ಮೂಲ್ಕಿ: ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಪ್ರಯತ್ನಿಸಬೇಕೆಂದು ದ.ಕ. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ ಹೇಳಿದರು.
ದ.ಕ.ಜಿ. ಪಂ..ಯೋಜನಾ ನಿರ್ದೇಶಕ ಕೆ ಜಯರಾಮ್, ರಾಜ್ಯ ಸರ್ಕಾರಿ ನೌಕರರ ಸಂಘದ ಮೂಲ್ಕಿ ಶಾಖೆಯ ಅಧ್ಯಕ್ಷೆ ಶರ್ಲಿ ಸುಮಾಲಿನಿ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗಳಾದ ಗುರುದತ್ ಎಮ್ ಎನ್, ಎಮ್ ಮಹೇಶ್ ಹೊಳ್ಳ, ಸಚಿನ್ ಕುಮಾರ್, ಬಂಟ್ವಾಳ ತಾಪಂ ಸಹಾಯಕ ನಿರ್ದೇಶಕ ವಿಶ್ವನಾಥ, ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ದ ಕ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ಅರುಣ್ ಪ್ರದೀಪ್ ಡಿಸೋಜಾ, ಕಿಲ್ಪಾಡಿ ಗ್ರಾ ಪಂ.ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಸಾಧಕರನ್ನು ಗೌರವಿಸಲಾಯಿತು ಅತಿಕಾರಿಬೆಟ್ಟು ಪಿಡಿಒ ಶೈಲಜಾ ಸ್ವಾಗತಿಸಿದರು, ರಫೀಕ್ ಕೋಲ್ನಾಡ್ ನಿರೂಪಿಸಿದರು.