ವಿಶ್ವಕರ್ಮರ ಅಭಿವೃದ್ಧಿಗೆ ಅರ್ಥಿಕ, ರಾಜಕೀಯ, ಸಾಮಾಜಿಕ ಭದ್ರತೆ ಗಟ್ಟಿಗೊಳಿಸಿ: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : Sep 21, 2024, 01:47 AM IST
ತರೀಕೆರೆಯಲ್ಲಿ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆ, ವಿಶ್ವಕರ್ಮ ಜನಾಂಗ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಪಡೆಯುವ ಮೂಲಕ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಭದ್ರತೆ ಗಟ್ಟಿ ಗೊಳಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ತರೀಕೆರೆಯಲ್ಲಿ ಶ್ರೀ ವಿಶ್ವಕರ್ಮ ಜಯಂತ್ಯುತ್ಸವ ।

ಕನ್ನಡಪ್ರಭ ವಾರ್ತೆ, ತರೀಕೆರೆ

ವಿಶ್ವಕರ್ಮ ಜನಾಂಗ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಪಡೆಯುವ ಮೂಲಕ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಭದ್ರತೆ

ಗಟ್ಟಿ ಗೊಳಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ತಾಲೂಕು ವಿಶ್ವಕರ್ಮ ಸಮಾಜ, ಶ್ರೀ ಕಾಳಿಕಾದೇವಿ ಸೇವಾ ಸಮಿತಿ ಟ್ರಸ್ಟ್ ತರೀಕೆರೆಯಿಂದ. ಪಟ್ಟಣದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ

ನಡೆದ ಶ್ರೀ ವಿಶ್ವಕರ್ಮ ಜಯಂತ್ಯುತ್ಸವದ ಉದ್ಘಾಟಿಸಿ ಮಾತನಾಡಿದರು. ವಿಶ್ವಕರ್ಮ ಸಮಾಜ ಇತ್ತೀಚೆಗೆ ತನ್ನ ಸ್ಥಾನವನ್ನು ಸಮಾಜದಲ್ಲಿ ಗುರುತಿಸುವ ಕಾರ್ಯ ಮಾಡುತ್ತಿದೆ, ಇದಕ್ಕೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಜಯಂತಿ ಆಚರಣೆ ಜಾರಿಗೆ ತರಲಾಯಿತು. ವಿಶ್ವಕರ್ಮ ಅಭಿವೃದ್ದಿ ನಿಗಮವನ್ನು ಸ್ಥಾಪಿಸಲಾಯಿತು ಎಂದು ಅವರು ಹೇಳಿದರು.

ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮಾತನಾಡಿ ವಿಶ್ಕಕರ್ಮ ಸಮಾಜವು ಬೆಳೆದು ಬಂದ ದಾರಿಯನ್ನು ಅವಲೋಕಿಸಿದರು ಹಾಗೂ ಪಂಚಕಸುಬುಗಳ ಬಗ್ಗೆ ವಿವರಣೆ ನೀಡಿ, ವಿಶ್ವಕರ್ಮರ ಈ ಕಲೆಯನ್ನು ಊಹಿಸುವುದೇ ಕಷ್ಟಸಾಧ್ಯ ಎಂದು ಹೇಳಿದರು.

ತಹಸೀಲ್ದಾರ್ ವಿಶ್ವಜಿತ್ ಮೆಹತಾ ಮಾತನಾಡಿ ಜನಾಂಗದ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಮೊಗ್ಗ ಶ್ರೀ ವಿದ್ಯಾನಿಕೇತನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಡಾ.ಎಸ್.ಬಿ.ಭಾಗ್ಯಲಕ್ಷ್ಮಿ ಕೆ. ಆಚಾರ್ಯ ವಿಶ್ವಕರ್ಮ ಜಯಂತಿ ಬಗ್ಗೆ ಉಪನ್ಯಾಸ ನೀಡಿದರು.

ತರೀಕೆರೆ ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ಎಸ್.ಪಿ. ರಂಗನಾಥ್ ಅಧ್ಯಕ್ಷತೆ ವಹಿಸಿ ಸಮಾಜದ ಸ್ಥಿತಿಗತಿಗಳ ಬಗ್ಗೆ

ಮಾತನಾಡಿದರು, ತಾಲೂಕು ವಿ.ಸ. ತರೀಕೆರೆ ಗೌರವ ಅಧ್ಯಕ್ಷರಾದ ನಾಗಪ್ಪ ಆಚಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ಸಮಾಜದ ಮುಖಂಡರು, ಸದಸ್ಯರು, ನಿವೃತ್ತ ಶಾಲಾ ಶಿಕ್ಷಕ ವಿಶ್ವನಾಥ ಆಚಾರ್, ಶಿಕ್ಷಕ ಜಿ.ಪಿ.ಜಯ್ಯಣ್ಣ, ಕೇಶವಮೂರ್ತಿ, ಲೋಹಿತಾಶ್ವ ಅಚಾರ್, ಮಂಜುನಾಥ ಆಚಾರ್,ಜಿಲ್ಲಾ ಸಮಾಜದ ಸದಸ್ಯರಾದ ಮಂಜುನಾಥ ಅಚಾರ್, ಸುರೇಶ ಆಚಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

20ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತ್ಯುತ್ಸ ಉದ್ಘಾಟನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಅವರು

ನೆರವೇರಿಸಿದರು. ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ಎಸ್.ಪಿ. ರಂಗನಾಥ್ ಅವರು ಮತ್ತಿತರರು ಇದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌