ಹೊನ್ನಾವರ: ವಿದ್ಯಾರ್ಥಿಗಳು ಒಳ್ಳೆಯ ನಡತೆ, ಗುರುಗಳ ಮಾರ್ಗದರ್ಶನ, ಸಜ್ಜನರ ಸಂಘ, ಉತ್ತಮ ಕನಸನ್ನು ಕಾಣಬೇಕು. ಇದು ನಮ್ಮ ಜೀವನದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಎಚ್.ಆರ್. ನಾಯ್ಕ ಹೇಳಿದರು.
ವಿದ್ಯಾರ್ಥಿಗಳು ಯಾವಾಗಲೂ ಆಶಾವಾದಿಗಳಾಗಿರಬೇಕು. ಭವ್ಯ ಭಾರತದ ಉತ್ತಮ ಸಮಾಜವನ್ನು ನಿರ್ಮಿಸಲು ಸಹಕಾರಿಯಾಗುತ್ತದೆ. ಆಶಾವಾದವೇ ಯಶಸ್ಸಿಗೆ ಮೂಲ ಮಂತ್ರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುರೇಶ್ ನಾಯ್ಕ ಮಾತನಾಡಿ, ಆತ್ಮವಿಶ್ವಾಸ ಹಾಗೂ ಪರಿಶ್ರಮ, ನಿರಂತರ ಅಧ್ಯಯನ ಯಶಸ್ವಿ ವಿದ್ಯಾರ್ಥಿಯ ಲಕ್ಷಣವಾಗಬೇಕು ಎಂದರು.ಆಶಯ ನುಡಿಗಳನ್ನಾಡಿದ ಆನಂದ ನಾಯ್ಕ ವಿದ್ಯಾರ್ಥಿಗಳು ಅಧ್ಯಯನವನ್ನು ಯಾವತ್ತು ಬಿಡಬೇಡಿ ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ, ಶರಾವತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಸಾಳೆಹಿತ್ತಲ್, ಕೊಕ್ಕೆಶ್ವರ ರಾಮ ಕ್ಷತ್ರಿಯ ಸೇವಾಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ ಶುಭಕೋರಿದರು. ಉಪನ್ಯಾಸಕ ಜಗದೀಶ್ ನಾಯ್ಕ , ರಾಜೇಶ್ ನಾಯ್ಕ ಮಂಕಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಸಂವಾದವನ್ನು ನಡೆಸಿದರು.ಅಣ್ಣಪ್ಪ ನಾಯ್ಕ ಸ್ವಾಗತಿಸಿದರು. ಉದಯ ನಾಯ್ಕ ಮತ್ತು ರೂಪಾ ನಾಯ್ಕ ನಿರ್ವಹಿಸಿದರು.
ಹೊನ್ನಾವರ ತಾಲೂಕಿನ ಮಂಕಿಯ ಕೊಕ್ಕೆಶ್ವರ ಸಭಾಭವನದಲ್ಲಿ ನಡೆದ ಆಶಾಕಿರಣ ಪ್ರೇರಣ ಶಿಬಿರವನ್ನು ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಎಚ್.ಆರ್. ನಾಯ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುರೇಶ್ ನಾಯ್ಕ ಮತ್ತಿತರರಿದ್ದರು.