ಸುಬ್ರಹ್ಮಣ್ಯ: ನಿರಂತರ ಮಳೆಗೆ ಸಂಪರ್ಕ ಕಡಿತ ಭೀತಿ

KannadaprabhaNewsNetwork |  
Published : Aug 02, 2026, 02:45 AM IST
 ಕುಮಾರಧಾರ ತಿರುಗಣೆಗುಂಡಿಯಲ್ಲಿ ಮಣ್ಣಿನ ಸವೆತ | Kannada Prabha

ಸಾರಾಂಶ

ಕುಕ್ಕೆ ಸುಬ್ರಹ್ಮಣ್ಯ ಪರಿಸರ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರೀ ಮಳೆಯಿಂದಾಗಿ ಕುಮಾರಧಾರ ನದಿ ಪ್ರವಾಹದಿಂದ ತುಂಬಿ ಹರಿಯುತ್ತಿದೆ.ನದಿಯ ಪ್ರವಾಹ ಮತ್ತು ನಿರಂತರ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಬದಿಗೆ ಹಾಕಿದ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಮಣ್ಣಿನ ಸವೆತ ಉಂಟಾಗಿದೆ.

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರೀ ಮಳೆಯಿಂದಾಗಿ ಕುಮಾರಧಾರ ನದಿ ಪ್ರವಾಹದಿಂದ ತುಂಬಿ ಹರಿಯುತ್ತಿದೆ.ನದಿಯ ಪ್ರವಾಹ ಮತ್ತು ನಿರಂತರ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಬದಿಗೆ ಹಾಕಿದ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಮಣ್ಣಿನ ಸವೆತ ಉಂಟಾಗಿದೆ.ಇದೇ ರೀತಿ ಮಳೆ ಮುಂದುವರೆದರೆ ರಸ್ತೆ ಕೊಚ್ಚಿ ಹೋಗಿ ಸಂಪರ್ಕ ಕಡಿತ ಭೀತಿಯನ್ನು ಸಾರ್ವಜನಿಕರು ಹೊರಹಾಕಿದ್ದಾರೆ.

ಕುಮಾರಧಾರ ನದಿಯ ಉಪನದಿ ದರ್ಪಣತೀರ್ಥಕ್ಕೆ ನೂತನ ಸೇತುವೆ ನಿರ್ಮಾಣವಾಗಿದೆ.ಈ ಹಿಂದೆ ಸೇತುವೆಯಿಂದ ಮುಂದಕ್ಕೆ ನದಿ ನೀರು ಆವರಿಸಿ ಸಂಚಾರ ವ್ಯತ್ಯಯವಾಗುತ್ತಿದ್ದ ಕಾರಣ ರಸ್ತೆಯನ್ನು ಮಣ್ಣುಹಾಕಿ ಎತ್ತರೀಕರಿಸಲಾಗಿದೆ.ಇದರಿಂದಾಗಿ ಈ ಹಿಂದೆ ಇದ್ದ ನೀರು ಆವರಿಸುವ ಸಮಸ್ಯೆ ನಿವಾರಣೆಯಾಗಿದೆ.ಆದರೆ ಇದೀಗ ರಸ್ತೆ ಎತ್ತರೀಕರಿಸಲು ಹಾಕಿದ್ದ ಮಣ್ಣು ನದಿಯಲ್ಲಿನ ಭಾರೀ ಪ್ರವಾಹಕ್ಕೆ ತಿರುಗಣೆಗುಂಡಿ ಎಂಬಲ್ಲಿ ನೀರು ಪಾಲಾಗುತ್ತಿದೆ.ನದಿ ನೀರಿಗೆ ರಸ್ತೆಯ ಅಂಚಿಗೆ ಹಾಕಿದ ಮಣ್ಣು ನೀರಿನಲ್ಲಿ ಭಾ ಗಶ ಕೊಚ್ಚಿಹೋಗಿ ರಸ್ತೆಯ ಬದಿ ಮಣ್ಣಿನ ಸವೆತ ಉಂಟಾಗಿದೆ.ಆದುದರಿಂದ ಇದೇ ರೀತಿ ಮಳೆ ಮುಂದುವರೆದರೆ ರಸ್ತೆ ಕೊಚ್ಚಿ ಹೋಗುವ ಅಪಾಯವಿದೆ.ಆದುದರಿಂದ ಮುಂದೆ ಇಲ್ಲಿ ಶಾಶ್ವತ ತಡೆಗೋಡೆ ಕಟ್ಟಿ ಮಣ್ಣು ಸವಕಳಿಯಾಗದಂತೆ ತಡೆಯಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.

ಕಳೆದ ಕೆಲವು ವರುಷಗಳಿಂದ ಮಳೆಗಾಲದ ಸಂಧರ್ಭ ಈ ಸಮಸ್ಯೆ ಎದುರಾಗುತ್ತಿದೆ. ಈ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇಲಾಖಾಧಿಕಾರಿಗಳು ಭರವಸೆ ಹರಿಯ ಬಿಟ್ಟು ತೆರಳಿದ್ದಾರೆ ಹೊರತು ತಡೆಗೋಡೆ ನಿರ್ಮಾಣದ ಕಾರ್ಯ ನಡೆದಿಲ್ಲ.ಹೆದ್ದಾರಿ ರಸ್ತೆಯನ್ನು ಎತ್ತರಕ್ಕೆರಿಸಿ ಸುಮಾರು ಅರ್ಧ ಕಿ. ಮೀ ರಸ್ತೆ ಜಾಲವೃತವಾಗಿ ಸಂಚಾರ ಸಮಸ್ಯೆಯಾಗುತ್ತಿದ್ದು ದನ್ನು ಬಗೆಹರಿಸಲಾಗಿದೆ. ಆದರೆ ಹೆದ್ದಾರಿಯ ತಿರುಗಣೆ ಗುಂಡಿ ಯಲ್ಲಿ ರಸ್ತೆ ಪಕ್ಕ ಹಾಕಿದ ಮಣ್ಣು ಸವೆತವಾಗಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದೆ. ಹೀಗಾದರೆ ಈ ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಡಿತ ಖಚಿತ.ಇದಕ್ಕೆ ಶಾಶ್ವತ ಪರಿಹಾರವಾಗಿ ತಡೆಗೋಡೆ ನಿರ್ಮಾಣ ಮಾಡಿ ಸಂಪರ್ಕ ಕಡಿತ ಭೀತಿಯನ್ನು ಮುಕ್ತ ಗೊಳಿಸಬೇಕಾಗಿ ಸಾರ್ವಜನಿಕರು ವಿನಂತಿ ಮಾಡುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಷ್ಯನ ಅಸ್ತಿತ್ವವೇ ಪ್ರಕೃತಿ ಮೇಲಿದೆ
ಡಾ.ಮಹಾಂತ ಶ್ರೀಗಳಿಂದ ಸಮಾಜದಲ್ಲಿ ದೊಡ್ಡ ಪರಿವರ್ತನೆ