-ಸಿಂಧನೂರಿನ ಮಾರವಾಡಿಗಲ್ಲಿಯಲ್ಲಿ ಎರಡು ಮನೆಗಳು ಕಳ್ಳತನ ಪ್ರಕರಣ
----ಕನ್ನಡಪ್ರಭ ವಾರ್ತೆ ಸಿಂಧನೂರು
ಶಹರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿ ಅವರು ಕಾರ್ಯಚರಣೆ ಮಾಡುವ ಮೂಲಕ ಕಳ್ಳತನದ 90 ಗ್ರಾಂ ಚಿನ್ನ ಮತ್ತು 1368 ಗ್ರಾಂ.ಬೆಳ್ಳಿ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ನಗರದ ಮಾರವಾಡಿ ಗಲ್ಲಿಯಲ್ಲಿ ನ.7 ರಂದು ಎರಡು ಮನೆಗಳಲ್ಲಿ ಬಂಗಾರ ಹಾಗೂ ಬೆಳ್ಳಿಯ ಆಭರಣಗಳ ಕಳ್ಳತನ ನಡೆದ ಹಿನ್ನೆಲೆಯಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಹರ್ ಠಾಣೆ ಇನ್ಸಪೆಕ್ಟರ್ ದುರುಗಪ್ಪ ಡೊಳ್ಳಿನ್ ಅವರ ನೇತೃತ್ವದಲ್ಲಿ ಸಿಬ್ಬಂದಿ ವಿಶೇಷ ತಂಡ ರಚಿಸಲಾಗಿತ್ತು. ನ.13 ರಂದು ಬೆಗಿನ ಜಾವ ಗಂಗಾವತಿ ರಸ್ತೆಯ ವಿನಯ್ ರೆಸಿಡೆನ್ಸಿ ಕ್ರಾಸ್ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತಿದ್ದ ಆರೋಪಿ ಮಸ್ತಾನ್ ಅಲಿಯಾಸ್ ಮಚ್ಚು ಚಾಂದಪಾಷ ಎಂಬಾತನನ್ನು ಬಂಧಿಸಿ ಕಳ್ಳತನದ ಎರಡು ಪ್ರಕರಣಗಳಿಗೆ ಸಂಬAಧಿಸಿದ 720320 ಬೆಲೆ ಬಾಳುವ 90.04 ಗ್ರಾಂ ಚಿನ್ನದ ಆಭರಣ, 1,27,224 ರೂಪಾಯಿ ಮೌಲ್ಯದ 1368 ಗ್ರಾಂ ಬೆಳ್ಳಿ ಆಭರಣ, 9,200 ರೂಪಾಯಿ ಅಂದಾಜು ಮೌಲ್ಯದ ರಿಯಲ್ ಮಿ ಮೊಬೈಲ್ ಹೀಗೆ ಒಟ್ಟು 8,56,744 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅತ್ಯಂತ ತ್ವರಿತ ಗತಿಯಲ್ಲಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ವಿಶೇಷ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.
ವಿಶೇಷ ತಂಡದಲ್ಲಿ ಸಬ್ ಇನ್ಸಪೆಕ್ಟರ್ ಬಸವರಾಜ, ಬೆಟ್ಟಯ್ಯ, ಸಿಬ್ಬಂದಿ ಸಂಗನಗೌಡ, ಶರಣರೆಡ್ಡಿ, ಆದಯ್ಯ, ಸಿದ್ದಪ್ಪ, ಖಲಿಲಪಾಷ, ಶರಣಬಸವ ಇದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.----------------
ಫೋಟೋ:13ಕೆಪಿಎಸ್ಎನ್ಡಿ4: ಸಿಂಧನೂರಿನ ಮಾರವಾಡಿಗಲ್ಲಿಯಲ್ಲಿ ಎರಡು ಮನೆಗಳು ಕಳ್ಳತನವಾಗಿದ್ದ ಪ್ರಕರಣವನ್ನು ಶಹರ ಠಾಣೆಯ ಇನ್ಸಪೆಕ್ಟರ್ ದುರುಗಪ್ಪ ಡೊಳ್ಳಿನ್ ನೇತೃತ್ವದಲ್ಲಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದೆ.