ಕೊಪ್ಪಳ:
ಮೈನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೦೪-೦೫ನೇ ಸಾಲಿನ ೮ನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಷ್ಯರನ್ನು ಯಾರು ಕೈಬಿಟ್ಟರೂ ಗುರು ಕೈಬಿಡಲಾರ. ಎಂತಹ ಸಂದರ್ಭದಲ್ಲಿಯೂ ಅವನಿಗೆ ಮಾರ್ಗದರ್ಶನ ಮಾಡಬಲ್ಲ. ಅಂತಹ ಮಹಾನ್ ಚೇತನಗಳು ಗುರುಗಳು. ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಪ್ರಬುದ್ಧ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಮಾತನಾಡಿ, ಗುರುವಿಗೆ ಸಂತೋಷವಾಗುವುದು ತನ್ನ ಕೈಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಬೆಳೆದಾಗ. ಅಂತಹ ಕೆಲಸ ನಿಮ್ಮಿಂದಾಗಬೇಕೆಂದರು.
ಶ್ರೀಗವಿಮಠದ ಶಾಖಾಮಠವಾದ ಹೂವಿನಹಡಗಲಿಯ ಡಾ. ಹಿರಿಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ೨೦೦೪-೦೫ನೇ ಸಾಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಸವರಾಜಸ್ವಾಮಿ ಹಿರೇಮಠ, ಬಸವರಾಜ ಪಟ್ಟಣಶೆಟ್ಟಿ, ಸುಮತಿ, ವಿನೋದಾಬಾಯಿ, ಈರಣ್ಣ ಬಟಕುರ್ಕಿ, ವೀರಣ್ಣ ಹಮ್ಮಿಗಿ, ಸುರೇಶ ವಡ್ಡರ, ಯಮನೂರುಸಾಬ, ಹನುಮಂತಪ್ಪ ಮತ್ತು ರಾಗಿಣಿ ಅವರಿಗೆ ಗುರುಸಮರ್ಪಣೆ ಸಲ್ಲಿಸಲಾಯಿತು.