ಗಜೇಂದ್ರಗಡದಲ್ಲಿ ಮೂಲ ಸೌಕರ್ಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : Nov 20, 2025, 01:15 AM IST
ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ಮೋರಾರ್ಜಿ ದೇಸಾಯಿ ಮಾದರಿ ಶಾಲೆಯಲ್ಲಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಎಸ್ಎಫ್‌ಐ ಮುಖಂಡ ಚಂದ್ರು ರಾಠೋಡ ಮಾತನಾಡಿ, ಪರಿಕ್ಷೆ ದಿನಾಂಕ ನಿಗದಿಯಾದರೂ ೯ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಪುಸ್ತಕ ನೀಡಿಲ್ಲ ಎಂದರು.

ಗಜೇಂದ್ರಗಡ: ಮೂಲ ಸೌಕರ್ಯಗಳಿಗೆ ಆಗ್ರಹಿಸಿ ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ಎಸ್ಎಫ್‌ಐ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಎಸ್ಎಫ್‌ಐ ಮುಖಂಡ ಚಂದ್ರು ರಾಠೋಡ ಮಾತನಾಡಿ, ಪರಿಕ್ಷೆ ದಿನಾಂಕ ನಿಗದಿಯಾದರೂ ೯ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಪುಸ್ತಕ ನೀಡಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ನಿರ್ವಹಣೆ ಕೊರತೆ, ಸೋಪ್ ಕಿಟ್ ಹಾಗೂ ಸಮವಸ್ತ್ರ, ಕಾಟಾ ಬೇಡ್ ಒದಗಿಸಿಲ್ಲ. ಅಲ್ಲದೆ ಕಟ್ಟಡವು ಶಿಥಿಲಗೊಂಡಿದೆ. ವಿದ್ಯುತ್ ದುರಸ್ತಿ ತಲುಪಿದೆ. ವಿದ್ಯಾರ್ಥಿಗಳಿಗೆ ಕಟಿಂಗ್ ಸರಿಯಾಗಿ ಮಾಡಿಸುತ್ತಿಲ್ಲ ಎಂದು ಆರೋಪಿಸಿದರು.

ವಸತಿನಿಲಯದ ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಹಾಗೂ ಅಧಿಕಾರಿಗಳ ಜವಾಬ್ದಾರಿ. ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಕ್ರೈಸ್ ಸಂಸ್ಥೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಸಂಬಂಧಪಟ್ಟ ಜಿಲ್ಲಾ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಶಾಲೆಯ ಮೂಖ್ಯೊಪಾಧ್ಯಾಯರು ಈವರೆಗೂ ವಿದ್ಯಾರ್ಥಿಗಳಿಗೆ ಅವರ ಹಕ್ಕುಗಳನ್ನು ಸೌಲಭ್ಯಗಳನ್ನು ಕಲ್ಪಿಸದೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದು, ಸಂಬಂಧಪಟ್ಟರು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹೋರಾಟ ಸ್ಥಳಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ತುಮ್ಮರಗುದ್ದಿ ಅವರು ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆ ಸರ್ಕಾರ ಮಟ್ಟದಲ್ಲಿ ಎಂದಾಗ ಆಕ್ರೋಶಗೊಂಡ ಪ್ರತಿಭಟನಾಕಾರರು, ಇಲಾಖೆಯ ಜಂಟಿ ನಿರ್ದೇಶಕರು ಹೋರಾಟ ಸ್ಥಳಕ್ಕೆ ಬರಬೇಕು ಎಂದು ಹೋರಾಟ ಮುಂದುವರಿಸಿದರು. ಕೆಲ ಸಮಯದ ಬಳಿಕ ವಾರ್ಡನ್ ಹಾಗೂ ಮುಖ್ಯೋಪಾಧ್ಯಾಯರು ಕೆಲ ಸಮಸ್ಯೆಗಳ ಪರಿಹಾರ ಒದಗಿಸಿದರು. ವಿದ್ಯಾರ್ಥಿಗಳ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ೧೫ ದಿನದ ಗಡುವು ಪಡೆದಿದ್ದರಿಂದ ಹೋರಾಟ ಹಿಂಪಡೆದರು.ಸಂಘಟನೆಯ ಗಣೇಶ ರಾಠೋಡ, ಅನಿಲ್ ಆರ್. ಗುರು, ಈಶ್ವರ, ಅರುಣ, ವಿದ್ಯಾರ್ಥಿಗಳಾದ ಭೂಮಿಕಾ ಬನ್ನಿಗಿಡದ, ಭಾಗ್ಯ ಗೂಗಲೋತ್ತರ, ಶ್ವೇತಾ, ಜ್ಯೋತಿ, ಅಶ್ವಿನಿ, ಯಶೋದಾ, ಕವಿತಾ, ವೀಣಾ, ಮೇಘಾ, ರಾಕೇಶ್, ಫಕೀರಗೌಡ, ರಾಜೇಶ, ರವಿ, ಪ್ರವೀಣ್, ಕೃಷ್ಣ, ಹರೀಶ್, ಮುಂಜುನಾಥ, ಸಂದೀಪ್, ಕಾರ್ತಿಕ, ಸಂತೋಷ್ ಇತರರು ಇದ್ದರು.

PREV

Recommended Stories

ಪರಿಶುದ್ಧ ಬದುಕಿನಿಂದ ಜೀವನ ಉಜ್ವಲ: ಡಾ. ವೀರಸೋಮೇಶ್ವರ ಸ್ವಾಮೀಜಿ
ಜಿಲ್ಲೆಯಲ್ಲಿ ಶೇ.100ರಷ್ಟು ಕನ್ನಡ ಅನುಷ್ಠಾನವಾಗಲಿ: ಸಾಜೀದ್ ಮುಲ್ಲಾ.