ಪಶ್ಚಿಮ ಪದವೀಧರ ಕ್ಷೇತ್ರದ ಪ್ರಬಲ ಆಕಾಂಕ್ಷಿ: ಲಿಂಗರಾಜ ಪಾಟೀಲ

KannadaprabhaNewsNetwork |  
Published : Nov 26, 2025, 02:15 AM IST
ಲಿಂಗರಾಜ ಪಾಟೀಲ. | Kannada Prabha

ಸಾರಾಂಶ

ಪಕ್ಷವು ನನ್ನ ಸೇವಾ ಹಿರಿತನ ಪರಿಗಣಿಸಿ ಎರಡ್ಮೂರು ಬಾರಿ ವಿಧಾನಪರಿಷತ್‌ಗೆ, 1 ಬಾರಿ ರಾಜ್ಯಸಭೆಗೆ ಮತ್ತು ಈಚೆಗೆ ನಡೆದ ವಿಧಾನಸಭೆ ಚುನವಣೆಯಲ್ಲಿಯೂ ಕೂಡ ನನ್ನ ಹೆಸರನ್ನು ಅಂತಿಮಗೊಳಿಸಿ ಕೊನೆ ಕ್ಷಣದಲ್ಲಿ ಬೇರೆಯವರಿಗೆ ಟಿಕೇಟ್ ನೀಡಲಾಯಿತು. ಆದರೂ ಪಕ್ಷದ ನಿಲುವಿಗೆ ಬದ್ಧನಾಗಿ ನಡೆದುಕೊಂಡಿದ್ದೇನೆ.

ಹುಬ್ಬಳ್ಳಿ:

ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆಗೆ ಬಿಜೆಪಿಯಿಂದ ನಾನೂ ಪ್ರಬಲ ಆಕಾಕ್ಷಿಯಾಗಿದ್ದೇನೆ. ಈಗಾಗಲೇ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಈ ಬಾರಿ ಪಕ್ಷದಿಂದ ಟಿಕೆಟ್‌ ದೊರೆಯುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ 36 ವರ್ಷಗಳಿಂದ ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿದ್ದೇನೆ. ಈಗಾಗಲೇ ಮೂರು ಬಾರಿ ಜಿಲ್ಲಾಧ್ಯಕ್ಷನಾಗಿ, ರಾಜ್ಯ ಕಾರ್ಯಕಾರಣಿ ಸದಸ್ಯನಾಗಿ ಸೇರಿದಂತೆ ಹಲವು ಸ್ಥಾನಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದರು.

ಪಕ್ಷವು ನನ್ನ ಸೇವಾ ಹಿರಿತನ ಪರಿಗಣಿಸಿ ಎರಡ್ಮೂರು ಬಾರಿ ವಿಧಾನಪರಿಷತ್‌ಗೆ, 1 ಬಾರಿ ರಾಜ್ಯಸಭೆಗೆ ಮತ್ತು ಈಚೆಗೆ ನಡೆದ ವಿಧಾನಸಭೆ ಚುನವಣೆಯಲ್ಲಿಯೂ ಕೂಡ ನನ್ನ ಹೆಸರನ್ನು ಅಂತಿಮಗೊಳಿಸಿ ಕೊನೆ ಕ್ಷಣದಲ್ಲಿ ಬೇರೆಯವರಿಗೆ ಟಿಕೇಟ್ ನೀಡಲಾಯಿತು. ಆದರೂ ಪಕ್ಷದ ನಿಲುವಿಗೆ ಬದ್ಧನಾಗಿ ನಡೆದುಕೊಂಡಿದ್ದೇನೆ ಎಂದರು.

ಈಗಾಗಲೇ ಪಕ್ಷದ ವರಿಷ್ಠರನ್ನು ಭೇಟಿಯಾಗಿ ನನ್ನ ಬೇಡಿಕೆ ಸಲ್ಲಿಸಿದ್ದೇನೆ. ಎಲ್ಲರೂ ಸಹಮತ ವ್ಯಕ್ತಪಡಿಸಿದ್ದು, ಈ ಬಾರಿ ಬಿಜೆಪಿಯಿಂದ ಟಿಕೆಟ್‌ ದೊರೆಯುವ ವಿಸ್ವಾಸವಿದೆ ಎಂದರು.ಡಿ. 10ರ ವರೆಗೆ ವಿಸ್ತರಣೆ

ಕಳೆದ ಚುನಾವಣೆಯಲ್ಲಿ 72 ಸಾವಿರ ಮತದಾರರು ನೋಂದಣಿಯಾಗಿದ್ದರು. ಈ ಬಾರಿ 1.25 ಲಕ್ಷ ನೋಂದಣಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಮಹಾನಗರ 26,324 ಸೇರಿ ಪಶ್ಚಿಮ ಕ್ಷೇತ್ರದಾದ್ಯಂತ 76 ಸಾವಿರಕ್ಕೂ ಅಧಿಕ ನೋಂದಣಿಯಾಗಿವೆ. ನ. 6ರಿಂದ ಮತದಾರರ ನೋಂದಣಿ ಪ್ರಾರಂಭವಾಗಿದೆ. ಅಧಿಕಾರಿಗಳು ಸಮೀಕ್ಷಾ ಕಾರ್ಯದಲ್ಲಿ ನಿರತರಾದ ಹಿನ್ನೆಲೆಯಲ್ಲಿ ನೋಂದಣಿ ಕಾರ್ಯದಲ್ಲಿ ತೀವ್ರ ಹಿನ್ನೆಡೆಯಾಗಿತ್ತು. ನೋಂದಣಿ ಅವಧಿ ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು. ನಮ್ಮ ಮನವಿ ಮೇರೆಗೆ ಡಿ. 10ರ ವರೆಗೆ ನೋಂದಣಿ ದಿನಾಂಕ ಮುಂದೂಡಲಾಗಿದೆ ಎಂದರು.

ಈ ವೇಳೆ ರವಿ ನಾಯಕ, ಪ್ರೊ. ಕೆ.ಎಸ್‌. ಆದಪ್ಪನವರ, ಪುಂಡಲಿಕ ಅಪ್ಪಿನಬೈಲ್, ಪ್ರಶಾಂತ ಹಾವಣಗಿ, ಲಿಂಗರಾಜ ಬೆಳಗಟ್ಟಿ ಸೇರಿದಂತೆ ಹಲವರಿದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ