ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಶಿಕ್ಷಕರ ವಿರುದ್ಧ ದೂರು ದಾಖಲು: ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಅತಿಥಿ ಶಿಕ್ಷಕಿ ಶಾಲೆಯಲ್ಲಿ ಶಿಸ್ತು ಕಾಪಾಡದೇ ನಿರ್ಲಕ್ಷ್ಯ ವಹಿಸದ ಕಾರಣ ಈ ಘಟನೆ ನಡೆದಿದೆ ಎಂದು ಗಾಯಗೊಂಡ ಬಾಲಕನ ಪೋಷಕರು ಲೋಕಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿಜಮಖಂಡಿ: ಢವಳೇಶ್ವರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಬ್ಬರ ಮಧ್ಯೆ ಜಗಳವಾಗಿ 1ನೇ ತರಗತಿ ವಿದ್ಯಾರ್ಥಿಯ ಕಣ್ಣಿಗೆ ಕಟ್ಟಿಗೆಯಿಂದ ಚುಚ್ಚಿದ್ದರಿಂದ ತೀವ್ರ ಗಾಯವಾಗಿ ನರಳಾಡಿದರೂ ಆಸ್ಪತ್ರೆಗೆ ದಾಖಲಿಸದೇ ಪಾಲಕರು ಬರುವವರೆಗೆ ಕಾಲಹರಣ ಮಾಡಿದ್ದಾರೆ. ನಿರ್ಲಕ್ಷ್ಯ ತೋರಿದ ಶಾಲೆಯ ಮುಖ್ಯಶಿಕ್ಷಕ ಹಾಗೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರು ಹಾಗೂ ಎಐಸಿಸಿ ವೀಕ್ಷಕರು, ಕೆಪಿಸಿಸಿ ಸಂಯೋಜಕಿ ಸುನೀತಾ ಐಹೊಳೆ ಜಮಖಂಡಿ ಎಸಿಗೆ ಮನವಿ ಸಲ್ಲಿಸಿದ್ದಾರೆ. ಶಿಕ್ಷಕರು ಶಾಲೆಯಲ್ಲಿ ಶಿಸ್ತು ಕಾಪಾಡದಿರುವುದು ಹಾಗೂ ಗಂಭೀರ ಗಾಯವಾದರೂ ಮಗುವನ್ನು ಆಸ್ಪತ್ರೆಗೆ ದಾಖಲಿಸದೇ ಪಾಲಕರಿಗೆ ಕರೆ ಮಾಡಿ ಕರೆದುಕೊಂಡು ಹೋಗುವಂತೆ ತಿಳಿಸಿ ಅವರು ಬರುವವರೆಗೆ ಕಾಲಹರಣ ಮಾಡಿ ನಿರ್ಲಕ್ಷ್ಯ ತೋರಿದ್ದು, ಶಿಕ್ಷಕರ ವಿರುದ್ಧ ಕ್ರಮ ಜರುಗಿಸಬೇಕು. ಕಣ್ಣು ಕಳೆದುಕೊಂಡು ಮಗುವಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ವೇಲೆ ಡಿಎಸ್‌ಎಸ್ ಮುಖಂಡರು ಇದ್ದರು.