ಪರಿಶ್ರಮವಿದ್ದರೇ ಯಶಸ್ಸು ಸಾಧ್ಯ

KannadaprabhaNewsNetwork |  
Published : May 20, 2024, 01:30 AM IST
ವಿಜಯಪುರದಲ್ಲಿ ನ್ಯಾಯಾಧೀಶ ಸಂತೋಷ ಕುಂದರ್ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸೊನ್ನೆಯಿಂದಲೇ ಪರಿಶ್ರಮಿಸಿ ಆರಂಭಿಸಿದ ಕಾರ್ಯ 100ಕ್ಕೆ 100ರಷ್ಟು ಯಶಸ್ವಿ ಆಗಲು ಸಾಧ್ಯವಾಗುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸಂತೋಷ ಕುಂದರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸೊನ್ನೆಯಿಂದಲೇ ಪರಿಶ್ರಮಿಸಿ ಆರಂಭಿಸಿದ ಕಾರ್ಯ 100ಕ್ಕೆ 100ರಷ್ಟು ಯಶಸ್ವಿ ಆಗಲು ಸಾಧ್ಯವಾಗುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸಂತೋಷ ಕುಂದರ ಹೇಳಿದರು.

ನಗರದ ಕಾನೂನು ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ ವಿಜಯಪುರದಿಂದ ವರ್ಗಾವಣೆಯಾಗಿರುವ ನಿಮಿತ್ತ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ವಿವಿಧ ಕಾಯಕ ನಿರತರು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನೂರಕ್ಕೆ ನೂರರಷ್ಟು ಅದರಲ್ಲೇ ತಲ್ಲೀನರಾಗಿ ಶ್ರಮಿಸಿದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ನಾವು ಮಾಡುವ ಕೆಲಸ ಸಮಾಜಕ್ಕೆ ದಾರಿ ದೀಪವಾಗಬೇಕು ಎಂದರು.ವಿಜಯಪುರ ಜಿಲ್ಲಾ ಕಾನೂನು ಸೇವ ಪ್ರಾಧಿಕಾರಕ್ಕೆ ಗೌರವಧನವಿಲ್ಲದೇ ಉಚಿತವಾಗಿ ಕಾನೂನು ಸೇವೆ ಮಾಡುವ ಜನಸ್ನೇಹಿ ವಕೀಲರನ್ನು ನನ್ನ ಕಾರ್ಯಾವಧಿಯಲ್ಲಿ ನೇಮಿಸಿದ್ದು ಮೊದಲಾದ ಕಾರ್ಯ ಕೈಗೊಂಡಿದ್ದು ಸಂತೋಷ ತಂದಿದೆ. ಜಿಲ್ಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಜನಸ್ನೇಹಿ ಆಗಿ ಕಾರ್ಯ ನಿರ್ವಹಿಸಿದ್ದು ಜನರು ಸಹ ಉತ್ತಮ ಸಹಕಾರ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ವಕೀಲರ ವಾದ ಮಂಡನೆ ಪ್ರಕರಣ ನಡೆಸುವ ಕಾರ್ಯ ವೈಖರಿ ಸಹ ಉತ್ತಮವಾಗಿತ್ತು ಎಂದರು.ಹಿರಿಯ ಶ್ರೇಣಿ ನ್ಯಾಯಾಧೀಶೆ ಕೆ.ಉಮಾ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ವಿಜಯಪುರಕ್ಕೆ ಬರುವಾಗ ಇಲ್ಲಿನ ಭಾಷೆ ಮತ್ತು ಜನರ ಕುರಿತು ಸ್ವಲ್ಪ ಆತಂಕ ಮನದಲ್ಲಿತ್ತು. ಆದರೆ ಇಲ್ಲಿ ಬಂದು ಮೂರು ವರ್ಷ ಸೇವೆ ಸಲ್ಲಿಸಿದ ನಂತರ ಇಲ್ಲಿನ ಜನರಲ್ಲಿ ನ್ಯಾಯದ ಬಗ್ಗೆ ನ್ಯಾಯಾಲಯದ ಬಗ್ಗೆ ಇರುವ ಗೌರವ ಹೆಮ್ಮೆ ಕಂಡು ನಮಗೆ ಇನ್ನು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನಭೃಂಗಿಮಠ ಮಾತನಾಡಿದರು. ಹಿರಿಯ ನ್ಯಾಯವಾದಿ ಆರ್.ಎಸ್. ನಂದಿ, ನ್ಯಾಯವಾದಿ ಲಾಹೋರಿ, ಬಸವರಾಜ ಮಠ, ಮಸೂತಿ, ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಯದ ಪ್ರಾಚಾರ್ಯ ಸುಷ್ಮಾ ದೇಸಾಯಿ, ಅಶೋಕ ಜೈನಾಪೂರ, ಕೆ.ಎಫ್. ಅಂಕಲಗಿ, ರಾಜು ಬಿದರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ