೩೭೧(ಜೆ)ಗೆ ಜಿಲ್ಲೆ ಸೇರ್ಪಡೆಗೆ ವಿದ್ಯಾರ್ಥಿಗಳ ಆಗ್ರಹ

KannadaprabhaNewsNetwork |  
Published : Oct 26, 2026, 04:15 AM IST
ಜೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ವಿಜಯಪುರ ಜಿಲ್ಲೆಯು ಭೌಗೋಳಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ೩೭೧(ಜೆ) ಕಲಂ ವ್ಯಾಪ್ತಿಗೆ ಸೇರಿಸಿ ಈ ಪ್ರದೇಶವನ್ನು ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನಕ್ಕೆ ಪರಿಗಣಿಸಲು ಸರ್ಕಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಹಕ್ಕೋತ್ತಾಯ ಮಂಡಿಸಬೇಕು. ಈ ಭಾಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಿಂದಗಿಯ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಾಕ್ಷಿ ಬಿರಾದಾರ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ವಿಜಯಪುರ ಜಿಲ್ಲೆಯು ಭೌಗೋಳಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ೩೭೧(ಜೆ) ಕಲಂ ವ್ಯಾಪ್ತಿಗೆ ಸೇರಿಸಿ ಈ ಪ್ರದೇಶವನ್ನು ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನಕ್ಕೆ ಪರಿಗಣಿಸಲು ಸರ್ಕಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಹಕ್ಕೋತ್ತಾಯ ಮಂಡಿಸಬೇಕು. ಈ ಭಾಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಿಂದಗಿಯ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಾಕ್ಷಿ ಬಿರಾದಾರ ಆಗ್ರಹಿಸಿದರು.ನಗರದ ಬಸವೇಶ್ವರ ಸರ್ಕಲ್ ಬಳಿ ರೇ.ಚ.ರೇವಡಿಗಾರ ಪ್ರತಿಷ್ಠಾನ ಹಾಗೂ ೩೭೧(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ ೨೩ ದಿನಗಳಿಂದ ನಡೆಯುತ್ತಿರುವ ಧರಣಿಯಲ್ಲಿ ಮಾತನಾಡಿ, ಈ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ, ನೀರಾವರಿ ಸೌಲಭ್ಯದಲ್ಲಿ ರೈತರ ಹಿತಕಾಯಬೇಕು ಎಂದರು.ನಗರದ ಪ್ರೇರಣಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಮಾತನಾಡಿ, ಕಲ್ಯಾಣ ಕರ್ನಾಟಕದ ಜನರ ಆಶೋತ್ತರಗಳು ಈಡೇರಬೇಕಾದರೆ ೩೭೧(ಜೆ) ಕಲಂ ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸರ್ಕಾರ ಮಧ್ಯ ಪ್ರವೇಶಿಸಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು, ಅಲ್ಲದೆ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಮೀಸಲಾತಿ ಪಡೆಯಲು ವಿಜಯಪುರ ಜಿಲ್ಲೆಗೆ ೩೭೧ ಜೆ ಕಲಂ ಮಿಸಲಾತಿ ಪಡೆಯಲು ನಾವು ಸಿದ್ದರಾಗಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಮೇಘಾ ಚೌದರಿ, ಸಾವಿತ್ರಿ ಯಂಕಂಚಿ, ಸಾನಿಕಾ ನಂದರಗಿ , ಶಿವಾನಿ ಬಿರಾದಾರ, ಚನ್ನಮ್ಮ ಯಾಳಗಿ, ಕವಿತಾ ಕೆಂಭಾವಿ, ರೂಪಾ ಪೂಜಾರಿ, ಹೋರಾಟದ ರೂವಾರಿ ರಂಗನಾಥ ತೊರ್ಪೆ, ಗುರುರಾಜ್ ಪಡಶೆಟ್ಟಿ, ಶಂಭುಲಿಂಗ ಕಕ್ಕಳಮೇಲಿ, ಸಾಯಬಣ್ಣ ದೇವರಮನಿ, ಪಂಡಿತ ಯಂಪುರೆ, ದಾನಪ್ಪಗೌಡ ಚನ್ನಗೊಂಡ, ಎಂ.ಎಂ.ಹಂಗರಗಿ, ಸಂಗಪ್ಪ ಬ್ಯಾಕೋಡ, ಉಪನ್ಯಾಸಕ ಸಾಹೇಬಗೌಡ ದುದಗಿ ಮಾತನಾಡಿ ಸರ್ಕಾರವನ್ನು ಒತ್ತಾಯಿಸಿದರು.ಈ ವೇಳೆ ಅಶೋಕ ವಾರದ, ಶಂಕರ ಮಲ್ಲೇದ, ಶ್ರೀಮಂತ ಪಾಟೀಲ, ಈರಣ್ಣಗೌಡ ಪಾಟೀಲ್ ಅಸಂಗಿಹಾಳ, ಅಪ್ಪುಗೌಡ ಪಾಟೀಲ್, ಪರಶುರಾಮ ನಾಯ್ಕೋಡಿ ಖಾನಾಪುರ, ಶ್ರೀಶೈಲ ಯಳಮೇಲಿ, ಎಂ.ಪಿ.ಬುಕ್ಕ, ನಿವೇದಿತ ಉಮರಗಿ,ವ್ಹಿ.ಎಸ್.ಆಲಳಿಮಠ, ರೂಪಾ ಶಿವಸಿಂಪಗೇರ, ಸತೀಶ ಕುಲಕರ್ಣಿ, ಬಸವರಾಜ ದೇಸಾಯಿ, ಶಾಂತು ರಾಣಗೋಳ, ಪಿ.ಕೆ.ಪೂಜಾರಿ, ಅಜುಂ ಆಲಮೇಲ, ಎಸ್.ಎಂ.ವೀರಾಪೂರ. ಎ.ವ್ಹಿ.ನಾಯಕ್, ಶಿಲ್ಪಾ ಪಾಟೀಲ, ಪ್ರೇರಣ ಸಂಸ್ಥೆಯ ಶಿಕ್ಷಕರು ಹಾಗೂ ಸಿಬ್ಬಂದಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರು ಚನ್ನಮ್ಮ ಹೆಸರಿನಲ್ಲಿ ಸಾರಿಗೆ ಸಂಸ್ಥೆ: ಡಿಕೆಶಿ ಘೋಷಣೆ
ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ ಭವ್ಯ ಪಥಸಂಚಲನ