ಗಂಗಾವತಿ ಕಂದಾಯ ಇಲಾಖೆಯಲ್ಲಿ ಗಣನೀಯ ಪ್ರಗತಿ- ತಹಸೀಲ್ದಾರ ವಿಶ್ವನಾಥ ಮುರುಡಿ

KannadaprabhaNewsNetwork |  
Published : Dec 30, 2023, 01:15 AM IST
ಫೋಟುಃ-28ಜಿಎನ್ ಜಿ5- ಗಂಗಾವತಿ ತಹಸೀಲ ಕಚೇರಿಯಲ್ಲಿ 6 ತಿಂಗಳ ಪ್ರಗತಿ ಕುರಿತು ತಹಸೀಲ್ದಾರವಿಶ್ವನಾಥ ಮುರುಡಿ ವಿವರ ನೀಡಿದರು. | Kannada Prabha

ಸಾರಾಂಶ

ವಿವಾದಾಸ್ಪದ (ಆರ್‌ಆರ್‌ಟಿ) ಪ್ರಕರಣಗಳಿಗೆ ಸಂಬಂಧಿಸಿದಂತೆ 159 ಅರ್ಜಿಗಳು ಬಂದಿದ್ದು, 140 ವಿಲೇವಾರಿ ಆಗಿವೆ. 19 ಬಾಕಿ ಉಳಿದಿವೆ. ಸಾರ್ವಜನಿಕರ ರುದ್ರಭೂಮಿಗೆ ಸಂಬಂದಿಸಿದಂತೆ 63 ಅರ್ಜಿಗಳು ಬಂದಿದ್ದು, 63 ಇತ್ಯರ್ಥವಾಗಿವೆ.

ಗಂಗಾವತಿ: ಕಳೆದ ಏಳು ತಿಂಗಳಲ್ಲಿ ತಾಲೂಕಿನ ಸಾರ್ವಜನಿಕರಿಗೆ ವಿವಿಧ ಸೇವೆ ಒದಗಿಸಿ ಕಂದಾಯ ಇಲಾಖೆ ಗಣನೀಯ ಪ್ರಗತಿ ಸಾಧಿಸಿದೆ ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ತಿಳಿಸಿದರು.ತಹಸೀಲ ಕಚೇರಿಯಲ್ಲಿ ವಿವರ ನೀಡಿದ ಅವರು, ಎನ್‌ಪಿಸಿಐ ಪ್ರಕರಣಗಳಲ್ಲಿ 2456 ಅರ್ಜಿಗಳು ಬಂದಿವೆ. ಅದರಲ್ಲಿ 2130 ಪ್ರಕರಣ ವಿಲೇವಾರಿವಾಗಿವೆ. 326 ಪ್ರಕರಣ ಬಾಕಿ ಇವೆ ಎಂದರು.ಆಧಾರ್ ನಕಲಿ ಪ್ರಕರಣಗಳಿಗೆ ಸಂರ್ಧಿಸಿದಂತೆ 440ರಲ್ಲಿ 409 ಇತ್ಯರ್ಥಗೊಳಿಸಲಾಗಿದೆ. 31 ಮಾತ್ರ ಬಾಕಿ ಇವೆ. ಅದರಂತೆ ಭೌತಿಕ ಪರಿಶೀಲನೆಯಲ್ಲಿ 2942 ಅರ್ಜಿಗಳಿದ್ದು, 2297 ವಿಲೇವಾರಿ ಆಗಿದೆ. 645 ಬಾಕಿ ಇವೆ.ಇಎಂಓ (ಅಂಚೆಕಚೇರಿ) 397 ಅರ್ಜಿಗಳಿದ್ದು, 387 ವಿಲೇವಾರಿವಾಗಿವೆ. ಅಟಲ್ ಜೀ ಜನ ಸ್ನೇಹಿ ಕೇಂದ್ರದ ವಿವಿಧ ಸೇವೆಗಳಲ್ಲಿ 7953 ಅರ್ಜಿಗಳನ್ನು ಸ್ವೀಕೃತಿಗೊಳಿಸಲಾಗಿದೆ. 7943 ಅರ್ಜಿಗಳು ವಿಲೇವಾರಿ ಆಗಿವೆ. 10 ಬಾಕಿ ಇವೆ. ಸಾಮಾಜಿಕ ಭದ್ರತಾ ಯೋಜನೆಯಲ್ಲಿ 1971 ಅರ್ಜಿ ಸ್ವೀಕೃತವಾಗಿದ್ದು, 1971 ವಿಲೇವಾರಿ ಆಗಿವೆ. ಭೂಮಿ ಕೇಂದ್ರದ ಸೇವೆಗಳಲ್ಲಿ 2604 ಅರ್ಜಿಗಳು ಸ್ವೀಕೃತವಾಗಿವೆ. 2543 ಅರ್ಜಿಗಳು ವಿಲೇವಾರಿವಾಗಿವೆ. 61 ಬಾಕಿ ಇವೆ. ಅದರಂತೆ ಪಹಣಿ ತಿದ್ದುಪಡಿ ಅರ್ಜಿಗಳು 906 ಅರ್ಜಿಗಳು ಸ್ವೀಕೃತವಾಗಿದ್ದು, 254 ವಿಲೇವಾರಿ ಆಗಿವೆ. 652 ಬಾಕಿ ಇವೆ ಎಂದರು.ವಿವಾದಾಸ್ಪದ (ಆರ್‌ಆರ್‌ಟಿ) ಪ್ರಕರಣಗಳಿಗೆ ಸಂಬಂಧಿಸಿದಂತೆ 159 ಅರ್ಜಿಗಳು ಬಂದಿದ್ದು, 140 ವಿಲೇವಾರಿ ಆಗಿವೆ. 19 ಬಾಕಿ ಉಳಿದಿವೆ. ಸಾರ್ವಜನಿಕರ ರುದ್ರಭೂಮಿಗೆ ಸಂಬಂದಿಸಿದಂತೆ 63 ಅರ್ಜಿಗಳು ಬಂದಿದ್ದು, 63 ಇತ್ಯರ್ಥವಾಗಿವೆ. ಎಫ್ಐಡಿ ಪ್ರಕರಣಗಳು ಸಂಬಂಧಿಸಿದಂತೆ 37809 ಅರ್ಜಿಗಳು ಬಂದಿದ್ದು, 31550 ವಿಲೇವಾರಿ ಆಗಿವೆ. 6259 ಬಾಕಿ ಉಳಿದಿವೆ ಎಂದರು.ಈ ಸಂದರ್ಭದಲ್ಲಿ ಗ್ರೇಡ್-1 ತಹಸೀಲ್ದಾರ ಮಹಾಂತಗೌಡ, ಶಿರಸ್ತೇದಾರ ರವಿಕುಮಾರ ನಾಯ್ಕವಾಡಿ, ಉಪ ತಹಸೀಲ್ದಾರ ಮೆಹಬೂಬ ಅಲಿ, ರೆಹಮಾನಸಾಬ, ಕಂದಾಯ ನಿರೀಕ್ಷಕ ಮಂಜುನಾಥಸ್ವಾಮಿ, ಶ್ರೀಕಂಠ, ದುರಗೇಶ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌