ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ: ಗೋಪಾಲಕೃಷ್ಣ ಬೇಳೂರು

KannadaprabhaNewsNetwork |  
Published : May 01, 2026, 01:30 AM IST
ಪ್ರಸಿದ್ದ ಶ್ರೀ ಹುಚ್ಚರಾಯಸ್ವಾಮಿ ದರ್ಶನ ಪಡೆದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ದೇವಸ್ಥಾನದ ಗದೆ ಎತ್ತಿಹಿಡಿದು ಶಕ್ತಿ ಪ್ರದರ್ಶಿಸಿದರು. | Kannada Prabha

ಸಾರಾಂಶ

ಶಿಕಾರಿಪುರಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕುಲದೇವತೆ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಪತ್ನಿ ಜತೆ ಆಗಮಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.

ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಪತ್ನಿ ಜತೆ ಆಗಮಿಸಿ ವಿಶೇಷ ಪೂಜೆ ಪ್ರಾರ್ಥನೆ

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕುಲದೇವತೆ ಹಾಗೂ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಪತ್ನಿ ಜತೆ ಆಗಮಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ದರ್ಶನ ಪಡೆದ ನಂತರದಲ್ಲಿ ಪತ್ರಕರ್ತರ ಜತೆ ಮಾತನಾಡಿ ಶ್ರೀ ಹುಚ್ಚರಾಯಸ್ವಾಮಿ ನಮ್ಮ ಮನೆ ದೇವರು ಆದ್ದರಿಂದ ಕುಟುಂಬ ಸಹಿತ ಬಂದು ದರ್ಶನ ಮಾಡಿದ್ದೇವೆ ಎಂದರು. ನೀವು ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಖಂಡಿತಾ ನಾನು ಒಬ್ಬ ಪ್ರಬಲ ಆಕಾಂಕ್ಷಿ, ಮೂರು ಬಾರಿ ಶಾಸಕನಾಗಿದ್ದು ಸಚಿವ ಪದವಿ ಕೇಳುವುದು ನನ್ನ ಹಕ್ಕು, ಬಾಗಲಕೋಟೆ ಮತ್ತು ದಾವಣಗೆರೆ ಎರಡು ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಿಸುವ ಸಾಧ್ಯತೆ ಹೆಚ್ಚಾಗಿದ್ದು ಎರಡುವರೆ ವರ್ಷದ ನಂತರ ಹೊಸಬರಿಗೆ ಸಚಿವ ಸ್ಥಾನ ಕೊಡಬೇಕು ಆದರೆ ಈಗ 3 ವರ್ಷ ಪೂರ್ಣಗೊಳ್ಳುತ್ತಿದೆ. ಆದ್ದರಿಂದ ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು. ಸಾಗರ ತಾಲೂಕಿನ ಬೇಸೂರಿನಲ್ಲಿ ಅಣು ಸ್ಥಾವರ ನಿರ್ಮಾಣದ ಬಗೆಗಿನ ಪ್ರಶ್ನೆಗೆ ಈ ಯೋಜನೆ ಯಿಂದ ಸ್ಥಳೀಯರು ತಮ್ಮ ಮನೆ ಮಠ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದು ಕೇಂದ್ರ ಸರ್ಕಾರದ ಯೋಜನೆ. ಇದನ್ನು ತಡೆಯುವಲ್ಲಿ ಶಿವಮೊಗ್ಗದ ಸಂಸದ ಬಿ. ವೈ. ರಾಘವೇಂದ್ರ ಜವಾಬ್ದಾರಿ ಇದೆ. ರಾಜ್ಯದಲ್ಲಿ ನಾವು ಕೇಂದ್ರದಲ್ಲಿ ಸಂಸದರು ಯೋಜನೆ ನಿಲ್ಲಿಸಲು ಎಲ್ಲ ರೀತಿ ಯಲ್ಲಿ ಪ್ರಯತ್ನಿಸಬೇಕಾಗಿದೆ ಎಂದರು. ಸಾಗರ ತಾಲೂಕಿಗೆ ಹೊಸ ಯೋಜನೆಗಳು ಬಂದಾಗಲೆಲ್ಲ ಜನ ಹೆದರುತ್ತಿದ್ದಾರೆ. ಉದಾಹರಣೆಗೆ ಮಡೆನೂರು ಡ್ಯಾಮ್, ಶರಾವತಿ ಮುಳುಗಡೆ ಸಂಸತ್ರರಿಗೆ ಇನ್ನು ನ್ಯಾಯ ಸಿಕ್ಕಿಲ್ಲ. ಜನ ಈಗಲೂ ತತ್ತರಿಸು ತ್ತಿದ್ದಾರೆ ಅಲ್ಲದೆ ಇದೀಗ ಒಂದು ಮೊರಾರ್ಜಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಕೊಡಲು ಜಾಗವಿಲ್ಲ. ನಿವೃತ್ತ ಸೈನಿಕರಿಗೆ ಕೊಡಲು ಜಾಗವಿಲ್ಲ ಇಂತಹ ಸಂದರ್ಭದಲ್ಲಿ ಮಲೆನಾಡು ಪ್ರದೇಶದಲ್ಲಿ ಅಣುಸ್ಥಾವರ ತರಲು ನಮ್ಮ ಜನ ಒಪ್ಪುವುದಿಲ್ಲ ಎಂದರು.

ಹೆಲಿಕ್ಯಾಪ್ಟರಲ್ಲಿ ಸರ್ವೆ ಮಾಡಿದ ತಕ್ಷಣ ಕೆಲಸ ಪ್ರಾರಂಭವಾಗೋದಿಲ್ಲ ಸಂಬಂಧಿಸಿದ ಅಧಿಕಾರಿಗಳು ಹಾಗೂ ಮುಖ್ಯ ಮಂತ್ರಿಗಳ ಜತೆ ಮಾತನಾಡಿ ಮನವಿ ಮಾಡುವುದಾಗಿ ತಿಳಿಸಿ ಈಗಾಗಲೇ ಶರಾವತಿ ನಿರಾಶ್ರಿತರು ಸಂಕಷ್ಟದಲ್ಲಿದ್ದು ಪದೇ ಪದೇ ಕಷ್ಟ ಕೊಡಬಾರದು ತಕ್ಷಣ ಈ ಯೋಜನೆ ಉದ್ದೇಶದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾ.ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ್ ಗೌಡ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಂ, ತಹಸೀಲ್ದಾರ್ ವೀಣಾ,ಶಿರಸ್ತೇದಾರ್ ವಿನಯ್‌ ಆರಾಧ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರ್ ಗೌಡ, ಎಚ್ಎಸ್ ರವೀಂದ್ರ, ಮುಖಂಡ ಬಡಗಿ ಪಾಲಾಕ್ಷಪ್ಪ, ಹುಲ್ಮಾರ್ ಶಿವು, ನಗರದ ಮಾಲತೇಶ್,ಮಂಜು ಹುಣಸೆ ಕೊಪ್ಪ,ಸುರೇಶ್ ಧಾರವಾಡ ಸಹಿತ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.ಫೋಟೋ ಕಾಪ್ಟನ್-

ಪ್ರಸಿದ್ದ ಶ್ರೀ ಹುಚ್ಚರಾಯಸ್ವಾಮಿ ದರ್ಶನ ಪಡೆದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ದೇವಸ್ಥಾನದ ಗದೆ ಎತ್ತಿಹಿಡಿದು ಶಕ್ತಿ ಪ್ರದರ್ಶಿಸಿದರು.

[ಫೋಟೋ ಫೈಲ್‌ ನಂ.29 ಕೆ.ಎಸ್.ಕೆ.ಪಿ 1]

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

66/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ
ರಂಗಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಮನೆಗಳು ಜಖಂ