ವಿದ್ಯಾರ್ಥಿಯೊಬ್ಬ ಯುಟ್ಯೂಬ್ ಮೂಲಕ ನೀಟ್ ಪರೀಕ್ಷೆಯ ಫಲಿತಾಂಶದ ನಕಲಿ ಅಂಕಪಟ್ಟಿ ಪಡೆದು, ರ್‍ಯಾಂಕ್ ಗಳಿಸಿರುವುದಾಗಿ ಪ್ರಚಾರ ಪಡೆದುಕೊಂಡ ವಿಚಿತ್ರ ಘಟನೆ ನಡೆದಿದೆ. ಸ್ವತಃ ಈ ವಿದ್ಯಾರ್ಥಿಯ ತಂದೆಯೇ ಇದೀಗ ನಕಲಿ ಅಂಕಪಟ್ಟಿ ಕಳುಹಿಸಿದ ಯುಟ್ಯೂಬರ್ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ವಿದ್ಯಾರ್ಥಿಯೊಬ್ಬ ಯುಟ್ಯೂಬ್ ಮೂಲಕ ನೀಟ್ ಪರೀಕ್ಷೆಯ ಫಲಿತಾಂಶದ ನಕಲಿ ಅಂಕಪಟ್ಟಿ ಪಡೆದು, ರ್‍ಯಾಂಕ್ ಗಳಿಸಿರುವುದಾಗಿ ಪ್ರಚಾರ ಪಡೆದುಕೊಂಡ ವಿಚಿತ್ರ ಘಟನೆ ನಡೆದಿದೆ. ಸ್ವತಃ ಈ ವಿದ್ಯಾರ್ಥಿಯ ತಂದೆಯೇ ಇದೀಗ ನಕಲಿ ಅಂಕಪಟ್ಟಿ ಕಳುಹಿಸಿದ ಯುಟ್ಯೂಬರ್ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ರೋಶನ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ, ಅವರ ಮಗ, ನಗರದ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದು, ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಈ ಸಂದರ್ಭ ಆತ ಯುಟ್ಯೂಬ್ ನಲ್ಲಿ ಎಡಿಟರಿಂಗ್ ಮಾಸ್ಟರ್ ಎಂಬ ಚಾನೆಲನ್ನು ನೋಡಿದ್ದು, ಅದರಲ್ಲಿ ರಾಷ್ಟ್ರಮಟ್ಟದ ನೀಟ್, ಜೆಇಇ, ಸಿಬಿಎಸ್‌ಸಿ ಪ್ರವೇಶ ಪರೀಕ್ಷೆಗಳ ಅಂಕಪಟ್ಟಿಗಳನ್ನು ನೀಡುವುದಾಗಿ ಹೇಳಲಾಗಿತ್ತು, ಸಂಪರ್ಕಕ್ಕೆ 2 ಮೊಬೈಲ್ ನಂಬರ್ ಗಳನ್ನು ಕೊಡಲಾಗಿತ್ತು. ಪ್ರವೇಶ ಪರೀಕ್ಷೆಯ ಒತ್ತಡದಲ್ಲಿದ್ದ ವಿದ್ಯಾರ್ಥಿ ಅದನ್ನು ನಂಬಿ ಈ ನಂಬರ್ ಗಳ ಮೂಲಕ ವಿಶು ಕುಮಾರ್ ಎಂಬಾತನನ್ನು ಸಂಪರ್ಕಿಸಿದ್ದ, ಆತನ ಸೂಚನೆಯಂತೆ ತಮ್ಮ ಮಗ 8 ಬಾರಿ ವಿವಿಧ ಮೊತ್ತಗಳಲ್ಲಿ ಒಟ್ಟು 17,000 ರು.ಗಳನ್ನು ಪಾವತಿಸಿದ್ದ.ನಂತರ ಮೇ 4ರಂದು ನೀಟ್ ಪರೀಕ್ಷೆ ಬರೆದಿದ್ದ, ಜೂ. 14ರಂದು ಫಲಿತಾಂಶ ಪ್ರಕಟವಾಗಿತ್ತು, ಜೂ. 16ರಂದು ಆರೋಪಿ ವಿಶು ಕುಮಾರ್ ವಿದ್ಯಾರ್ಥಿಗೆ ವಾಟ್ಸಾಪ್ ಮೂಲಕ ಅಂಕಪಟ್ಟಿಯನ್ನು ಕಳುಹಿಸಿದ್ದು, ಅದರಲ್ಲಿ ಆತನಿಗೆ ರಾಷ್ಟ್ರಮಟ್ಟದಲ್ಲಿ 107ನೇ ರ್‍ಯಾಂಕ್ ಸಿಕ್ಕಿರುವಂತೆ ಅಂಕಗಳನ್ನು ನಮೂದಿಸಲಾಗಿತ್ತು.ಆದರೆ, ಆತ ಬರೆದಿದ್ದ ನೀಟ್ ಪರೀಕ್ಷೆಯಲ್ಲಿ ಆತನ ರ್‍ಯಾಂಕ್ 17 ಲಕ್ಷಕ್ಕಿಂತಲೂ ಮೇಲಿತ್ತು. ಆದರೂ ಆತನಿಗೆ ರ್‍ಯಾಂಕ್ ಬಂದಿದೆ ಎಂದು ಮಾಧ್ಯಮಗಳಲ್ಲಿ ಪ್ರಚಾರ ನೀಡಲಾಗಿತ್ತು. ಇದೀಗ ಆತ ನಕಲಿ ಅಂಕಪಟ್ಟಿಯ ಮೂಲಕ ಮಾಧ್ಯಮಗಳಲ್ಲಿ ಪ್ರಚಾರ ಪಡೆದಿರುವುದು ಬಹಿರಂಗವಾಗುತ್ತಿದ್ದಂತೆ, ಆತನ ತಂದೆ ತಮ್ಮ ಮಗ ಅಪ್ರಾಪ್ತ ಅಮಾಯಕ, ಆತನಿಗೆ ಯುಟ್ಯೂಬರ್ ನಿಂದ ವಂಚನೆಯಾಗಿದೆ. ಆದ್ದರಿಂದ ಯುಟ್ಯೂಬರ್ ಮೇಲೆ ಕೇಸು ದಾಖಲಿಸಿ ಕಾನೂನು ಕ್ರಮನ ಕೈಗೊಳ್ಳಬೇಕು ಎಂದು ಎಸ್ಪಿಗೆ ದೂರು ಮನವಿ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.