ವಿದ್ಯಾರ್ಥಿಗಳೇ ಶಿಸ್ತು ಅಳವಡಿಸಿಕೊಳ್ಳಿ

KannadaprabhaNewsNetwork |  
Published : May 26, 2024, 01:35 AM IST
25ಐಎನ್‌ಡಿ1,ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ  ವಿದ್ಯಾ ಜ್ಯೋತಿ ಕೋಚಿಂಗ್ ಕ್ಲಾಸ್  ಬೇಸಿಗೆ ರಜೆ ಮುಕ್ತಾಯ ಸಮಾರಂಭದಲ್ಲಿ,ಸಂಸ್ಥೆಯ ಕಾರ್ಯದರ್ಶಿಯಾದ ಪುಂಡಲಿಕ್ ಕಪಾಲಿ ಮಾತನಾಡಿದರು. | Kannada Prabha

ಸಾರಾಂಶ

ಶಿಸ್ತು ಶಿಕ್ಷಣದ ಅಡಿಗಲ್ಲು ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ವಿದ್ಯಾದೇವಿ ತಾನೇ ಒಲಿಯುತ್ತಾಳೆ. ಶಿಕ್ಷಣ ತಾನೇ ಬರುತ್ತದೆ. ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎಂದು ಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪುಂಡಲೀಕ ಕಪಾಲಿ ಹೇಳಿದರು.

ಇಂಡಿ: ಶಿಸ್ತು ಶಿಕ್ಷಣದ ಅಡಿಗಲ್ಲು ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ವಿದ್ಯಾದೇವಿ ತಾನೇ ಒಲಿಯುತ್ತಾಳೆ. ಶಿಕ್ಷಣ ತಾನೇ ಬರುತ್ತದೆ. ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎಂದು ಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪುಂಡಲೀಕ ಕಪಾಲಿ ಹೇಳಿದರು.

ಅವರು ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ವಿದ್ಯಾ ಜ್ಯೋತಿ ಕೋಚಿಂಗ್ ಕ್ಲಾಸ್ ಬೇಸಿಗೆ ರಜೆ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಟಿ.ಬಿ. ಶಿರಕನಹಳ್ಳಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಡಿನ ನಾಗರಿಕರು. ಚೆನ್ನಾಗಿ ಓದಿ ಒಳ್ಳೆಯ ಹುದ್ದೆ ಪಡೆದುಕೊಂಡು ತಂದೆ ತಾಯಿ ಹೆಸರು ಹಾಗೂ ಹುಟ್ಟಿದ ಊರಿನ ಕೀರ್ತಿ ತರಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಿರುಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರವೀಣ್ ಮನಮಿ, ಅಶ್ವಿನಿ ರಜಪೂತ್,

ರಂಜಿತಾ ಡಿ.ಕೆ, ಶೋಭಾ ಜೋಶಿ, ಜ್ಯೋತಿ ಪವಾರ್, ಅಜಿತ್ ಬಾವಿಕಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ವೀಕ್ಷಿಸಿದ ಸಂಸದ ಡಾ.ಕೆ.ಸುಧಾಕರ್
ಅರಣ್ಯ ಭೂಮಿ ಕಬಳಿಸುವವರ ವಿರುದ್ಧ ಕ್ರಮಕ್ಕೆ ಸಚಿವರ ಸೂಚನೆ