ಕನ್ನಡಪ್ರಭ ವಾರ್ತೆ ತರೀಕೆರೆ
ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನಕ್ಕಾಗಿ ಪ್ರತಿನಿತ್ಯ ವೃತ್ತ ಪತ್ರಿಕೆಗಳನ್ನು ತಪ್ಪದೇ ಓದಬೇಕು, ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ ಎಂದರು.
ಪಿಯುಸಿ ನಂತರ ಅಧ್ಯಯನಕ್ಕೆ ಇರುವ ಪದವಿಗಳ ಬಗ್ಗೆ ಸಲಹೆ ನೀಡಿ, ಉನ್ನತ ಹುದ್ಗೆಗಳಿಗೆ ಆಳವಾದ ಅಧ್ಯಯನ ತುಂಬಾ ಅಗತ್ಯ, ಹಳೇ ಪಠ್ಯಪುಸ್ತಕಗಳು ಮತ್ತು ಪ್ರಶ್ನಪತ್ರಿಕೆಗಳನ್ನು ಕ್ರೋಡಿಕರಿಸಿ, ಆಗಾಗ್ಗೆ ಸ್ವಯಂ ಮೌಲ್ಯ ಮಾಪನ ಮಾಡಿಕೊಳ್ಳಬೇಕು, ಸ್ನೇಹಿತರೊಡನೆ ಅಧ್ಯಯನದ ವಿವಿಧ ವಿಚಾರಗಳನ್ನು ಕುರಿತು ಪರಸ್ಪರ ಚರ್ಚೆ ನೆಡೆಸಬೇಕು, ಕ್ವಿಜ್ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು, 6 ರಿಂದ 10ನೇ ತರಗತಿ ವರೆಗಿನ ಪಠ್ಯ ಪುಸ್ತಕಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು, ಇದರಿಂದ ಹೆಚ್ಚಿನ ವಿಚಾರಗಳನ್ನು ತಿಳಿಯಲು ಮತ್ತು ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.ತರಗತಿಗಳಲ್ಲಿನ ನೋಟ್ಸ್ ಗಳಿಗೆ ಸೀಮಿತವಾಗದೆ ಪಠ್ಯ ಪುಸ್ತಕಗಳನ್ನು ಪದೇ ಪದೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಅಭಿನಂದಿಸಲಾಯಿತು. ನಂತರ ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ವಿದ್ಯಾರ್ಥಿಗಳೊಂದಿಗೆ ಭೋಜನ ಸವಿದರು.