- ಜಿಮ್‌ಗೆ ನುಗ್ಗಿ ನೈತಿಕ ಪೊಲೀಸ್‌ಗಿರಿ ಮಾಡಿದ ಸಂಘಟನೆಗಳ ಮುಖಂಡರು: ಆರೋಪ - - -
ಜಿಮ್ ಜಿಹಾದ್ ಆರೋಪದಲ್ಲಿ ಸರಸ್ವತಿ ನಗರದ ಪವರ್ ಫಿಟ್ನೆಸ್ ಜಿಮ್‌ಗೆ ನುಗ್ಗಿ ನೈತಿಕ ಪೊಲೀಸ್‌ಗಿರಿ ಮಾಡಿದ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುಭಾನ್ ಖಾನ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಕಾನೂನು ಕೈಗೆತ್ತಿಕೊಂಡು, ಜನರು ನೆಮ್ಮದಿಯಿಂದಿರಲು ಬಿಡುತ್ತಿಲ್ಲ. ಜಿಲ್ಲಾ ಕೇಂದ್ರದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದರು.ಹಿಂದೂ ಸಂಘಟನೆಗಳ ಮುಖಂಡರಾದ ಮಣಿಕಂಠ, ಸತೀಶ ಪೂಜಾರಿ ಇತರರು ಜಿಮ್ ಮುಂದೆ ಗಲಾಟೆ ಮಾಡಿ, ಅಲ್ಲಿನ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ. ಜಿಮ್‌ನವರಿಂದ ಯಾವುದೇ ದುಷ್ಕೃತ್ಯ ನಡೆದಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಬೇಕಿತ್ತು. ಅದನ್ನು ಬಿಟ್ಟು, ಜಿಮ್‌ಗೆ ನುಗ್ಗಿ ಗಲಾಟೆ ಮಾಡಿ, ಬೋರ್ಡ್‌ಗಳನ್ನು ಕಿತ್ತು ಹಾಕಿ, ನಷ್ಟಗೊಳಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಐಷಾರಾಮಿ ಮನೆ, ದುಬಾರಿ ಕಾರನ್ನು ಹೊಂದಿರುವ ಇಂತಹ ಸಂಘಟನೆ ಮುಖಂಡರ ಆದಾಯದ ಮೂಲ ಏನು? ಆದಾಯ ತೆರಿಗೆ ಇಲಾಖೆ ಇಂತಹವರ ಬಗ್ಗೆ ಏನು ಕ್ರಮ ಕೈಗೊಂಡಿದೆ? ಆದಾಯ ತೆರಿಗೆ ಇಲಾಖೆಗೂ ಈ ಬಗ್ಗೆ ಮಹಾಸಭಾ ದೂರು ದಾಖಲಿಸಲಿದೆ. ಜಿಮ್ ಟ್ರೈನರ್ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೆ ಅಂತಹವರ ವಿರುದ್ಧ ದೂರು ನೀಡಿ, ಜೈಲಿಗೆ ಕಳಿಸಲಿ. ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಸುಭಾನ್ ಖಾನ್ ಹೇಳಿದರು.
- - -
- ದಾವಣಗೆರೆ ಪವರ್ ಫಿಟ್ನೆಸ್ ಜಿಮ್‌ನ ಇಸ್ಮಾಯಿಲ್ ತಾಯಿ ಆರೋಪ ದಾವಣಗೆರೆ: ತಮ್ಮ ಮಗ ಇಸ್ಮಾಯಿಲ್‌ಗೆ ಜೀವನಕ್ಕೆಂದು ಸಾಲ ಮಾಡಿ, ಪವರ್ ಫಿಟ್ನೆಸ್ ಜಿಮ್ ಮಾಡಿಕೊಟ್ಟಿದ್ದು, ಆತನಿಗೆ 12 ಹುಡುಗಿಯರ ಜೊತೆಗೆ ಅಫೇರ್ ಇಲ್ಲ. ಒಬ್ಬಳ ಜೊತೆಗೆ ಮಾತ್ರ ಅಕ್ರಮ ಸಂಬಂಧ ಇತ್ತು ಎಂದು ಸರಸ್ವತಿ ಬಡಾವಣೆಯ ಪವರ್ ಫಿಟ್ನೆಸ್ ಜಿಮ್ ಮಾಲೀಕ ಮತ್ತು ಟ್ರೈನರ್ ಇಸ್ಮಾಯಿಲ್‌ನ ತಾಯಿ ರಜಿಯಾ ಬೇಗಂ ಹೇಳಿದ್ದಾರೆ.
ಘಟನೆ ಕುರಿತಂತೆ ತಮ್ಮ ಮಗ ಇಸ್ಮಾಯಿಲ್, ಹನಿಟ್ರ್ಯಾಪ್ ಮಾಡಿದ ಆ ಮಹಿಳೆ ಸೇರಿದಂತೆ ಎಲ್ಲರನ್ನೂ ಪೊಲೀಸ್ ಇಲಾಖೆ ತನಿಖೆಗೆ ಒಳಪಡಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. 3 ವರ್ಷದ ಹಿಂದೆ ಸಾಲ ಮಾಡಿ, ಇಸ್ಮಾಯಿಲ್ ಗೆ ಸ್ವಂತ ಜಿಮ್ ಮಾಡಿಕೊಟ್ಟಿದ್ದೆವು. ಅದಕ್ಕೂ ಮುನ್ನ ಆತ ಆರೆಂಜ್ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಬಿಟ್ಟ ನಂತರ ಇಲ್ಲಿ ಸ್ವಂತದ ಜಿಮ್ ಮಾಡಿದ್ದ ಎಂದು ಅವರು ತಿಳಿಸಿದರು.
- - -