ಮಂಜೂರಾದ ಭೂಮಿ ಸ್ವಾಧೀನಕ್ಕೆ ಪೌತಿ ಖಾತೆದಾರರಿಂದ ಹೋರಾಟ

KannadaprabhaNewsNetwork |  
Published : Aug 02, 2024, 12:55 AM IST
೧೯೬೧-೬೨ನೇ ಸಾಲಿನಲ್ಲಿ ಭದ್ರಾವತಿ ತಾಲೂಕಿನ ಚಂದನಕೆರೆ ಸರ್ವೆ ನಂ.೧೨ ಮತ್ತು ಯಡೇಹಳ್ಳಿ ಸರ್ವೆ ನಂ.೬೬ರಲ್ಲಿ ಮಂಜೂರಾತಿಯಾದ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಪೌತಿ ಖಾತೆದಾರರು ಕಳೆದ ಹಲವು ದಿನಗಳಿಂದ ದಲಿತ ಸಂಘರ್ಷ ಸಮಿತಿ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದ ತಂಡ ಭೇಟಿ ನೀಡಿ ಪ್ರತಿಭಟನೆ ಅಂತ್ಯಗೊಳಿಸಲು ಮನವಿ ಮಾಡಿತು. | Kannada Prabha

ಸಾರಾಂಶ

ಚಂದನಕೆರೆ ಸರ್ವೆ ನಂ.೧೨ ಮತ್ತು ಯಡೇಹಳ್ಳಿ ಸರ್ವೆ ನಂ.೬೬ರಲ್ಲಿ ಮಂಜೂರಾತಿಯಾದ ಭೂಮಿ ಸ್ವಾಧೀನ ಪಡೆಯಲು ಪೌತಿ ಖಾತೆದಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದ ತಂಡ ಭೇಟಿ ನೀಡಿ ಪ್ರತಿಭಟನೆ ಅಂತ್ಯಗೊಳಿಸಲು ಮನವಿ ಮಾಡಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

೧೯೬೧-೬೨ನೇ ಸಾಲಿನಲ್ಲಿ ತಾಲೂಕಿನ ಚಂದನಕೆರೆ ಸರ್ವೆ ನಂ.೧೨ ಮತ್ತು ಯಡೇಹಳ್ಳಿ ಸರ್ವೆ ನಂ.೬೬ರಲ್ಲಿ ಮಂಜೂರಾತಿಯಾದ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಪೌತಿ ಖಾತೆದಾರರು ಕಳೆದ ಹಲವು ದಿನಗಳಿಂದ ದಲಿತ ಸಂಘರ್ಷ ಸಮಿತಿ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದ ತಂಡ ಭೇಟಿ ನೀಡಿ ಪ್ರತಿಭಟನೆ ಅಂತ್ಯಗೊಳಿಸಲು ಮನವಿ ಮಾಡಿತು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಚಂದನಕೆರೆ ಸರ್ವೆ ನಂ.೧೨ರಲ್ಲಿ ೧೯೮೦ ರಿಂದ ಎಂ.ಪಿ.ಎಂರವರ ಸ್ವಾಧೀನದಲ್ಲಿದ್ದು, ನೀಲಗಿರಿ ನೆಡುತೋಪು ಇರುತ್ತದೆ. ೨೦೧೨-೧೩ರಲ್ಲಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸ್ವಾಧೀನ ಕೋರಿದ ಪ್ರಕರಣಗಳು ವಜಾ ಆಗಿವೆ. ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ನಿಮ್ಮ ಮನವಿಯನ್ನು ವಿಲೇ ಮಾಡಲು ಕಷ್ಟವಾಗಿದೆ ಎಂದು ಪ್ರತಿಭಟನಾನಿರತರಿಗೆ ಮನವರಿಕೆ ಮಾಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಇದು ಅರಣ್ಯಪ್ರದೇಶವಾಗಿರುವುದರಿಂದ ಪ್ರತಿಭಟನೆಯನ್ನು ಬೇರೆಡೆಗೆ ಸ್ಥಳಾಂತರಿಸಿ, ಪ್ರತಿಭಟನೆ ಕೈಬಿಡಲು ಕೋರಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಮಾತನಾಡಿ, ಅರಣ್ಯ ಪ್ರದೇಶದಲ್ಲಿ ಮಂಜೂರಾತಿ ಮತ್ತು ಸಾಗುವಳಿ ನೀಡುವುದು ಅರಣ್ಯ ಸಂರಕ್ಷಣಾ ಕಾಯ್ದೆ-೧೯೮೦ರ ಅನ್ವಯ ನಿಷಿದ್ಧವಾಗಿರುತ್ತದೆ ಎಂದು ವಿವರಿಸಿದರು. ತಂಡದಲ್ಲಿ ತಹಸೀಲ್ದಾರ್ ಕೆ.ಆರ್.ನಾಗರಾಜು ಹಾಗೂ ಕಂದಾಯ, ಅರಣ್ಯ ಮತ್ತು ಎಂ.ಪಿ.ಎಂ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯಾಯಕ್ಕಾಗಿ ಹೋರಾಟ: ಬಿ.ಎನ್.ರಾಜು

೧೯೬೧-೬೨ನೇ ಸಾಲಿನಲ್ಲಿ ತಾಲೂಕಿನ ಚಂದನಕೆರೆ ಸರ್ವೆ ನಂ.೧೨ ಮತ್ತು ಯಡೇಹಳ್ಳಿ ಸರ್ವೆ ನಂ.೬೬ರಲ್ಲಿ ಸರ್ಕಾರದಿಂದ ದಲಿತ ಕುಟುಂಬಗಳಿಗೆ ತಲಾ ೨ ಎಕರೆ ಜಮೀನು ಮಂಜೂರು ಮಾಡಲಾಗಿದೆ. ಹಲವಾರು ವರ್ಷಗಳಿಂದ ದಲಿತರು ಭೂಮಿ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈಗಲೂ ಸಹ ಪಹಣಿ, ಖಾತೆ ಸೇರಿದಂತೆ ಎಲ್ಲಾ ದಾಖಲಾತಿಗಳು ಸಹ ಇವರ ಹೆಸರಿನಲ್ಲಿಯೇ ಇವೆ. ಯಾವುದೇ ಸೂಕ್ತ ದಾಖಲೆಗಳು ಇಲ್ಲದೆ ದಲಿತ ಕುಟುಂಬಗಳನ್ನು ತೆರವು ಗೊಳಿಸುವುದು ಸೂಕ್ತವಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದ್ದಾರೆ.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ