ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನವನ್ನು ಚೆನ್ನಾಗಿ ಕಲಿಯಿರಿ

KannadaprabhaNewsNetwork |  
Published : Jun 14, 2026, 01:45 AM IST
13ಎಚ್ಎಸ್ಎನ್3 :  | Kannada Prabha

ಸಾರಾಂಶ

ಆರ್ಥಿಕವಾಗಿ ಪ್ರಜ್ಞಾವಂತರಾದರೆ ಈ ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಬದುಕನ್ನು ಸರಳವಾಗಿ ಕಟ್ಟಿಕೊಳ್ಳಬಲ್ಲರು. ಈ ನಿಟ್ಟಿನಲ್ಲಿ ಕಾಮರ್ಸ್‌ ವಿದ್ಯಾರ್ಥಿಗಳಿಗೆ ದೊಡ್ಡ ಜಗತ್ತು ತೆರೆದುಕೊಂಡಿದೆ ಎಂದು ಹೇಳಿದರು. ಮುಂದುವರಿಯುತ್ತಾ ದೇಶದ ದೊಡ್ಡ ದೊಡ್ಡ ಬ್ಯಾಂಕುಗಳೂ ಕಾರ್ಪೊರೇಟ್ ಸಂಸ್ಥೆಗಳೂ ಬಹು ರಾಷ್ಟ್ರೀಯ ಕಂಪನಿಗಳು ಡಿಜಿಟಲ್ ಮಾಧ್ಯಮದಲ್ಲಿ ಬಹಳಷ್ಟು ಅವಕಾಶಗಳನ್ನು ನೀಡುತ್ತಿವೆ. ಆದ್ದರಿಂದ ಮಕ್ಕಳು ಡಿಜಿಟಲ್ ತಂತ್ರಜ್ಞಾನವನ್ನು ಕಲಿಯಲೇಬೇಕು. ಕಾಲೇಜುಗಳು ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನವನ್ನ ಗಂಭೀರವಾಗಿ ಕಲಿಸಬೇಕು ಎಂದು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಭಾರತದ ಹಣಕಾಸು ಈಗ ಡಿಜಿಟಲ್ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಹಾಗಾಗಿ ಸಾಮಾನ್ಯ ನಾಗರಿಕರೂ ಡಿಜಿಟಲ್ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಬೆಂಗಳೂರಿನ ರಿಸರ್ವ್‌ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್‌ ಬಾಬುಲ್‌ ಬರ್ಡೋಲಿ ಹೇಳಿದರು.

ಅವರು ದಿನಾಂಕ ಶುಕ್ರವಾರ ನಗರದ ಸೆಂಟ್ರಲ್ ಕಾಮರ್ಸ್‌ ಪದವಿ ಕಾಲೇಜಿನಲ್ಲಿ ಆ ಯೋಜನೆ ಮಾಡಿದ್ದ ‘ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆ’ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಜಗತ್ತೆಲ್ಲ ಈಗ ಡಿಜಿಟಲ್ ಮಾಧ್ಯಮದಲ್ಲಿ ಮುಳುಗಿದೆ. ಆದ್ದರಿಂದ ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನವನ್ನು ಚೆನ್ನಾಗಿ ಕಲಿಯಬೇಕು. ಜೊತೆಜೊತೆಗೆ ಆರ್ಥಿಕತೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಆರ್ಥಿಕವಾಗಿ ಪ್ರಜ್ಞಾವಂತರಾದರೆ ಈ ಸ್ಪರ್ಧಾ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಬದುಕನ್ನು ಸರಳವಾಗಿ ಕಟ್ಟಿಕೊಳ್ಳಬಲ್ಲರು. ಈ ನಿಟ್ಟಿನಲ್ಲಿ ಕಾಮರ್ಸ್‌ ವಿದ್ಯಾರ್ಥಿಗಳಿಗೆ ದೊಡ್ಡ ಜಗತ್ತು ತೆರೆದುಕೊಂಡಿದೆ ಎಂದು ಹೇಳಿದರು. ಮುಂದುವರಿಯುತ್ತಾ ದೇಶದ ದೊಡ್ಡ ದೊಡ್ಡ ಬ್ಯಾಂಕುಗಳೂ ಕಾರ್ಪೊರೇಟ್ ಸಂಸ್ಥೆಗಳೂ ಬಹು ರಾಷ್ಟ್ರೀಯ ಕಂಪನಿಗಳು ಡಿಜಿಟಲ್ ಮಾಧ್ಯಮದಲ್ಲಿ ಬಹಳಷ್ಟು ಅವಕಾಶಗಳನ್ನು ನೀಡುತ್ತಿವೆ. ಆದ್ದರಿಂದ ಮಕ್ಕಳು ಡಿಜಿಟಲ್ ತಂತ್ರಜ್ಞಾನವನ್ನು ಕಲಿಯಲೇಬೇಕು. ಕಾಲೇಜುಗಳು ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನವನ್ನ ಗಂಭೀರವಾಗಿ ಕಲಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಹಾಸನದ ಕೆನರಾ ಬ್ಯಾಂಕಿನ ಎಲ್‌ಡಿಎಂ ಆದ ಲತಾ ಸರಸ್ವತಿ ಹಾಗೂ ಲಿಟರಸಿ ಕೌನ್ಸಿಲರ್‌ ಮಲ್ಲೇಶ ಮತ್ತು ಶ್ವೇತಾ ವಿದ್ಯಾರ್ಥಿಗಳಿಗೆ ವಿಶಿಷ್ಟ ಮಾಹಿತಿಗಳನ್ನು ನೀಡಿದರು. ಆಯ್ದ 150 ಕಾಮರ್ಸ್‌ ಮಕ್ಕಳು ಭಾಗವಹಿಸಿದ್ದ ಸಭೆಯಲ್ಲಿ ಸೆಂಟ್ರಲ್ ಕಾಮರ್ಸ್ ಕಾಲೇಜಿನ ಸಂಸ್ಥಾಪಕ ಮಹೇಶ್ ಹಾಗೂ ಪ್ರಾಚಾರ್ಯ ಶ್ರೀ ಪಡೇಸೂರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಪಟ್ಟಿ ಪರಿಷ್ಕರಣೆಗೆ ಸಹಕರಿಸಿ: ಡಾ.ಸಿದ್ದರಾಮಯ್ಯ
ಕ್ಷೇತ್ರದ ಅಭಿವೃದ್ಧಿಯೇ ನನ್ನ ಉದ್ದೇಶ ಎಂದ ಶಾಸಕ ಸಿಮೆಂಟ್ ಮಂಜು