ಕನ್ನಡಪ್ರಭ ವಾರ್ತೆ ಕುಮಟಾ
ಪ್ರಾಚಾರ್ಯೆ ವಿಜಯಾ ಡಿ. ನಾಯ್ಕ ವಿದ್ಯಾರ್ಥಿಗಳಿಂದ ವಾರ್ಷಿಕವಾಗಿ ಸಂಗ್ರಹಿಸುವ ಶುಲ್ಕದ ವೆಚ್ಚದ ಬಗ್ಗೆ ಮಾಹಿತಿ ಕೇಳಿದರೆ, ನಿಂದಿಸುತ್ತಾರೆ. ಡಿಬಾರ್ ಮಾಡುತ್ತೇನೆ, ಟಿಸಿ ಕೊಟ್ಟು ಕಳುಹಿಸುತ್ತೇನೆ, ಪೊಲೀಸರನ್ನು ಕರೆಯಿಸಿ ದೂರು ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿ, ಇಂಥ ಪ್ರಾಚಾರ್ಯರು ನಮಗೆ ಬೇಡ, ಅವರನ್ನು ಅಮಾನತು ಅಥವಾ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಕಾಲೇಜು ಎದುರು ಪ್ರತಿಭಟಿಸಿದರು. ಪ್ರಾಚಾರ್ಯರ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಗೆ ಎಬಿವಿಪಿ ಬೆಂಬಲ ನೀಡಿದ್ದು, ಜೆಡಿಎಸ್‌ನ ಸೂರಜ ನಾಯ್ಕ, ಕಾಂಗ್ರೆಸ್‌ನ ಭಾಸ್ಕರ ಪಟಗಾರ ಆಗಮಿಸಿ ವಿದ್ಯಾರ್ಥಿಗಳ ಪರವಾಗಿ ನಿಂತರು. ಸ್ಥಳಕ್ಕೆ ಪೊಲೀಸರು ಹಾಗೂ ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಆಗಮಿಸಿದರು. ಪಟ್ಟು ಸಡಿಲಿಸಿದ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ದಿನಕರ ಶೆಟ್ಟಿ ಕರೆಸುವಂತೆ ಆಗ್ರಹಿಸಿದರು.ಈ ನಡುವೆ ಜೆಡಿಎಸ್‌ನ ಸೂರಜ ನಾಯ್ಕ ಮಾತನಾಡಿ, ಎಲ್ಲರೂ ಪರಸ್ಪರ ಸೌಹಾರ್ದಯುತವಾಗಿ ಉತ್ತಮ ಬಾಂಧವ್ಯದಿಂದ ಇರುವಂತೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳ ಮೇಲೆ ನೀಡಿರುವ ದೂರನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು. ತಾನೇನೂ ತಪ್ಪು ಮಾಡಿಲ್ಲ, ತನ್ನ ಮೇಲೆ ಸುಳ್ಳು ಅಟ್ರಾಸಿಟಿ ಹಾಕಿದ್ದಾರೆಂದು ಎಲ್ಲರೆದುರು ಪ್ರಾಚಾರ್ಯೆ ವಿಜಯಾ ಡಿ.ನಾಯ್ಕ ಕಣ್ಣೀರು ಹಾಕಿದರು.