ಗ್ರೂಪ್ ಕಾಲ್ ತಂತ್ರಜ್ಞಾನ ಬಳಸಿ ಕೃಷಿಕರಿಗೆ ಮಾಹಿತಿ ಕಾರ್ಯಕ್ರಮ ಯಶಸ್ವಿ

KannadaprabhaNewsNetwork |  
Published : Jul 23, 2024, 12:34 AM IST
ರೈತರ ಪ್ರಶ್ನೆಗಳನ್ನು ಆಲಿಸಿ ಅವರ ಅನುಮಾನಗಳಿಗೆ ಉತ್ತರಿಸಿದರು. | Kannada Prabha

ಸಾರಾಂಶ

ಕಡೂರು, ಕಾಲ್ ಕಾನ್ಫರೆನ್ಸ್ ನಂತಹ ಒಂದು ಗ್ರೂಪ್ ಕಾಲ್ ಫೋನ್ ಕರೆಯಿಂದ ಏಕ ಕಾಲದಲ್ಲಿ ಸಾವಿರಾರು ರೈತರನ್ನು ತಲುಪುವ ನೂತನ ತಂತ್ರಜ್ಞಾನ ಬಳಸಿಕೊಂಡು ಕೃಷಿಕರಿಗೆ ಸರ್ಕಾರದ ಎಲ್ಲ ಸವಲತ್ತುಗಳ ಮಾಹಿತಿ ನೀಡುವ ಕಾರ್ಯಕ್ಕೆ ಕಡೂರು ಕೃಷಿ ಇಲಾಖೆ ಸಾಕ್ಷಿಯಾಯಿತು.

ರೈತರಿಗೆ ಮಾಹಿತಿ ತಿಳಿಸುವ ಜೊತೆಗೆ ರೈತರ ಪ್ರಶ್ನೆಗಳಿಗೆ ಉತ್ತರಿಸುವ ಕಾಲ್ ಕಾನ್ಫರೆನ್ಸ್

ಕಡೂರು ಕೃಷ್ಣಮೂರ್ತಿ,ಕನ್ನಡಪ್ರಭ ವಾರ್ತೆ, ಕಡೂರು

ಕಾಲ್ ಕಾನ್ಫರೆನ್ಸ್ ನಂತಹ ಒಂದು ಗ್ರೂಪ್ ಕಾಲ್ ಫೋನ್ ಕರೆಯಿಂದ ಏಕ ಕಾಲದಲ್ಲಿ ಸಾವಿರಾರು ರೈತರನ್ನು ತಲುಪುವ ನೂತನ ತಂತ್ರಜ್ಞಾನ ಬಳಸಿಕೊಂಡು ಕೃಷಿಕರಿಗೆ ಸರ್ಕಾರದ ಎಲ್ಲ ಸವಲತ್ತುಗಳ ಮಾಹಿತಿ ನೀಡುವ ಕಾರ್ಯಕ್ಕೆ ಕಡೂರು ಕೃಷಿ ಇಲಾಖೆ ಸಾಕ್ಷಿಯಾಯಿತು.ಸದಾ ಬರಗಾಲಕ್ಕೆ ತುತ್ತಾಗುವ ಕಡೂರು ತಾಲೂಕು ಬಯಲು ಪ್ರದೇಶ ವಾಗಿದ್ದು, ಏಕಕಾಲದಲ್ಲಿ ಎಲ್ಲವನ್ನು ಇಲಾಖೆ ಸಿಬ್ಬಂದಿಗಳೇ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಗ್ರೂಪ್ ಕಾಲ್ ನಿಂದ ರೈತರಿಗೆ ಸಮಗ್ರ ಮಾಹಿತಿ ಜೊತೆ, ಸರ್ಕಾರದ ಬೆಳೆ ವಿಮೆ, ಬೆಳೆ ಪರಿಹಾರ, ಸವಲತ್ತುಗಳ ವಿತರಣೆ ಸೇರಿದಂತೆ ಸಮಗ್ರ ಮಾಹಿತಿ ತಿಳಿಸಲಾಗುತ್ತಿದೆ.ಸೋಮವಾರ ಕೃಷಿ ಸಹಾಯಕ ನಿರ್ದೇಶಕ ಅಶೋಕ್ ನೇತೃತ್ವದಲ್ಲಿ ಕಡೂರು ತಾಲೂಕಿನ ನೋಂದಾಯಿತ 34 ಸಾವಿರ ರೈತರಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3.30ರವರೆಗೆ ಸುಮಾರು 26,474 ಸಾವಿರ ರೈತರಿಗೆ ಮಾಹಿತಿ ತಿಳಿಸುವ ಜೊತೆಗೆ ರೈತರ ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯ ಕಚೇರಿಯಲ್ಲಿ ನಡೆಯಿತು. ಕಡೂರು ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ತಾಲೂಕು ಆಗಿದ್ದು, ತಾಲೂಕಿನ ಎಲ್ಲ ಗ್ರಾಮಗಳ ರೈತರನ್ನು ಭೇಟಿ ಮಾಡಿ ಮಾಹಿತಿ ತಿಳಿಸಲು ಕಷ್ಟವಾಗುತಿತ್ತು. ಈ ನೂತನ ಗ್ರೂಪ್ ಕಾಲ್ ತಂತ್ರಜ್ಞಾನದಿಂದ ಸರ್ಕಾರಿ ಸೌಲಭ್ಯಗಳನ್ನು ತಿಳಿಸಿ ಮತ್ತು ಅದನ್ನು ಪಡೆಯುವ ವಿವರಗಳು ಸಾವಿರಾರು ರೈತರನ್ನು ತಲುಪುತ್ತವೆ. ರೈತರ ಜೊತೆಗೆ ಗ್ರೂಪ್ ಕಾಲ್ ಸಂವಹನದಲ್ಲಿ ರೈತರ ಜೊತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಎಚ್.ಎಲ್. ಸುಜಾತಾ ಹಾಗೂ ಉಪ ನಿರ್ದೇಶಕರಾದ ಹಂಸವೇಣಿ ಕೂಡ ರೈತರ ಪ್ರಶ್ನೆಗಳನ್ನು ಆಲಿಸಿ ಅವರ ಅನುಮಾನಗಳಿಗೆ ಉತ್ತರಿಸಿದರು. ಈ ಕುರಿತು ಕೃಷಿ ಸಹಾಯಕ ನಿರ್ದೇಶಕ ಅಶೋಕ್, ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಮಾಹಿತಿ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ರೈತರನ್ನು ತಲುಪುವ ಪ್ರಯತ್ನ ಮಾಡುತ್ತಿ ದ್ದೇವೆ. ಇದರಿಂದ ಸಾವಿರಾರು ರೈತರಿಗೆ ಸರಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡುತಿದ್ದು ಇದು ಬಹಳಷ್ಟು ಪರಿಣಾಮಕಾರಿಯಾಗಿದೆ. ಹಿರಿಯ ಅಧಿಕಾರಿಗಳು ಕೂಡ ಸಂವಹನದಲ್ಲಿ ಭಾಗವಹಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಅಧಿಕಾರಿಗಳಿಂದಲೇ ನೇರ ಮಾಹಿತಿ ಪಡೆಯುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿದೆ.

ಬೆಳೆ ಸಮೀಕ್ಷೆ, ಬೆಳೆ ವಿಮೆ ಮತ್ತು ಕೃಷಿ ಭಾಗ್ಯ ಸಂಬಂಧ ರೈತರಿಗೆ ತಿಳಿಸಲಾಗುತ್ತಿದೆ. ವಿಮೆಯನ್ನು ರೈತರು ರೈತ ಸಂಪರ್ಕ ಕೇಂದ್ರ ಅಥವಾ ಬ್ಯಾಂಕುಗಳಿಗೂ ಕಟ್ಟಬಹುದು ಎಂಬ ಮಾಹಿತಿ ನೀಡಲಾಯಿತು. ಇಲಾಖೆ ಈ ರೈತ ಸ್ನೇಹಿ ಕಾರ್ಯ ವೈಖರಿ ಬಗ್ಗೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. 26, 474 ರೈತರು ಈ ಸಂವಹನದಲ್ಲಿ ಭಾಗವಹಿಸಿದ್ದು ಇಲಾಖೆ ಒಟ್ಟು ಏಳು ತಂಡಗಳು ರೈತರೊಂದಿಗೆ ಸಂವಹನ ನಡೆಸಿತು.

-- ಹೇಳಿಕೆ--ರೈತರಿಗೆ ಮಾಹಿತಿ ನೀಡಲು ಕೃಷಿ ಇಲಾಖೆ ಕೈಗೊಂಡಿರುವ ಇಂತಹ ಗ್ರೂಪ್ ಕಾಲ್ ನಿಂದ ರೈತರಿಗೆ ಸಮಗ್ರ ಮಾಹಿತಿ ದೊರಕಿಸುವ ವಿಶೇಷ ಕಾರ್ಯಕ್ರಮ. ಫೋನ್ ಕಾಲ್ ನಿಂದ ಈ ಅಧಿಕಾರಿಗಳೊಂದಿಗೆ ರೈತರು ಚರ್ಚಿಸುವ ನಿಟ್ಟಲ್ಲಿ ಸಾವಿರಾರು ರೈತರಿಗೆ ಎಲ್ಲ ರೀತಿಯ ಮಾಹಿತಿ ನೀಡುವ ಉಪಯೋಗವಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಿ ರೈತರನ್ನು ತಲುಪಬೇಕು.- ಶೆಟ್ಟಿಹಳ್ಳಿ ಮಲ್ಲಿಕಾರ್ಜುನ, ಪ್ರಗತಿಪರ ರೈತ. --ಬಾಕ್ಸ್ ಸುದ್ದಿಗೆ--ಒಂದು ಕಾಲ್ ನೂರಾರು ಪ್ರಯೋಜನ

ಒಂದು ಕಾಲ್ ನೂರಾರು ಪ್ರಯೋಜನ. ಈ ಗ್ರೂಪ್ ಕಾಲ್ ನಲ್ಲಿ ಬಹಳಷ್ಟು ಮುಖ್ಯವಾಗಿ ಸರಕಾರದ ಕೃಷಿ ಭಾಗ್ಯ, ಬೆಳೆ ವಿಮೆ, ಬೆಳೆ ಪರಿಹಾರಗಳ ಕುರಿತು ವ್ಯಾಪಕ ಪ್ರಚಾರದ ಜೊತೆ ಬೀಜ ಗೊಬ್ಬರ ಔಷಧಿ, ಕೃಷಿ ಹೊಂಡ, ಬೆಳೆಗಳ ಕುರಿತು ರೈತರು ಅನುಸರಿಸಬೇಕಾದ ಕ್ರಮಗಳು ಕೃಷಿ ಮಾಹಿತಿಗಳು, ಕೃಷಿ ಉಪಕರಣಗಳು, ಬಿತ್ತನೆ ಸೇರಿ ರೈತರೊಂದಿಗೆ ಅನೇಕ ಮಾಹಿತಿಗಳ ವಿನಿಮಯ ಹಾಗು ಚರ್ಚೆ ನಡೆಯಿತು.

22ಕೆಕೆಡಿಯು1.

22ಕೆಕೆಡಡಿಯು1ಎ. ಶೆಟ್ಟಿಹಳ್ಳಿ ಮಲ್ಲಿಕಾರ್ಜುನ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು