- ಶೃಂಗೇರಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಡಶಾಲಾ ವಿಭಾಗದಲ್ಲಿ ಕನ್ನಡ ಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಅಭಿಮತ.
ಇಂದಿನ ಮುಂದುವರಿದ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತೀವ್ರ ಪೈಪೋಟಿ, ಸ್ಪರ್ಧೆ ಸವಾಲು ಗಳನ್ನು ಎದುರಿಸಿ ಬದುಕುವ ಕಲೆ ಗೊತ್ತಿರಬೇಕು. ಆದ್ದರಿಂದ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಗಳಿಸುವ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ದಸಸಂ ಜಿಲ್ಲಾ ಸಮೀತಿ ಸದಸ್ಯ ಕೆ.ಎಂ.ರಾಮಣ್ಣ ಕರುವಾನೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ವಿದ್ಯಾರಣ್ಯಪುರ ಪಂಚಾಯಿತಿ ವಿದ್ಯಾನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡಪ್ರಭ ಯುವ ಆವೃತಿ ಬಿಡುಗಡೆಗೊಳಿಸಿ ಮಾತ ನಾಡಿದರು. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳು ಪ್ರಭಾವಶಾಲಿ ಮಾದ್ಯಮ. ಇದು ಜನರು ಮತ್ತು ಸರ್ಕಾರದ ನಡುವಿನ ಸಂಪರ್ಕ ಸೇತುವೆ. ಜೊತೆಗೆ ವಿರೋಧ ಪಕ್ಷವಾಗಿಯೂ ಕಾರ್ಯ ನಿರ್ವಹಿಸುತ್ತದೆ.ಸರ್ಕಾರದ ತಪ್ಪು, ಲೋಪದೋಷಗಳನ್ನು ಎತ್ತಿಹಿಡಿದು ಎಚ್ಚರಿಸುವ ಕೆಲಸ ಮಾಡುತ್ತದೆ. ಜನರ ಹಕ್ಕಿನ ಧ್ವನಿ ಯಾಗಿದೆ. ರಾಜಕೀಯ,ಸಾಮಾಜಿಕ,ಆರ್ಥಿಕ,ಕೃಷಿ ಆರೋಗ್ಯ,ಕ್ರೀಡೆ ಸೇರಿದಂತೆ ಹಲವಾರು ವಿಷಯ ಓದುಗರಿಗೆ ನೀಡುವ ಕೆಲಸ ಪತ್ರಿಕೆಗಳು ಮಾಡುತ್ತಿವೆ. ಇಂದಿನ ಸಾಮಾಜಿಕ ಜಾಲತಾಣಗಳ ನಡುವೆಯೂ ಮುದ್ರಣ ಮಾದ್ಯಮ ತೀವ್ರತರ ಸ್ಪರ್ಧೆ ಎದುರಿಸುತ್ತಿದ್ದರೂ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡಿದೆ.
ಶಾಲೆ ಉಪಪ್ರಾಂಶುಪಾಲ ಈಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಿಕೆಗಳು ಸುದ್ದಿ ನೀಡುವ ಜೊತೆಗೆ ಬದುಕಿಗೆ ಪೂರಕವಾದ ಅನೇಕ ವಿಷಯ, ಪ್ರಚಲಿತ ವಿದ್ಯಮಾನ ತಿಳಿಸುತ್ತದೆ. ವಿದ್ಯಾರ್ಥಿಗಳು ಪತ್ರಿಕೆ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು.ಶಾಲೆಗಳಲ್ಲಿ ಗ್ರಂಥಾಲಯಗಳಲ್ಲಿ ಸಿಗುವ ಪತ್ರಿಕೆ ಓದಿ ಸದುಪಯೋಗಪಡಿಸಿಕೊಳ್ಳಬೇಕು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಅಂಬಿಕಾ, ನಾಗರತ್ನ,ವಿನೋದ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ವೆಂಕಟೇಶ ಮೂರ್ತಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಶೃಂಗೇರಿ ವಿದ್ಯಾರಣ್ಯಪುರ ಪಂಚಾಯಿತಿ ವಿದ್ಯಾನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಡಶಾಲಾ ವಿಭಾಗದಲ್ಲಿ ಕನ್ನಡ ಪ್ರಭ ಯುವ ಆವೃತ್ತಿಯನ್ನು ಕೆ.ಎಂ.ರಾಮಣ್ಣ ಬಿಡುಗಡೆಗೊಳಿಸಿದರು. ಉಪಪ್ರಾಂಶುಪಾಲ ಈಶ್ವರ್,ಪತ್ರಕರ್ತ ನೆಮ್ಮಾರ್ ಅಬೂಬಕರ್ ಮತ್ತಿತರರು ಇದ್ದರು.