
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಲನಗರದಲ್ಲಿರುವ ನಿಂಬಕ್ಕ ಭವನದಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ ಕಾರ್ಮಿಕ ವಿರೋಧಿ 4 ಸಂಹಿತೆಗಳು ಜಾರಿ ಮಾಡಿದ ಹಿಂಪಡೆಯಲು ಆಗ್ರಹಿಸಿ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಫೆ.12ರ ಮುಷ್ಕರ ಮತ್ತು ಸ್ವಯಂ ಪ್ರೇರಿತ ಬಂದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ವ್ಯಾಪಾರದ ಸುಲಭೀಕರಣದ ಹೆಸರಿನಲ್ಲಿ ಯೂನಿಯನ್ ಮುಕ್ತ ವಾತಾವರಣವನ್ನು ಕಲ್ಪಿಸಲು ಕೇಂದ್ರ ಸರ್ಕಾರದ ಸರ್ವಾಧಿಕಾರಿ ವರ್ತನೆಯೊಂದಿಗೆ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಹೊಸ ಶ್ರಮಿಕ ನೀತಿಯನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಈ ಶ್ರಮಿಕ ನೀತಿ ಮನುಸ್ಮೃತಿಯ ಸ್ಫೂರ್ತಿ ಪಡೆದು ದುಡಿಮೆಗಾರನ ಕೆಲಸ ದುಡಿಯುವುದು ಮಾತ್ರ ಎಂಬ ಪರಿಕಲ್ಪನೆ ಮತ್ತು ಸರ್ಕಾರದ ಜವಾಬ್ದಾರಿ ಕಾನೂನು ಜಾರಿ ಮಾಡುವುದಲ್ಲ ಎಂಬುವುದನ್ನು ಈ ನೀತಿಯಲ್ಲಿ ಘೋಷಿಸಿದೆ ಎಂದು ಕಿಡಿಕಾರಿದರು.ಈಗಾಗಲೇ 44 ಲಕ್ಷ ಪ್ರಕರಣಗಳು ಕಾರ್ಮಿಕ ನ್ಯಾಯಾಲಯಗಳಲ್ಲಿವೆಂಬ ವರದಿ ಇದೆ. ಈಗ ಈ ಕಾರ್ಮಿಕರ ಗತಿಯೇನು? ಕೈಗಾರಿಕಾ ಅಪಘಾತಗಳಲ್ಲಿ ಸಾವಿರಾರು ಕಾರ್ಮಿಕರು ಸಾಯುತ್ತಿದ್ದಾರೆ. ಸಿಲಿಕೋಸಿಸ್ ನಂತರ ಶ್ವಾಸಕೋಶದ ಕಾಯಿಲೆ, ಖಿನ್ನತೆಗಳು, ಪಾರ್ಶ್ವವಾಯು ಮತ್ತು ಹೃದಯದ ಖಾಯಿಲೆಗಳಿಂದ ಬಳಲುವ ದುಡಿಮೆಗಾರರನ್ನು ರಕ್ಷಿಸುವ ಬದಲು ಮತ್ತಷ್ಟು ಅವರ ರಕ್ತವನ್ನು ಹೀರಲು ಸರ್ಕಾರ ಅನುಮತಿ ಕೊಟ್ಟಿದೆ ಎಂದು ದೂರಿದರು.ನವ ಉದಾರವಾದಿ ಬಂಡವಾಳ ಶಾಹಿ ಮತ್ತು ಕಾರ್ಪೋರೇಟ್ ಆಡಳಿತದಲ್ಲಿ ಕೋಮು ಸಂಬಂಧದ ದಾಳಿಯ ಸಂದರ್ಭದಲ್ಲಿ ಜನರ ಜೀವನ, ಜೀವನೋಪಾಯ ಮತ್ತು ಹಕ್ಕುಗಳ ಮೇಲಿನ ದಾಳಿ ನಿಲ್ಲಬೇಕು. ಕೋಡ್‌ಗಳನ್ನು ರದ್ದುಪಡಿಸಿ ಸಂಘಟಿತ, ಅಸಂಘಟಿತ ಮತ್ತು ಸ್ಕಿಮ್ ಕಾರ್ಮಿಕರನ್ನೊಳಗೊಳ್ಳುವ ಕಾಯ್ದೆಗಳನ್ನು ರೂಪಿಸಿ ನರೇಗಾ ಕಾಯ್ದೆಯನ್ನು ಪುನರ್ ಸ್ಥಾಪಿಸಬೇಕು. ಆದ್ದರಿಂದ 4 ಬೀಜ ಮಸೂದೆ, ಭೂಸ್ವಾಧೀನ ಕಾಯ್ದೆ ರದ್ದು ಪಡಿಸಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ, ಸಾರ್ವಜನಿಕ ಕೈಗಾರಿಕೆಗಳ ವಿದ್ಯುತ್, ಅಣು ವಿದ್ಯುತ್ ಒಳಗೊಂಡು ಮೂಲ ಸೌಕರ್ಯಗಳ, ಹಣಕಾಸು ವಲಯಗಳ ಖಾಸಗೀಕರಣ ನಿಲ್ಲಿಸಿ, ಉಚಿತ ಸಾರ್ವತ್ರಿಕ ಸಾರ್ವಜನಿಕ ಆರೋಗ್ಯ, ಶಿಕ್ಷಣ, ಎಲ್ಲರಿಗೂ ಪಿಂಚಣಿ 6 ಗಂಟೆ ಕೆಲಸ, ಕೆಲಸದ ಸ್ಥಳದಲ್ಲಿ ಸುರಕ್ಷತೆ. ಉದ್ಯೋಗ ಭದ್ರತೆ ಭೂಮಿಯ ಹಕ್ಕನ್ನು ಖಚಿತ ಪಡಿಸಿ, ಇದಕ್ಕಾಗಿ ಅತೀ ಶ್ರೀಮಂತರ ಮೇಲೆ ಶೇ.2 ಸಂಪತ್ತಿನ ತೆರಿಗೆ ಮತ್ತು ಪಿತ್ರಾರ್ಜಿತ ತೆರಿಗೆಗಳನ್ನು ಹಾಕಿ ಜನರ ಬದುಕಿನ ಹಕ್ಕುಗಳನ್ನು ಉಳಿಸಬೇಕು ಎಂದರು.ಈ ವೇಳೆ ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಕಾಂತಾ ಘಂಟಿ, ಸಿಐಟಿಯು ಜಿಲ್ಲಾ ಸಂಚಾಲಕ ಲಕ್ಷ್ಮಣ ಹಂದ್ರಾಳ, ಅಣ್ಣಾರಾಯ ಇಳಿಗೇರ, ಚಲವಾದಿ ಮಹಿಳಾ ಸಂಘಟನೆ ಸುರೇಖಾ ರಜಪೂತ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ, ಪ್ರಧಾನ ಕಾರ್ಯದರ್ಶಿ ಅಶ್ವಿನಿ ತಳವಾರ, ಗೌರವ ಅಧ್ಯಕ್ಷೆ ಭಾರತಿ ವಾಲಿ, ಸರಸ್ವತಿ ಮಠ, ಸುಮಂಗಲಾ ಆನಂದಶೆಟ್ಟಿ ಇತರರು ಇದ್ದರು.