ಹುಣಸಗಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ

KannadaprabhaNewsNetwork |  
Published : Dec 18, 2023, 02:00 AM IST
ಹುಣಸಗಿ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಲು ಆಗಮಿಸಿದ ಅಭ್ಯರ್ಥಿಗಳು. | Kannada Prabha

ಸಾರಾಂಶ

ಹುಣಸಗಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ಬಿಜೆಪಿಯಿಂದ 20, ಕಾಂಗ್ರೆಸ್‌ನಿಂದ 18, ಪಕ್ಷೇತರ 12 ಜನ, ಜೆಡಿಎಸ್‌ನ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ದೇ ಡಿ. 27ರಂದು ನಡೆಯುವ ಹುಣಸಗಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ಒಟ್ಟು 51 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಣಸಗಿ

ಇದೇ ಡಿ. 27ರಂದು ನಡೆಯುವ ಹುಣಸಗಿ ಪಟ್ಟಣ ಪಂಚಾಯ್ತಿ ಚುನಾವಣೆಗೆ ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ನಾಮಪತ್ರ ಸ್ವೀಕರಿಸುವ ಕಾರ್ಯ ಪ್ರಾರಂಭಗೊಂಡಿದ್ದು, ಯಾವುದೇ ಗದ್ದಲವಿಲ್ಲದೆ ಪೊಲೀಸ್ ಭದ್ರತೆಯೊಂದಿಗೆ ತಮ್ಮ ಪಕ್ಷದ ಮುಖಂಡರೊಂದಿಗೆ ಚುನಾವಣಾ ಅಧಿಕಾರಿಗಳಿಗೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಲಾಯಿತು.

ಈ ವೇಳೆ ಕಾಂಗ್ರೆಸ್ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಕೆಪಿಸಿಸಿ ರಾಜ್ಯ ಸದಸ್ಯ ಸಿದ್ದಣ್ಣ ಮಲಗಲದಿನ್ನಿ ನೇತೃತ್ವದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ, ಇತ್ತ ಬಿಜೆಪಿಯ ಮುಖಂಡರಾದ ವಿರೇಶ ಚಿಂಚೋಳಿ, ಸಂಗಣ್ಣ ವೈಲಿ, ಬಸಣ್ಣ ದೇಸಾಯಿ, ಮೇಲಪ್ಪ ಗುಳಗಿ, ಬಸಣ್ಣ ಬಾಲಗೌಡ್ರು, ಸೋಮಶೇಖರ ಸ್ಥಾವರಮಠ, ಮಹೇಶ ಸ್ಥಾವರಮಠ, ರವಿ ಪುರಾಣಿಕ ಮಠ ಸೇರಿ ಇನ್ನಿತರ ನೇತೃತ್ವದಲ್ಲಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.

16 ವಾರ್ಡ್‌ಗಳ ಪೈಕಿ ಕಾಂಗ್ರೆಸ್ ಪಕ್ಷದಿಂದ 18 ಜನ ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯಿಂದ 20 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು 12 ಅಭ್ಯರ್ಥಿಗಳು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್ ಪಕ್ಷದಿಂದ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದೆ.

ನಾಮಪತ್ರ ಸಲ್ಲಿಸಿದ ವಿವರ: 1ನೇ ವಾರ್ಡ್ ಜನತಾ ಕಾಲೋನಿ, ಪ.ಜಾ. ಮಹಿಳೆ- ಲಕ್ಷ್ಮೀಬಾಯಿ ಮರೆಪ್ಪ (ಬಿಜೆಪಿ), ಶಾರದ ಪರಮಣ್ಣ (ಬಿಜೆಪಿ), ಭೀಮವ್ವ ತಿಪ್ಪಣ್ಣ (ಕಾಂಗ್ರೆಸ್), ರೇಣುಕಾ ಮಾಳಿಗಪ್ಪ (ಪಕ್ಷೇತರ), ಬಸಮ್ಮ ಸುರೇಶ (ಪಕ್ಷೇತರ), 2ನೇ ವಾರ್ಡ್ ಹಿರೇಮಠ ವಾರ್ಡ್, ಹಿಂದುಳಿದ ವರ್ಗ ಬಿ- ಶಾಂತಪ್ಪ ನಂದಪ್ಪ (ಕಾಂಗ್ರೆಸ್), ಚಂದ್ರಶೇಖರ ಬಸಪ್ಪ (ಬಿಜೆಪಿ), 3ನೇ ವಾರ್ಡ್ (ದೇಸಾಯಿ ವಾರ್ಡ್), ಸಾಮಾನ್ಯ- ಸಂಗನಬಸಪ್ಪ ನಾಗಪ್ಪ(ಕಾಂಗ್ರೆಸ್), ರಾಜಶೇಖರ ಬಸವರಾಜ(ಬಿಜೆಪಿ), 4ನೇ ವಾರ್ಡ್ (ನೀಲಕಂಠೇಶ್ವರ ವಾರ್ಡ್), ಸಾಮಾನ್ಯ- ಶಿವರುದ್ರಪ್ಪ ಬಸಣ್ಣ(ಬಿಜೆಪಿ), ಸದ್ದಾರೂಢ ಶಿವಪ್ಪ(ಪಕ್ಷೇತರ), ಸಿದ್ದಪ್ಪ ಚಿನ್ನಪ್ಪ(ಕಾಂಗ್ರೆಸ್), ಬಸಯ್ಯಸ್ವಾಮಿ ರುದ್ರಯ್ಯಸ್ವಾಮಿ(ಪಕ್ಷೇತರ), 5ನೇ ವಾರ್ಡ್ (ವಾಲ್ಮೀಕಿ ನಗರ), ಪರಿಶಿಷ್ಟ ಪಂಗಡ-ಮಲ್ಲಣ್ಣ ಸಾಯಿಬಣ್ಣ(ಬಿಜೆಪಿ), ಚಂದ್ರಾಮಪ್ಪ ಬಸವಂತಪ್ಪ(ಕಾಂಗ್ರೆಸ್), 6ನೇ ವಾರ್ಡ್ (ಹಂಚಲಿ ವಾರ್ಡ್), ಹಿಂದುಳಿದ ವರ್ಗ ಎ-ರಸೂಲಸಾಬ ಉಮರಸಾಬ(ಪಕ್ಷೇತರ), ಬಸವರಾಜ ಗಂಗಪ್ಪ(ಬಿಜೆಪಿ), ಕಾಶೀಂಸಾಬ ಬಾವಸ(ಕಾಂಗ್ರೆಸ್), ರೀಯಾನ್ ಬೇಗಂ ಕಾಶೀಮಸಾ(ಕಾಂಗ್ರೆಸ್), 7ನೇ ವಾರ್ಡ್ (ಪಡಶೆಟ್ಟಿ ಕಾಲೋನಿ), ಸಾಮಾನ್ಯ ಮಹಿಳೆ-ನಿರ್ಮಲ ರುದ್ರೇಶ(ಪಕ್ಷೇತರ), ಶರಣಮ್ಮ ಬಸವರಾಜ(ಕಾಂಗ್ರೆಸ್), ಅಕ್ಷತಾ ದೇಸಾಯಿಗುರು ಬಸವಪ್ರಭು(ಬಿಜೆಪಿ), ವೀಣಾ ಭೀಮರಾಯ(ಪಕ್ಷೇತರ), 8ನೇ ವಾರ್ಡ್ (ಕಣಗಲ್ ಬಾವಿ ಏರಿಯಾ), ಸಾಮಾನ್ಯ-ಲಕ್ಷ್ಮಣ ಯಂಕಪ್ಪ(ಬಿಜೆಪಿ), ಶರಣು ನಾಗಣ್ಣ(ಕಾಂಗ್ರೆಸ್), ವಿಜಯಕುಮಾರ ನಾಗಣ್ಣ(ಕಾಂಗ್ರೆಸ್), 9ನೇ ವಾರ್ಡ್ (ವಿದ್ಯಾನಗರ ಕಾಲೋನಿ), ಸಾಮಾನ್ಯ-ಪ್ರಭುಗೌಡ ಬಸವರಾಜ(ಬಿಜೆಪಿ), ಪರಮಣ್ಣ ಬಸವರಾಜ(ಬಿಜೆಪಿ), ಮಲ್ಲಣ್ಣ ಬಸಪ್ಪ(ಕಾಂಗ್ರೆಸ್), ಬಾಷಮಿಯಾ ಮುರ್ತುಜ(ಪಕ್ಷೇತರ), 10 ನೇ ವಾರ್ಡ್ (ಕಾಳಿಕಾದೇವಿ ದೇವಸ್ಥಾನ), ಹಿಂದುಳಿದ ವರ್ಗ ಎ.ಮಹಿಳೆ ಅಬೇದ ಬೇಗಂ ಮಹ್ಮದ ರಫೀಕ್(ಕಾಂಗ್ರೆಸ್), ಮಹಿಬೂಬಿ ದವಲಸಾಬ(ಬಿಜೆಪಿ), ಗೀತಾ ಶರಣಪ್ಪ(ಬಿಜೆಪಿ), 11ನೇ ವಾರ್ಡ್, ಹಿಂದುಳಿದ ವರ್ಗ ಎ-ಕಾಸಿಂಸಾಬ ಮಹಿಬೂಬಸಾಬ(ಕಾಂಗ್ರೆಸ್), ಶಿವನಗೌಡ ಸಂಗನಗೌಡ(ಬಿಜೆಪಿ), 12ನೇ ಅಮರೇಶ್ವರ ನಗರ, ಪರಿಶಿಷ್ಟ ಜಾತಿ- ರಾಘವೇಂದ್ರ ಮಲ್ಲಪ್ಪ(ಪಕ್ಷೇತರ), ಮಹಾಂತೇಶ ಬಾಲಪ್ಪ(ಬಿಜೆಪಿ), ಸಿದ್ದಣ್ಣ ರವತಪ್ಪ(ಬಿಜೆಪಿ), ಮರಲಿಂಗಪ್ಪ ಪಿಡಪ್ಪ(ಕಾಂಗ್ರೆಸ್), ವಿಠಲ್ ಜಗನನಾಯ್ಕ(ಪಕ್ಷೇತರ), ಸಿದ್ದಪ್ಪ ಯಮನಪ್ಪ(ಪಕ್ಷೇತರ), 13ನೇ ವಾರ್ಡ್, ಸಾಮಾನ್ಯ ಮಹಿಳೆ-ನಿಖೀತಾ ಗೂಳಪ್ಪ(ಕಾಂಗ್ರೆಸ್), ಸವಿತಾ ಮಲ್ಲಿಕಾರ್ಜುನ(ಬಿಜೆಪಿ), ನಸಿಮಾಬೇಗಂ (ಪಕ್ಷೇತರ), 14ನೇ ವಾರ್ಡ್ (ಯುಕೆಪಿ ಕ್ಯಾಂಪ್), ಸಾಮಾನ್ಯ ಮಹಿಳೆ- ಶಶಿಕಲಾ ನರಸಪ್ಪಗೌಡ(ಜೆಡಿಎಸ್), ಜಯಶ್ರೀ ರಮೇಶ(ಕಾಂಗ್ರೆಸ್), ಬಂಗಾರೆಮ್ಮ ಬಾಣಸಾಹೇಬ(ಬಿಜೆಪಿ), 15ನೇ ವಾರ್ಡ್, ಸಾಮಾನ್ಯ ಮಹಿಳೆ- ಅನೀತಾ ಬಸವರಾಜ(ಬಿಜೆಪಿ), ಅನ್ನಮ್ಮ ಸಿದ್ದಣ್ಣ(ಕಾಂಗ್ರೆಸ್), 16ನೇ ವಾರ್ಡ್ (ಭಾಗ್ಯನಗರ), ಪರಿಶಿಷ್ಟ ಜಾತಿ- ತಿಪ್ಪಣ್ಣ ನಾಯ್ಕ ಹಣಮನಾಯ್ಕ(ಕಾಂಗ್ರೆಸ್), ವಿರೇಶ ರಾಠೋಡ ಬಂಗಾರಿನಾಯ್ಕ(ಪಕ್ಷೇತರ), ಗುರುನಾಥ ಲಕ್ಷ್ಮಣನಾಯ್ಕ(ಬಿಜೆಪಿ). ಒಟ್ಟು 51 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ