋಬಲ್‌ ಡೆಲಿವರಿಯ ವ್ಯವಸ್ಥಾಪಕ ಪಾಲುದಾರ ಅಮಿತ್‌ಶರ್ಮಾ, ಸಿಲಿಕಾನ್‌ಪ್ರಾಕ್ಟೀಸ್‌ ನ ಎಂಡಿ ಅನಿಲ್‌ಕೆಂಪಣ್ಣ, ಮೆಕ್‌ಲಾರೆನ್‌ಸ್ಟ್ರಾಟೆಜಿಕ್‌ಸೊಲ್ಯೂಷನ್ಸ್‌ ನ ಸಿಇಒ ಅನೋಜ್‌ಪಿಳ್ಳೈ, ಎವೊಟ್ರಾನ್‌ಮೋಟಾರ್‌ಸ್ಪೋರ್ಟ್ಸ್‌ ನ ಅರ್ಜುನ್‌ಗುರುದೇವ್‌, ಮೈಸೂರು ವಲಯದ ಕೈಗಾರಿಕಾ ನಿರೂಪಕ ಸುಧನ್ವ ಧನಂಜಯ್‌ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ