ಕನಕಗಿರಿ: ವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಪಪಂ ಕಚೇರಿ ಮುಂದೆ ಹಮ್ಮಿಕೊಂಡಿರುವ ಪೌರ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರು, ಚಾಲಕರು, ಗಣಕಯಂತ್ರ ಸಹಾಯಕರು ಸೇರಿದಂತೆ ಹೊರಗುತ್ತಿಗೆ ಕಾರ್ಮಿಕರನ್ನು ನೇರ ಪಾವತಿಗೆ ಒಳಪಡಿಸುವುದು. ದಿನಗೂಲಿ ಕ್ಷೇಮಾಭಿವೃದ್ಧಿ, ಸಮಾನ ಕೆಲಸಕ್ಕೆ ಸಮಾನ ವೇತನ, ಕಾಯಂ ಮಾಡುವುದು, ವಿಶೇಷ ನೇಮಕಾತಿಯಡಿ ಕಾಯಂಗೊಂಡ ನೌಕರರಿಗೆ ಎಸ್‌ಎಫ್ ಸಿ ಅಡಿಯಲ್ಲಿ ವೇತನ ನೀಡುವುದು ಹಾಗೂ ವಿವಿಧ ನ್ಯಾಯಯುತ ಬೇಡಿಕೆ ಸರ್ಕಾರವು ಈಡೇರಿಸಬೇಕೆಂದು ಒತ್ತಾಯಿಸಿದರು.
ಪೌರ ಸೇವ ನೌಕರರ ಸಂಘದ ಅಧ್ಯಕ್ಷ ಹುಸೇನಪ್ಪ, ಉಪಾಧ್ಯಕ್ಷ ಕಲ್ಯಾಣಪ್ಪ, ಕಾರ್ಯದರ್ಶಿ ವಿಜಯಕುಮಾರ, ಖಜಾಂಚಿ ಹರೀಶ, ಪ್ರಕಾಶ ಹಾದಿಮನಿ, ಪುರುಷೋತ್ತಮ ಪತ್ತಾರ, ಪಾಮಣ್ಣ, ಯಮನೂರಪ್ಪ, ಹುಲುಗಪ್ಪ, ಷಣ್ಮಪ್ಪ, ನಜೀರಸಾಬ್, ತಿಮ್ಮಮ್ಮ, ಶಕುಂತಲಾ, ಮಹಾದೇವಮ್ಮ, ಗಂಗಮ್ಮ, ಶಾರದಮ್ಮ ಇತರರಿದ್ದರು.ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ತವ್ಯಕ್ಕೆ ಹಾಜರಾಗದೆ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದೇವೆ.
ಕಚೇರಿ ಕೆಲಸ, ಕಸ ಸಂಗ್ರಹಣೆ ಮತ್ತು ವಿಲೇವಾರಿ, ವಿವಿಧ ವಾರ್ಡಗಳ ಸ್ವಚ್ಛತೆ, ಸಾರ್ವಜನಿಕರ ಕೆಲಸಗಳನ್ನು ಬದಿಗೊತ್ತಿ ಮುಷ್ಕರ ನಡೆಸುತ್ತಿದ್ದೇವೆ ಎಂದು ಪೌರ ಸೇವಾ ನೌಕರ ಸಂಘದ ತಾಲೂಕು ಕಾರ್ಯದರ್ಶಿ ವಿಜಯಲಕ್ಷ್ಮೀ ಹೇಳಿದ್ದಾರೆ.